3 ಕೋಟಿಯ ನೋಟು ಹಾಗೂ 2 ಕೋಟಿಯ ನಾಣ್ಯ ಬಳಸಿಕೊಂಡು ಅಲಂಕಾರ ಮಾಡಿರುವ ಗಣೇಶ! ಎಲ್ಲಿ ಗೊತ್ತಾ?
ಹಬ್ಬಗಳ ವಿಚಾರದಲ್ಲಿ ಬಂದ್ರೆ ಎಲ್ಲರೂ ಕೂಡ ಎಲ್ಲಾ ಹಬ್ಬಗಳು ಆಚರಿಸುವುದಿಲ್ಲ. ಕೆಲವೊಬ್ಬರಿಗೆ ಒಂದೊಂದು ಹಬ್ಬ ಅನ್ವಯ ಆಗುವುದಿಲ್ಲ. ಆದರೆ ಇಡೀ ಭಾರತದ ದೇಶದ ಬೀದಿ ಬೀದಿಯಲ್ಲಿ ಕೂಡ ಆಚರಿಸುವ ಹಬ್ಬ ಎಂದರೆ ಅದು ಗಣೇಶ ಹಾಗೂ ಗೌರಿ ಚತುರ್ಥಿ. ಇನ್ನೂ ಈ ಒಂದು ಹಬ್ಬ ಕೇವಲ ಮನೆಗಳನ್ನು ಮಾತ್ರ ಸಿಂಗಾರ ಮಾಡುವುದಿಲ್ಲ ಬಿದಿಗಳೆ ಮಧುವಣ ಗಿತ್ತಿಯಂತೆ ಸಿಂಗಾರಗೊಂಡು ಇಡೀ ಬುದಿಯವರನ್ನು ಒಟ್ಟುಗೂಡಿಸಿ ಸಂಭ್ರಮಾಚರಣೆ ಮಾಡುವ ಹಬ್ಬ ಇದಾಗಿದೆ. ಇನ್ನೂ ಈಗ ವಿಭಿನ್ನ ರೀತಿಯಲ್ಲಿ ಗಣೇಶ ಹಾಗೂ ಗೌರಿಯ ಮೂರ್ತಿ ಬಂದಿರುವುದು ಅಲ್ಲದೆ ಪ್ರತಿ ವರ್ಷ ಕೂಡ ಗಣೇಶ ಹಾಗೂ ಗೌರಿ ಸ್ಥಾಪನೆ ಮಾಡಲು ವಿಭಿನ್ನತೆಯನ್ನು ಹುಡುಕಿ ಎಲ್ಲರ ಗಮನ ಸೆಳೆಯಲು ಪ್ರಯತ್ನ ಮಾಡುತ್ತಾರೆ. ಇದೀಗ ಅಂತದ್ದೇ ಸಾಲಿನಲ್ಲಿ ಬೆಂಗಳೂರಿನ ಜೇಪೀ ನಗರದಲ್ಲಿ ಪ್ರತಿಷ್ಠಾಪನೆ ಮಾಡಿರುವ ಗಣೇಶ ಹಾಗೂ ಗೌರಿ ಇದೀಗ ದಾಖಲೆಯನ್ನು ಬರೆದಿದೆ.
ಬೆಂಗಳೂರಿನ ಜೆಪಿ ನಗರದಲ್ಲಿ ಗಣೇಶ ಚತುರ್ಥಿ ಹಬ್ಬದ ಆಚರಣೆಗೆಂದು ಶ್ರೀ ಸತ್ಯಸಾಯಿ ಗಣಪತಿ ದೇವಾಲಯವನ್ನು ಐವತ್ತು ಲಕ್ಷ ನಾಣ್ಯಗಳು ಮತ್ತು ಒಂದು ಕೋಟಿಗೂ ಹೆಚ್ಚು ನೋಟುಗಳನ್ನು ಬಳಸಿಕೊಂಡು ಅಲಂಕಾರ ಮಾಡಲಾಗಿದೆ. ಅಲಂಕಾರಕ್ಕೆ ಹೂವು ಹಾಗೂ ಇತರೇ ಸಾಮಾನುಗಳನ್ನು ಬಳಸಿಕೊಂಡು ಅಲಂಕಾರ ಮಾಡುವ ಸಮಯದಲ್ಲಿ ಈ ದೇವಸ್ಥಾನದ ಮಂದಿ ನೋಟು ಹಾಗೂ ನಾಣ್ಯವನ್ನು ಬಳಸಿಕೊಂಡು ಮಾಡಿರುವುದು ಇಲ್ಲಿ ಎಲ್ಲರ ಗಮನ ಸೆಳೆದಿದೆ. ಈಗ ಈ ಅಲಂಕಾರದ ಗಣೇಶ ಹಾಗೂ ಗೌರಿ ಎಲ್ಲೆಡೆ ವೈರಲ್ ಆಗಿರುವುದು ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಕೊಡ ಹೆಚ್ಚಾಗಿ ಸದ್ದು ಮಾಡುತ್ತಿದೆ. ಈ ಅಲಂಕಾರಕ್ಕಾಗಿ 150 ವ್ಯಕ್ತಿಗಳನ್ನು ತಂಡವಾಗಿ ಮಾಡಲಾಗಿದೆ. ಇನ್ನೂ ಈ ಅಲಂಕಾರವನ್ನು ಪೂರ್ಣಗೊಳಿಸಲು ಒಂದು ತಿಂಗಳ ಕಾಲ ಕಾಲಾವಕಾಶ ತೆಗೆದುಕೊಳ್ಳಲಾಗಿದೆ.
ಇನ್ನೂ ಈ ಅಲಂಕಾರಕ್ಕೆ ₹ 3 ಕೋಟಿ ಮೌಲ್ಯದ ಹೆಚ್ಚಿನ ನೋಟುಗಳು ಹಾಗೂ ನಾಣ್ಯಗಳನ್ನು ಬಳಸಲಾಗಿದೆ. ಇನ್ನೂ ಈ ದೇವಸ್ಥಾನದಲ್ಲಿ ಪ್ರತಿ ವರ್ಷ ಗಣೇಶ ಪೂಜೆಯ ಸಂದರ್ಭದಲ್ಲಿ ವಿಭಿನ್ನ ರೀತಿಯ ಅಲಂಕಾರ ಮಾಡುವುದರಲ್ಲಿ ಪ್ರಸಿದ್ದಿಯನ್ನು ಪಡೆದಿದ್ದು. ಈ ಬಾರಿ ಕೂಡ ದೊಡ್ಡ ಮಟ್ಟದ ಹೆಸರು ಮಾಡುತ್ತಿದೆ. ಇನ್ನೂ ಈ ಅಲಂಕಾರಕ್ಕೆ ₹ 10, ₹ 20, ₹ 50 ರಿಂದ ₹ 500 ಮುಖಬೆಲೆಯ ನೋಟುಗಳು ಹಾಗೂ ನಾಣ್ಯಗಳನ್ನು ಬಲಿಸಿ ಅಲಂಕರಿಸಿದ್ದಾರೆ . ಈ ದೇವಸ್ಥಾನದಲ್ಲಿ ಈ ಅಲಕರಕ್ಕೆಂದು ₹ 2.18 ಕೋಟಿ ಮೌಲ್ಯದ ನೋಟುಗಳು ಹಾಗೂ ₹ 70 ಲಕ್ಷ ಮೌಲ್ಯದ ನಾಣ್ಯಗಳನ್ನು ಬಳಸಲಾಗಿದೆ. ಇದೀಗ ಜನರ ಪ್ರದರ್ಶನಕ್ಕೆ ಇಟ್ಟಿರುವ ಕಾರಣದಿಂದ ಸಿಸಿತಿವಿ ಕಣ್ಣಗಾವಲಿನಲ್ಲಿ ಇಟ್ಟಿದ್ದಾರೆ ಎನ್ನಲಾಗಿದೆ.