ಖ್ಯಾತ ನಟಿಯ ಪತಿ ಕೇವಲ 30 ವರ್ಷಕ್ಕೆ ಸಾವು..! ಮದುವೆಯಾಗಿ ಒಂದೇ ವರ್ಷದಲ್ಲಿ ನೀರವ ಮೌನ
ಹೌದು ಮಾಧ್ಯಮ ಮೂಲಕ ಇದೀಗ ತಿಳಿದು ಬಂದಿರುವ ಮಾಹಿತಿ ಪ್ರಕಾರ ಸೀರಿಯಲ್ ನಟಿ ಒಬ್ಬರ ಪತಿ ಇಹಲೋಕ ತ್ಯಜಿಸಿದ್ದಾರೆ. ನಟಿ ಶೃತಿ ಷಣ್ಮುಗ ಪ್ರಿಯಾ ಎಂಬುವವರ ಪತಿಯೇ ಇದೀಗ ಇದ್ದಕಿದ್ದಂತೆ ಸಾವನ್ನಪ್ಪಿರುವುದು. ನಟಿ ಶ್ರುತಿ ಷಣ್ಮುಗ ಪ್ರಿಯಾರ ಪತಿ ಹೆಸರು ಅರವಿಂದ್ ಎಂದು ತಿಳಿದುಬಂದಿದ್ದು, ಈ ಅರವಿಂದ್ ಅವರಿಗೆ ಕೇವಲ 30 ವರ್ಷ ವಯಸ್ಸು. ಇಷ್ಟರಲ್ಲಿ ಅವರು ಎಲ್ಲರನ್ನು ಬಿಟ್ಟು ಹೋಗಿರುವುದು ತುಂಬಾ ವಿಷಾದನೀಯ ಸಂಗತಿಯೇ ಸರಿ. ಹೌದು ನಟಿ ಶ್ರುತಿ ಷಣ್ಮುಗ ಪ್ರಿಯಾ ಅವರು ಮದುವೆ ಆಗಿ ಕೇವಲ ಒಂದು ವರ್ಷ ಆಗಿತ್ತು. ಮೊನ್ನೆ ಅಷ್ಟೇ ಈ ಜೋಡಿ ತಮ್ಮ ವಿವಾಹದ ಮೊದಲ ವರ್ಷ ಆಚರಣೆ ಮಾಡಿಕೊಂಡಿತ್ತು.
ಆದರೆ ಮಾಡೆಲ್ ಅರವಿಂದ್ ಅವರು ಇದೀಗ ಧಿಡೀರ್ ಸಾವನ್ನಪ್ಪಿರುವುದು ಎಲ್ಲರಿಗೂ ಶಾಕ್ ತಂದಿದೆ.. ಅರವಿಂದ್ ಅವರು ಕೇವಲ 30 ವರ್ಷಕ್ಕೆ ಸಾವನ್ನಪ್ಪಿರುವುದು ನಿಜಕ್ಕೂ ಎಂತಹವರನ್ನು ಕಣ್ಣೀರು ಸುರಿಸುವಂತೆ ಮಾಡುತ್ತದೆ.. ಅರವಿಂದ್ ಅವರಿಗೆ ಮನೆಯಲ್ಲಿ ಇರುವ ವೇಳೆಯೆ ಹೃದಯಾಘಾತ ಆಗಿದ್ದು, ನಂತರದಲ್ಲಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದ್ರೂ ಸಹ ಅವರ ಜೀವ ಉಳಿದಿಲ್ಲ ಎಂದು ಮಾಹಿತಿ ಲಭ್ಯವಾಗಿದೆ.. ಅರವಿಂದ್ ಅವರು ವೃತ್ತಿಯಲ್ಲಿ ಒಬ್ಬ ಫಿಟ್ನೆಸ್ ಮಾಡೆಲ್ ಹಾಗೂ ಕೋಚ್ ಆಗಿ ಕೂಡ ಕೆಲಸ ಮಾಡುತ್ತಿದ್ದರಂತೆ. ನಟಿ ಶೃತಿ ಅವರು ಕೂಡ ನಾದಸ್ವರಂ, ಭಾರತಿ ಕನ್ನಮ್ಮ, ವಾಣಿ ರಾಣಿ, ಕಲ್ಯಾಣ ಪರಿಸು, ಪೊನ್ನಂಜಲ್ ಧಾರವಾಹಿಗಳಲ್ಲಿ ನಟನೆ ಮಾಡಿ ಗಮನ ಸೆಳೆದ ನಟಿ..ಈ ಜೋಡಿ ಕೇವಲ ಮದುವೆಯಾಗಿ ಒಂದು ವರ್ಷ ಆಗಿತ್ತು. ಇದೀಗ ನಟಿ ಶ್ರುತಿ ಅವರು ಅವರ ಪತಿಯನ್ನು ಕಳೆದುಕೊಂಡು ಒಬ್ಬಂಟಿಯಾಗಿದ್ದಾರೆ. ಈ ವಿಷಯ ಹೊರ ಬರುತ್ತಿದ್ದಂತೆ ಚಿತ್ರರಂಗದ ಗಣ್ಯರು ಮತ್ತು ಸೀರಿಯಲ್ ಆಪ್ತರು ಎಲ್ಲರೂ ಕೂಡ ಕಣ್ಣೀರು ಹಾಕುತ್ತಿದ್ದಾರೆ. ತುಂಬಾನೇ ಫಿಟ್ ಆಗಿದ್ದ ಅರವಿಂದ್ ಅವರು ಹೇಗೆ ಸಾವನ್ನಪ್ಪಿದ್ದರು ಎಂಬುದಾಗಿ ಚರ್ಚೆ ನಡೆಸುತ್ತಿದ್ದಾರೆ.
ಈ ಜೋಡಿ ನೋಡಲು ತುಂಬಾ ಮುದ್ದಾಗಿತ್ತು, ಅ ದೇವರಿಗೆ ಅದನ್ನು ಸಹಿಸಿಕೊಳ್ಳಲು ಆಗಲಿಲ್ಲವೇನೋ ಗೊತ್ತಿಲ್ಲ ಎಂಬುದಾಗಿ ಕೆಲವರ ಮಾತು..ಪ್ಯಾರಿಸ್ ನಲ್ಲಿ ಒಂದು ವರ್ಷ ಮರೆಯಲಾಗದ ನೆನಪು, ನನಸಾಗದ ಕನಸುಗಳ ಜೊತೆ ಸಾಯಬೇಕು ಎಂದು ಶೀರ್ಷಿಕೆ ನೀಡಿ ಫೋಟೋಗಳನ್ನ ಹಂಚಿಕೊಂಡಿದ್ದರು ಇದೆ ಅರವಿಂದ್. ಈ ಜೋಡಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಆಕ್ಟಿವ್ ಆಗಿದ್ದಂತಹ ಜೋಡಿ. ಹೆಚ್ಚು ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದ ಜೋಡಿ ಇದು. ಆದರೆ ಇದೀಗ ಧಿಡೀರ್ ಅರವಿಂದ್ ಅವರು ಹೃದಯಘಾತದಿಂದ ಸಾವನಪ್ಪಿರುವ ವಿಚಾರ ಎಂತಹ ಕಲ್ಲು ಮನಸ್ಸಿನ ವ್ಯಕ್ತಿಗಳನ್ನು ಕೂಡ ಕಣ್ಣೀರು ಹಾಕುವಂತೆ ಮಾಡುತ್ತದೆ..