ನೀವು ಹೀಗೆ ಮಾಡಿ ನೋಡಿ ಯಾವ ಹುಡುಗಿ ಆದ್ರೂ ಖಂಡಿತವಾಗಿ ನಿಮ್ಮ ಪ್ರೀತಿಗೆ ಶರಣಾಗುತ್ತಾಳೆ..!

ನೀವು ಹೀಗೆ ಮಾಡಿ ನೋಡಿ  ಯಾವ ಹುಡುಗಿ ಆದ್ರೂ ಖಂಡಿತವಾಗಿ ನಿಮ್ಮ ಪ್ರೀತಿಗೆ ಶರಣಾಗುತ್ತಾಳೆ..!

ಹೌದು ಪುರಾತನ ಕಾಲದಿಂದಲೂ ಹೆಣ್ಣಿಗೆ ಅಪಾರವಾದ ಶಕ್ತಿ ಇದ್ದು, ಅವರಿಗೆ ಗೌರವ ಇದೆ. ಯಾವುದರಲ್ಲಿಯೂ ಹೆಣ್ಣು ಅಂದಿನಿಂದನಲೂ ಕೂಡ ಹಿಂದೆ ಉಳಿದಿಲ್ಲ, ಬದಲಿಗೆ ಇವತ್ತಿನ ದಿನಕ್ಕೂ ಹೆಣ್ಣೇ ಮುಂದಿದ್ದಾಳೆ ಪುರುಷನ ಸರಿಸಮಾನ ನಿಂತಿದ್ದಾಳೆ. ಆಕೆಯನ್ನು ಅರ್ಥ ಮಾಡಿಕೊಳ್ಳುವುದು ಕೂಡ ತುಂಬಾನೇ ಕಠಿಣದ ಕೆಲಸ. ಈ ನಮ್ಮ ಸೃಷ್ಟಿಗೆ ಸ್ತ್ರೀ ಮೂಲಕ ಕಾರಣ. ಪುರಾತನ ಕಾಲದಲ್ಲಿ ಹೆಚ್ಚು ಗೌರವ ಆಕೆಗೆ ಇದೆ. ಇತ್ತೀಚಿನ ದಿನಕ್ಕೂ ಕೂಡ ಅದು ಸಿಗುತ್ತಿದೆ..ಆದರೆ ತುಂಬಾನೇ ಕಡಿಮೆ ಎನ್ನಬಹುದು.. ನೀವು ಒಂದು ಹುಡುಗಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡುತ್ತಿದ್ದರೆ, ಆಕೆಯೂ ನಿಮ್ಮನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಪ್ರಯತ್ನ ಪಡುತ್ತಿದ್ದಾಳೆ ಅಂದ್ರೆ, ಅಂತಹವರಿಗೆ ಈ ಲೇಖನ ಉಪಯುಕ್ತ ಆಗಲಿದೆ ಸ್ನೇಹಿತರೆ.

ಹೌದು ಮೊದಲಿಗೆ ಮಹಿಳೆಯ ಮನಸ್ಸನ್ನು ಅರ್ಥ ಮಾಡಿಕೊಳ್ಳಬೇಕು. ಆಕೆಯ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಅಪಾರ ಕಷ್ಟದ ಕೆಲಸ. ಇದು ಕೇವಲ ಮನುಷ್ಯರಿಗೆ ಮಾತ್ರವಲ್ಲದೆ ಸೃಷ್ಟಿಕರ್ತ ಬ್ರಹ್ಮ ದೇವರುಗಳಿಗೂ ಹೆಣ್ಣನ್ನು ಅರ್ಥ ಮಾಡಿಕೊಳ್ಳುವುದು ತುಂಬಾನೇ ಕಠಿಣದ ಕೆಲಸ ಆಗಿತ್ತು. ನಿಮ್ಮನ್ನ ಒಂದು ಹುಡುಗಿ ಇಷ್ಟ ಪಡಬೇಕು ಅಂದ್ರೆ, ನೀವು ಕೆಲವು ನಿಯಮಗಳನ್ನು ಪಾಲಿಸಲೆಬೇಕು. ಹುಡುಗಿ ಜೊತೆ ನೀವು ಇರುವಾಗ ಫೋನ್ ಬಳಕೆ ಮಾಡುವುದು ತಪ್ಪು.
ನಿಯಮಿತವಾಗಿ, ಅಗತ್ಯವಿದ್ದಲ್ಲಿ ಮಾತ್ರ ಫೋನ್ ಬಳಸಿ.

ಎರಡನೆಯದು, ಆಕೆಯ ಸೌಂದರ್ಯಕ್ಕೆ ಹೆಚ್ಚು ಮಾರುಹೋಗಿ ಆಕೆಯ ಸೌಂದರ್ಯವನ್ನೇ ಪ್ರತಿ ಬಾರಿ ಗಮನಿಸಬೇಡಿ, ಆಕೆಯ ದೇಹವನ್ನು ನೋಡುತ್ತಲೇ ಇರಬೇಡಿ, ಬದಲಿಗೆ ಆಕೆ ಸೌಂದರ್ಯವ ಹೊಗಳುತ್ತಾ ಕಣ್ಣಿನಲ್ಲಿ ಕಣ್ಣಿಟ್ಟು ಮಾತನಾಡಲು ಪ್ರಯತ್ನಿಸಿ, ಆಗ ಆಕೆ ನಿಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತಾಳೆ. ಅವರ ಕನಸಿನ ಹುಡುಗ ನೀವಾಗುವುದು ಅಂತಹ ವೇಳೆ ಹೊರತು ಬೇರೆ ಸಮಯದಲ್ಲಿ ಅಲ್ಲ ಎಂಬುದ ನೀವು ಗಮನದಲ್ಲಿಡಿ..

ಹೆಣ್ಣಿಗೆ ತುಂಬಾನೇ ಸಂಕೋಚದ ಸ್ವಭಾವ ಕೆಲವರಲ್ಲಿ ಇರುತ್ತದೆ. ಹೌದು ಅವರ ಸಂಕೋಚದ ಸ್ವಭಾವವನ್ನು ನೀವು ಅರ್ಥಮಾಡಿಕೊಳ್ಳಿ. ಅವರ ಇಷ್ಟ ಕಷ್ಟಗಳನ್ನು ಸಮಾಧಾನವಾಗಿ ಕೇಳಿ ಅವರ ಆಸೆಗಳನ್ನು ಪೂರೈಸಲು ಪ್ರಯತ್ನ ಪಡಿ. ಜೊತೆಗೆ ಅವರ ಮಾತಿಗೆ ಹೆಚ್ಚು ಒತ್ತು ಕೊಡಿ ಎಂದು ಹೇಳಬಹುದು. ಆಕೆಯ ಸೌಂದರ್ಯದ ಹೊಗಳಿಕೆ ನಿಯಮಿತವಾಗಿರಲಿ, ಪ್ರತಿ ಬಾರಿಯೂ ಅದೇ ಆದರೆ, ಅದು ಆಕೆಗೆ ನಾಟಕ ಎನಿಸುತ್ತದೆ. ಬೇರೆ ಏನೋ ಇವನ ಉದ್ದೇಶ ಇದೆ ಎನ್ನುವ ಅನುಮಾನ ಸಹ ಬರುತ್ತದೆ. ಅವರಿಗೆ ನಿಮ್ಮ ಮೇಲೆ ಹೆಚ್ಚು ಭಾವನೆಗಳು ಹುಟ್ಟುವುದನ್ನ ಈ ಕೆಲಸ ಅವರನ್ನ ಕುಗ್ಗಿಸಿ ಬಿಡುತ್ತದೆ.

ಹೆಣ್ಣಿಗೆ ಹೊರಗಿನ ಸಮಸ್ಯೆಗಳು ಕೂಡ ಹೆಚ್ಚು, ಆಕೆಯ ಕಷ್ಟದ ಸಂದರ್ಭದಲ್ಲಿ ನೀವು ಆಕೆಗೆ ಹೆಗಲಾಗಿ ಜೊತೆಗೆ ನಿಲ್ಲಲು ಪ್ರಯತ್ನಿಸಿ, ಆಕೆಯ ಮಾನಸಿಕ ಸಮಸ್ಯೆಗಳನ್ನು ಕೂಡ ಅರ್ಥೈಸಿಕೊಂಡು ಸಹಾಯ ಮಾಡುವ ಮನಸ್ಥಿತಿ ನಿಮ್ಮದಾಗಲಿ..ಆಕೆಗೆ ಆಗ ನಿಮ್ಮ ಮೇಲೆ ಹೆಚ್ಚು ನಂಬಿಕೆ ಬರುತ್ತದೆ.. ನನ್ನ ಫ್ಯೂಚರ್ ಹುಡುಗ ಹೀಗೆ ಇರಬೇಕು ಎನ್ನುವ ಆಸೆ ಆ ವೇಳೆಯೇ ಹಿಮ್ಮಡಿಯಾಗುವುದು ಎಂದು ಕೇಳಿ ಬಂದಿದೆ. ಆಕೆಯ ಸಲಹೆಗಳನ್ನು ಎಂದು ನಿರ್ಲಕ್ಷ ಮಾಡಬೇಡಿ ಗೆಳೆಯರೇ...ಅವಳ ಮಾತಿಗೂ ಪ್ರಾಮುಖ್ಯತೆ ನೀಡಿ, ಅವಳ ಒಳ್ಳೆಯತನದ ವ್ಯಕ್ತಿತ್ವ ಹಾಗೂ ಅವಳ ಒಳ್ಳೆಯ ಗುಣಗಳನ್ನು ಮಾತ್ರ ಹೆಚ್ಚಾಗಿ ಮಾತನಾಡಿ..ಪಾಸಿಟಿವ್ ವಿಷಯಗಳನ್ನು ಆಕೆಯ ಮುಂದೆಯೇ ಎತ್ತಿ ಹಿಡಿಯಿರಿ. ನೆಗೆಟಿವ್ ವಿಚಾರ ಇದ್ದಲ್ಲಿ ಸಮಯ ತೆಗೆದುಕೊಂಡು ಮುಂದೊಂದು ದಿನ ತಿಳಿಸುವ ಪ್ರಯತ್ನಪಡಿ. ಈ ಎಲ್ಲಾ ವಿಷಯಗಳನ್ನು ನೀವು ಹುಡುಗಿಯರ ಜೊತೆ ಇದ್ದಾಗ ಮಾಡಿ, ಅದೆಂತಹ ಸೌಂದರ್ಯವತಿ ಇದ್ದರೂ ನಿಮ್ಮ ಪ್ರೀತಿಗೆ ಆಕೆ ನಿಜಕ್ಕೂ ಶರಣಾಗುತ್ತಾಳೆ.. ಇನ್ನೂ ಸಾಕಷ್ಟು ವಿಷಯಗಳಿದ್ದು ಈ ಲೇಖನದ ಕೊನೆಯಲ್ಲಿರುವ ಒಂದು ವಿಡಿಯೋದಲ್ಲಿ ತಿಳಿಸಲಾಗಿದೆ..ಒಮ್ಮೆ ವಿಡಿಯೋ ನೋಡಿ, ವಿಡಿಯೋ ತುಂಬಾನೇ ಇನ್ಫಾರ್ಮೇಟಿಕ್ ಅನಿಸಿದರೆ ಶೇರ್ ಮಾಡಿ ಧನ್ಯವಾದಗಳು ( video credit : YOYO TV Kannada )..