ಯುವತಿ ನಿಮ್ಮನ್ನು ಇಷ್ಟ ಪಡ್ತಾ ಇದ್ದಾರೆ ಅಂತ ಸೂಚಿಸುವ 8 ಲಕ್ಷಣಗಳು ಯಾವುದು ಗೊತ್ತಾ

ಯುವತಿ ನಿಮ್ಮನ್ನು ಇಷ್ಟ ಪಡ್ತಾ ಇದ್ದಾರೆ ಅಂತ ಸೂಚಿಸುವ 8 ಲಕ್ಷಣಗಳು ಯಾವುದು ಗೊತ್ತಾ

ಪ್ರೀತಿಯಲ್ಲಿ ಬಿದ್ದವರ ವರ್ತನೆಗಳಲ್ಲಿ ಕೆಲವು ಸಾಮಾನ್ಯ ಲಕ್ಷಣಗಳು ಇವೆ ಅದನ್ನು ಕೊಡ ನೀವು ಗುರುತಿಸಿ ಈ ಸಣ್ಣ ಭಾವನೆಯನ್ನು ನೀವು ಗಮನಿಸಿ ತನ್ನನ್ನು ಪ್ರೀತಿ ಮಾಡುವವರ ಜೊತೆ ಇದ್ದಾಗ ತಮ್ಮ ಬಾಳು ಇನ್ನೂ ಸುಂದರ ಆಗಲಿದೆ ಎಂದು ಹೇಳಬಹುದು. ಆದ್ರೆ ಕೆಲವ್ರು ಇಬ್ಬರಲ್ಲಿ ಪರಸ್ಪರ ಪ್ರೀತಿ ಇದ್ದರೂ ಕೊಡ ಸ್ನೇಹದ ಹಿಂಜರಿಕೆ ಅವರಿಬ್ಬರ ಪ್ರೀತಿಯನ್ನು ಬಲಿ ತೆಗೆದುಕೊಂಡಿರುವ ಸಾಕಷ್ಟು ಉದಾಹರಣೆಗಳು ನಮ್ಮಲ್ಲಿ ಇವೆ. ಇನ್ನೂ ಪ್ರೀತಿ ಮಾಡುವವರು ನಮ್ಮ ಮಾತುಗಳು, ಕೆಲಸಗಳು, ಮತ್ತು ಹವ್ಯಾಸಗಳ ಕಡೆ ಹೆಚ್ಚು ಗಮನ ಕೊಡುತ್ತಾರೆ. ನಮ್ಮ ಎದುರಿನಲ್ಲಿ ಹೆಚ್ಚು ನಗುತ್ತಾರೆ, ಸಂತೋಷವನ್ನು ವ್ಯಕ್ತಪಡಿಸುತ್ತಾರೆ. ಈ ಖುಷಿ ಅವ್ರ ಮುಖದಲ್ಲಿ ಹಾಗೂ ಕಣ್ಣಿನಲ್ಲಿ ವ್ಯಕ್ತವಾಗಿತ್ತಿರುತ್ತದೆ. ನಮ್ಮ ಕಣ್ಣುಗಳ ಕಡೆ ಹೆಚ್ಚು ನೋಡುತ್ತಾರೆ, ಕಣ್ಣಿನ ಸಂಪರ್ಕವನ್ನು ಇಟ್ಟುಕೊಳ್ಳುತ್ತಾರೆ. 

ನಮ್ಮ ಭಾವನೆಗಳನ್ನು, ಅಗತ್ಯಗಳನ್ನು, ಮತ್ತು ಇಚ್ಛೆಗಳನ್ನು ಅವಲೋಕಿಸುತ್ತಾರೆ. ನಮಗೆ ಬೆನ್ನು ತಟ್ಟುವುದು, ಕೈ ಹಿಡಿಯುವುದು, ಅಥವಾ ನಮಗೆ ಹತ್ತಿರ ಬರುವ ಮೂಲಕ ಶಾರೀರಿಕ ಸಂಪರ್ಕವನ್ನು ಸ್ಥಾಪಿಸಲು ಪ್ರಯತ್ನಿಸುತ್ತಾರೆ. ನಮ್ಮ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಪ್ರಶ್ನೆಗಳನ್ನು ಕೇಳುತ್ತಾರೆ, ನಮ್ಮ ಜೀವನದ ವಿವರಗಳನ್ನು ತಿಳಿಯಲು ಇಚ್ಛಿಸುತ್ತಾರೆ. ನಮ್ಮ ಕಡೆ ಹೆಚ್ಚು ಕಾಳಜಿ ತೋರಿಸುತ್ತಾರೆ, ನಮ್ಮ ಅನುಕೂಲಕ್ಕಾಗಿ ಕಷ್ಟವನ್ನು ಸಹಿಸಿಕೊಳ್ಳುತ್ತಾರೆ. ನಮ್ಮ ಜೊತೆ ಹೆಚ್ಚು ಸಮಯ ಕಳೆಯಲು ಪ್ರಯತ್ನಿಸುತ್ತಾರೆ, ವಿಶೇಷವಾಗಿ ಯಾರೂ ಇರದಂತೆ. ಮೆಸೇಜ್, ಕರೆ ಅಥವಾ ಇತರ ಮಾಧ್ಯಮಗಳ ಮೂಲಕ ನಮ್ಮ ಜೊತೆ ಸಂಪರ್ಕದಲ್ಲಿರುತ್ತಾರೆ. ನಾವು ಯಾವ ಸಹಾಯವನ್ನು ಕೇಳಿದರೂ ಸಹಿಸಲು ತಕ್ಷಣ ಮುಂದಾಗುತ್ತಾರೆ.ಈ ಲಕ್ಷಣಗಳು ವ್ಯಕ್ತಿತ್ವ, ಪರಿಸ್ಥಿತಿ, ಮತ್ತು ಸಂಬಂಧದ ನಂಟುಗಳ ಆಧಾರದ ಮೇಲೆ ಬದಲಾವಣೆಗೊಳ್ಳಬಹುದು. 

ನಮ್ಮನ್ನು ಇಷ್ಟಪಡುವವರು ಪ್ರೀತಿಯನ್ನು ಹೇಳಲು ಹಿಂದೆ ಸರಿಯಲು ಹಲವಾರು ಮುಕ್ಯ ಕಾರಣ ತನ್ನ ಸ್ನೇಹವನ್ನು ಕಳೆದುಕೊಳ್ಳುತ್ತೇವೆ ಎಂಬ ಭಯ. ನಿರಾಕರಣೆಯ ಭಯ ಅಥವಾ ನಮ್ಮ ಪ್ರತಿಕ್ರಿಯೆ ಬಗ್ಗೆ ಅನುಮಾನ. ನಮ್ಮ ಭಾವನೆಗಳನ್ನು ಹೇಗೆ ಒಪ್ಪಿಕೊಳ್ಳುತ್ತೇವೆ ಎಂಬ ಅಜ್ಞಾನ. ತಮಗೆ ತಾವು ಲಭ್ಯವಿರುವುದರಲ್ಲಿ ಅನುಮಾನ. ದೋಷವಿಳಾಸದ ಭಯದಿಂದ ಬದಲಾಗುವ ಸಂಬಂಧ. ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸೂಕ್ತ ಸಮಯವಿಲ್ಲದೆ ಕಾಯುವುದು. ವೈಯಕ್ತಿಕ, ಪಾರಿವಾರಿಕ ಅಥವಾ ವೃತ್ತಿಪರ ಸಮಸ್ಯೆಗಳ ಹಿನ್ನಲೆಯಲ್ಲಿ.ಹಿಂದಿನ ದುಃಖಭರಿತ ಸಂಬಂಧಗಳ ಅನುಭವದಿಂದಾಗಿ. ತಮ್ಮ ಸಾಮಾಜಿಕ ಅಥವಾ ಸಾಂಸ್ಕೃತಿಕ ಹಿನ್ನೆಲೆಯ ಅಡ್ಡಿ. ತಮ್ಮ ಭಾವನೆಗಳನ್ನು ಹೇಳಲು ಪ್ರಸ್ತಾವಿಸುವ ದಾರಿ ಅಥವಾ ಶೈಲಿಯ ಬಗ್ಗೆ ಅಜ್ಞಾತಿ. 

( video credit : CHARITRE )