ಯುವತಿಯ ಅಂದಕ್ಕೆ ಮರುಳಾಗಿ ಲಕ್ಷ ಲಕ್ಷ ಖರ್ಚು ಮಾಡಿದವನಿಗೆ ಮೂರು ನಾಮ ಹಾಕಿದ ಬೆಡಗಿ

ಯುವತಿಯ ಅಂದಕ್ಕೆ ಮರುಳಾಗಿ ಲಕ್ಷ ಲಕ್ಷ ಖರ್ಚು ಮಾಡಿದವನಿಗೆ ಮೂರು ನಾಮ ಹಾಕಿದ ಬೆಡಗಿ

ಹೌದು ಬೆಂಗಳೂರಿನಲ್ಲಿ ಒಂದು ವಿಚಿತ್ರ ಲವ್ ಸ್ಟೋರಿ ನಡೆದಿದೆ. ಈ ಲವ್ ಸ್ಟೋರಿ ನಿಜಕ್ಕೂ ನಿಮ್ಮನ್ನು ಕೂಡ ಬೆರಗಾಗುವಂತೆ ಮಾಡುತ್ತದೆ. ಈ ಪ್ರೀತಿ ಪ್ರೇಮ ವಯಸ್ಸಿನಲ್ಲಿ ಎಲ್ಲಾ ಮಾಮೂಲಿ. ಆಕರ್ಷಣೆಯನ್ನೇ ನಿಜವಾದ ಪ್ರೀತಿ ಎಂದು ಮೋಸ ಹೋದವರು ಕೆಲವರು ಇದ್ದಾರೆ. ಇನ್ನೊಂದು ಕಡೆ ಪ್ರೀತಿಯನ್ನೇ ನಿಜ ಪ್ರೀತಿ ಎಂದು ನಂಬಿ ಅಪಾರವಾಗಿ ಪ್ರೀತಿಸಿ, ಅದನ್ನೇ ಪೂಜಿಸಿ ಮದುವೆಯಾದವರು ಕೂಡ ಸಾಕಷ್ಟು ಜನರು ಇದ್ದಾರೆ. ಇಲ್ಲೊಬ್ಬ ಪಾಗಲ್ ಪ್ರೇಮಿ ಇದ್ದಾನೆ.. ಈತ ಮೂಲತಃ ತಮಿಳುನಾಡಿನವನು. ಜಯನಗರದಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಬೆಂಗಳೂರಿನಲ್ಲಿಯೇ ಒಂದು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಈತನಿಗೆ 40 ರಿಂದ 45,000 ಸಂಬಳ ತಿಂಗಳಿಗೆ ಇದ್ದು, ನನಗೆ ಮೋಸ ಮಾಡಿದ ಹುಡುಗಿಯ ಜೊತೆಗೆ ಮದುವೆ ಮಾಡಿಸಿ ಎಂದು ಇದೀಗ ಪೊಲೀಸರ ಬೆನ್ನು ಬಿದ್ದಿದ್ದಾನೆ ಎಂದು ತಿಳಿದುಬಂದಿದೆ.

ಹೌದು ತಾನು ಕೆಲಸ ಮಾಡುವ ಸ್ಥಳದಲ್ಲಿಯೇ ಒಬ್ಬ ಯುವತಿಯನ್ನು, ಅಂದದ ಚೆಲುವೆಯನ್ನ ನೋಡಿ ಪ್ರೀತಿ ಮಾಡಿದ್ದ. ಕೆಲಸ ಮಾಡುವ ಸಂದರ್ಭದಲ್ಲಿಯೇ ಇಬ್ಬರು ನಡುವೆ ಪ್ರೀತಿ ಹುಟ್ಟಿದೆ. ಈತ ಆ ಹುಡುಗಿಯನ್ನು ಪ್ರೀತಿ ಮಾಡಲು ಆರಂಭಿಸಿದ ದಿನದಿಂದಲೇ ಆಕೆಯ ಬೆಳಗಿನ ಟಿಫಿನ್ ನಿಂದ ಹಿಡಿದು ರಾತ್ರಿ ಊಟದವರೆಗೂ ಕೂಡ ಎಲ್ಲವನ್ನು ಈತನೇ ನೋಡಿಕೊಳ್ಳುತ್ತಿದ್ದನಂತೆ. ಇದೀಗ ಜಾತಿ ಹೆಸರು ಹೇಳಿ ನನ್ನ ಜೊತೆಗೆ ಆರಂಭದಲ್ಲಿ ಪ್ರೀತಿ ಮಾಡಿ ಬೇರೊಬ್ಬ ಹುಡುಗನ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾಳೆ, ಆಕೆಯನ್ನು ನನ್ನ ಜೊತೆ ಮದುವೆ ಮಾಡಿಸಿ, ಆಕೆಯನ್ನು ಪ್ರೀತಿ ಮಾಡಿದ ದಿನದಿಂದ ನಾನು ಲಕ್ಷ ಲಕ್ಷ ಹಣವನ್ನು ಆಕೆಗಾಗಿ ಖರ್ಚು ಮಾಡಿದ್ದೇನೆ, ಎಂದು ಬೆಂಗಳೂರಿನ ತಿಲಕ್ ನಗರದ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾನೆ ಈ ಭಾಗಲ್ ಪ್ರೇಮಿ.  

ಆ ಹುಡುಗಿಗೆ ಕಳುಹಿಸಿದ ಅಮೌಂಟ್ ಫೋನ್ ಪೇ ಸ್ಕ್ರೀನ್ ಶಾಟ್ ಫೋಟೋಗಳ ಪ್ರತಿತಿಯನ್ನ ಅತ್ತ ತಿಲಕ್ ನಗರದ ಪೊಲೀಸರಿಗೆ ನೀಡಿದ್ದು, ಜೊತೆಗೆ ತಾನು ಆಕೆಯೊಟ್ಟಿಗೆ ಮಾಡಿದ ಚಾಟಿಂಗ್ ಪ್ರತಿತಿಯನ್ನು ಕೂಡ ಪೊಲೀಸರ ಮುಂದೆ ಇಟ್ಟು ತನ್ನ ಪ್ರೀತಿಯ ಅಳಲು ತೋಡಿಕೊಂಡಿದ್ದಾನೆ ಯುವಕ. ಇಷ್ಟೆಲ್ಲ ಮಾಡಿ ನನ್ನ ಜೊತೆ ಪ್ರೀತಿ ಮಾಡಿದ್ದಾಳೆ, ಮದುವೆ ವಿಷಯ ಬಂದಾಗ ಜಾತಿ ನೆಪ ಹೇಳಿ ನನ್ನಿಂದ ದೂರ ಆಗುತ್ತಿದ್ದಾಳೆ, ನನಗೆ ನ್ಯಾಯ ಕೊಡಿಸಿ, ನಾನು ಲಕ್ಷ ಲಕ್ಷ ಹಣವನ್ನು ಈಕೆಗಾಗಿ ಖರ್ಚು ಮಾಡಿದ್ದೇನೆ ಎಂದು ಪೊಲೀಸರ ಮುಂದೆ ತನ್ನ ವಿಷಯವನ್ನೆಲ್ಲ ಹೇಳುತ್ತಿದ್ದಾನಂತೆ ಈ ತಮಿಳುನಾಡಿನ ಯುವಕ. ಆಕೆಯನ್ನು ತುಂಬಾ ಇಷ್ಟ ಪಡುತ್ತೇನೆ, ಇಷ್ಟೆಲ್ಲ ಖರ್ಚು ಮಾಡಿದ್ದೇನೆ, ಏನೇ ಆದರೂ ನನಗೆ ಆಕೆಯನ್ನು ಮದುವೆ ಆಗಬೇಕು ಎಂದೆನಿಸುತ್ತದೆ, ಆಕೆಯನ್ನ ನನಗೆ ಮದುವೆ ಮಾಡಿಸಿ ಎಂದು ಪೊಲೀಸರ ಬೆನ್ನು ಬಿದ್ದಿದ್ದಾನೆ ಎಂದು ತಿಳಿದುಬಂದಿದೆ. ಯುವಕನ ಕಥೆಯನ್ನು ಕೇಳಿ ಪೊಲೀಸರು ಕೂಡ ವಿಚಾರಣೆ ಮಾಡುತ್ತಿದ್ದಾರೆ ಎಂದು ಕೇಳಿ ಬಂದಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ..( video credit : news first kannada )