ಈ ಐದು ಬೀಚ್​ಗಳಲ್ಲಿ ನೀವು ಬಟ್ಟೆ ಇಲ್ಲದೇ ಈಜಾಡ ಬಹುದು ಸುತ್ತಾಡಬಹುದು ಎಲ್ಲಿದೆ ನೋಡಿ

ಈ ಐದು ಬೀಚ್​ಗಳಲ್ಲಿ ನೀವು  ಬಟ್ಟೆ ಇಲ್ಲದೇ ಈಜಾಡ ಬಹುದು  ಸುತ್ತಾಡಬಹುದು ಎಲ್ಲಿದೆ ನೋಡಿ

ಹೌದು ಗೆಳೆಯರೇ ಈಗ ಬಿಸಿಲನ ಕಾಲ ಸೆಕೆ ತಡೆಯುವದಕ್ಕೆ ಆಗವುದಿಲ್ಲ .  ಎಲ್ಲರೂ ಸಮುದ್ರ ತೀರಕ್ಕೆ ಹೋಗಿ ಮನಸಾರೆ ಈಜಾಡ ಬೇಕು  ಎಂದು ಬಯಸುತ್ತಾರೆ . ಆದರೆ ಭಾರತದಲ್ಲಿ ಎಲ್ಲರೂ ಬಟ್ಟೆ ಹಾಕಿ ಕೊಂಡೆ ಈಜಾಡ ಬೇಕು   ಮತ್ತು ಸುತ್ತಾಡ ಬೇಕು . ಆದರೆ ಪ್ರಪಂಚದಲ್ಲಿ ಈ ಈ ಐದು ಬೀಚ್​ಗಳಲ್ಲಿ ನೀವು  ಬಟ್ಟೆ ಇಲ್ಲದೇ ಸುತ್ತಾಡಬಹುದು ಎಲ್ಲಿ ಅಂತೀರಾ ಇಲ್ಲಿದೆ ನೋಡಿ ಆ ಬೀಚ್ ಗಳ ವಿವರ . ಆದರೆ ನೀವು ಈ ಪ್ರದೇಶಕ್ಕೆ ಹೋದರೆ ನೀವು ಸಹ ಬಟ್ಟೆ ಇಲ್ಲದೆ ಓಡಾಡಬೇಕುಗತ್ತೆ  


1 ) ಹಾಲೋವರ್ ಬೀಚ್, ಮಿಯಾಮಿ, ಫ್ಲೋರಿಡಾ

ಮಿಯಾಮಿಯಲ್ಲಿ ಬೆತ್ತಲೆಯಾಗಲು ಬಯಸುವಿರಾ? ಹಾಲೋವರ್ ಬೀಚ್‌ಗೆ ಹೋಗಿ ಮತ್ತು ನಿಮ್ಮ ಫ್ಯಾಂಟಸಿಯನ್ನು ಜೀವಿಸಿ. ಫ್ಲೋರಿಡಾದಲ್ಲಿನ ಈ ಸರ್ಕಾರ-ಅನುಮೋದಿತ ನಗ್ನ ಬೀಚ್ ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಮತ್ತು ಬೀಚ್ ಉತ್ಸಾಹಿಗಳನ್ನು ಆಕರ್ಷಿಸುತ್ತದೆ ಮತ್ತು ದಾಖಲೆಗಳ ಪ್ರಕಾರ, ಪ್ರತಿದಿನ 7,000 ಕ್ಕೂ ಹೆಚ್ಚು ಸಂದರ್ಶಕರು ಇಲ್ಲಿಗೆ ಬರುತ್ತಾರೆ. ಏಕೆ ಎಂದು ನೀವು ಊಹಿಸಬಹುದು.

 2) ವಲಾಲ್ಟಾ ಬೀಚ್

ಕ್ರೊಯೇಷಿಯಾದ ವಲಾಲ್ಟಾ ತುಂಬಾ ಸ್ವಚ್ಛವಾದ ಕಡಲತೀರವಾಗಿದ್ದು, ಇದು ಸೂಕ್ಷ್ಮ ಮರಳಿನಿಂದ ಕೂಡಿದ್ದು ಅತ್ಯಾಕರ್ಷಕ ಸೌಂದರ್ಯವನ್ನು ಹೊಂದಿದೆ. ಈ ಬೀಚ್​ಗೆ ಹೆಚ್ಚಿನ ಸಂಖ್ಯೆಯಲ್ಲಿ ಯುರೋಪಿನ ಪ್ರವಾಸಿಗರು ಭೇಟಿ ನೀಡುತ್ತಾರೆ. ಯುರೋಪ್ ಅಲ್ಲದೆ ಜಗತ್ತಿನ ವಿವಿಧ ದೇಶಗಳ ಪ್ರವಾಸಿಗರು ಇಲ್ಲಿಗೆ ಬಂದು ಬಟ್ಟೆ ಇಲ್ಲದೆ ಸಮುದ್ರದಲ್ಲಿ ಮೋಜು ಮಸ್ತಿ ಮಾಡುತ್ತಾರೆ. ಇಲ್ಲಿ ಯಾವುದೇ ಕಟ್ಟುಪಾಡುಗಳು ಇಲ್ಲ

 3 )ಲುಕಾಟ್ ಬೀಚ್

ಪ್ರಪಂಚದಾದ್ಯಂತ ಅನೇಕ ದೇಶಗಳು ನಗ್ನ ಕಡಲತೀರಗಳನ್ನು ಹೊಂದಿವೆ. ಅನೇಕ ಪ್ರವಾಸಿಗರು ಅಲ್ಲಿಗೆ ಹೋಗುತ್ತಾರೆ. ಬಟ್ಟೆ ಧರಿಸದೇ ಪೂರ್ಣವಾಗಿ ಬೆತ್ತಲೆ ದೇಹದಿಂದ ಅಲ್ಲಿಯ ಪ್ರಕೃತಿಯನ್ನು ಆನಂದಿಸುತ್ತಾರೆ. ಅಂತಹ ಒಂದು ಬೀಚ್ ಫ್ರಾನ್ಸ್‌ನ ಲುಕಾಟ್ ಬೀಚ್. ಮೆಡಿಟರೇನಿಯನ್ ಸಮುದ್ರದ ಪಕ್ಕದಲ್ಲಿರುವ ಈ ಕಡಲತೀರದಲ್ಲಿ ನಗ್ನತೆಗೆ ಯಾವುದೇ ಮಿತಿ ಇಲ್ಲ. ಇಲ್ಲಿ ಯಾರು ಬೇಕಾದರೂ ಬೆತ್ತಲೆಯಾಗಿ ತಿರುಗಾಡಬಹುದು

4) ಬೆಲ್ಲೆವ್ಯೂ ಬೀಚ್

ಡೆನ್ಮಾರ್ಕ್‌ನ ಬೆಲ್ಲೆವ್ಯೂ ಬೀಚ್ ಪ್ರಪಂಚದ ಪ್ರಸಿದ್ಧ ಬೆತ್ತಲೆ ಬೀಚ್‌ಗಳಲ್ಲಿ ಒಂದಾಗಿದೆ. ಪ್ರವಾಸಿಗರ ಸುರಕ್ಷತೆಗಾಗಿ ಇಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಅಲ್ಲದೆ ಕಡಲತೀರದಲ್ಲಿ ಯಾವುದೇ ವ್ಯಕ್ತಿ ಇತರರ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಅಷ್ಟೊಂದು ಭದ್ರತೆ ಇದೆ. ಇಲ್ಲಿ ಯಾರೂ ಬೇಕಾದ್ರೂ ಸ್ವಚ್ಛಂಧವಾಗಿ ವಿಹರಿಸಬಹುದು. ಆದರೆ ಅನ್ಯರಿಗೆ ಯಾವುದೇ ತೊಂದರೆ ಮಾಡುವಂತಿಲ್ಲ. ಇಲ್ಲಿಯ ಕಾನೂನುಗಳನ್ನು ಉಲ್ಲಂಘನೆ ಮಾಡಿದ್ರೆ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ

5 ) ಕಾರ್ನಿಗ್ಲಿಯಾ ಬೀಚ್

ಇಟಲಿಯು ಅನೇಕ ಕಡಲತೀರಗಳನ್ನು ಹೊಂದಿದೆ. ಆದರೆ ಕಾರ್ನಿಗ್ಲಿಯಾ ಬೀಚ್ ಅವುಗಳಲ್ಲಿ ಬಹಳ ಪ್ರಸಿದ್ಧವಾಗಿದೆ. ಏಕೆಂದರೆ ಇದು ಇಟಲಿಯ ಅತ್ಯಂತ ಹಳೆಯ ಮತ್ತು ಅತ್ಯಂತ ಪ್ರಸಿದ್ಧವಾದ ನಗ್ನ ಬೀಚ್ ಆಗಿದೆ. ಈ ಕಡಲತೀರವನ್ನು ತಲುಪಲು ಸುರಂಗದ ಮೂಲಕ ಹೋಗಬೇಕು. ಇಲ್ಲಿ ಅನೇಕ ಮಹಿಳೆಯರು ಟಾಪ್ ಲೆಸ್ ಆಗಿ ಸೂರ್ಯನ ಸ್ನಾನ ಮಾಡುವುದನ್ನು ಕಾಣಬಹುದು. ಯಾವುದೇ ನಿರ್ಬಂಧಗಳಿಲ್ಲ
ಕೇಪ್ ಡಿ ಎಗ್ಡೆ ಬೀಚ್

ಫ್ರಾನ್ಸ್‌ನ ಕ್ಯಾಪ್ ಡಿ’ಆಗ್ಡೆ ಬೀಚ್ ಪ್ರಪಂಚದಾದ್ಯಂತ ಬಹಳ ಪ್ರಸಿದ್ಧವಾಗಿದೆ. ಇದನ್ನು ಅತ್ಯಂತ ವಿಶೇಷವಾದ ನಗ್ನ ಬೀಚ್ ಎಂದು ಕರೆಯಲಾಗುತ್ತದೆ. ಈ ಬೀಚ್‌ಗೆ ಬಟ್ಟೆ ಇಲ್ಲದೆ ಹೋಗಬೇಕು. ಬೆತ್ತಲೆಯಾಗಿ ಹೋಗಿ ಅಲ್ಲಿ ಸ್ನಾನ ಮಾಡಬಹುದು. ಸ್ನಾನ ಮಾಡುವಾಗ ನಿಮ್ಮ ಮೈಮೇಲೆ ಬಟ್ಟೆ ಇದ್ದರೆ ಬೀಚ್ ಗಾರ್ಡ್ ಗಳು ನಿಮ್ಮನ್ನು ತಡೆಯಬಹುದು. ಆದ್ದರಿಂದ ನೀವು ವಿವಸ್ತ್ರಗೊಳ್ಳಬೇಕು

ಆದರೂ ಸಹ ನೀವು ಆ ದೇಶದ ಕಾನೂನನ್ನು ಪಾಲಿಸ ಬೇಕಾಗುತ್ತೆ ಮತ್ತು ಅಲ್ಲಿ ಫೋಟೋಗ್ರಫಿ  ನಿಷಿದ್ಧ ಮತ್ತು ದುರ್ವರ್ತನೆ ಸಲ್ಲದು 

​( video credit: Top5 )