ಖ್ಯಾತ ಇನ್ಸ್ಟಾಗ್ರಾಮ್‌ನಲ್ಲಿ ಕಂಟೆಂಟ್ ಕ್ರಿಯೇಟರ್ ಇನ್ನಿಲ್ಲ! ಯಾರು ಗೊತ್ತಾ?

ಖ್ಯಾತ ಇನ್ಸ್ಟಾಗ್ರಾಮ್‌ನಲ್ಲಿ ಕಂಟೆಂಟ್ ಕ್ರಿಯೇಟರ್ ಇನ್ನಿಲ್ಲ! ಯಾರು ಗೊತ್ತಾ?

ಇನ್ಸ್ಟಾಗ್ರಾಮ್‌ ಪ್ರಾಥಮಿಕವಾಗಿ ಫೋಟೋ ಮತ್ತು ವೀಡಿಯೊ ಹಂಚಿಕೆಯ ಮೇಲೆ ಕೇಂದ್ರೀಕರಿಸಿದ ಸಾಮಾಜಿಕ ಮಾಧ್ಯಮ ವೇದಿಕೆಯಾಗಿತ್ತು. ಆದರೆ ಬಳಕೆದಾರರು ಚಿತ್ರಗಳು ಮತ್ತು ವೀಡಿಯೊಗಳನ್ನು ಅಪ್‌ಲೋಡ್ ಮಾಡಬಹುದು, ಶೀರ್ಷಿಕೆಗಳನ್ನು ಸೇರಿಸಬಹುದು, ಫಿಲ್ಟರ್‌ಗಳನ್ನು ಬಳಸಬಹುದು ಮತ್ತು ಇಷ್ಟಗಳು, ಕಾಮೆಂಟ್‌ಗಳು ಮತ್ತು ನೇರ ಸಂದೇಶಗಳ ಮೂಲಕ ಇತರರೊಂದಿಗೆ ಸಂವಹನ ನಡೆಸಬಹುದು.  ಪ್ರಮುಖ ವೈಶಿಷ್ಟ್ಯಗಳಲ್ಲಿ ಸ್ಟೋರೀಸ್ (24 ಗಂಟೆಗಳ ನಂತರ ಕಣ್ಮರೆಯಾಗುವ ತಾತ್ಕಾಲಿಕ ಪೋಸ್ಟ್‌ಗಳು), IGTV (ಉದ್ದದ ವೀಡಿಯೊ ವಿಷಯ), ರೀಲ್ಸ್ (ಸಣ್ಣ, ತೊಡಗಿಸಿಕೊಳ್ಳುವ ವೀಡಿಯೊಗಳು) ಮತ್ತು ಶಾಪಿಂಗ್ (ವ್ಯಾಪಾರಗಳು ಉತ್ಪನ್ನಗಳನ್ನು ಪ್ರದರ್ಶಿಸಬಹುದು).  Instagram ಅನ್ನು ವೈಯಕ್ತಿಕ, ವೃತ್ತಿಪರ ಮತ್ತು ಮಾರ್ಕೆಟಿಂಗ್ ಉದ್ದೇಶಗಳಿಗಾಗಿ ವ್ಯಾಪಕವಾಗಿ ಬಳಸಲಾಗುತ್ತದೆ.  ಇದನ್ನು 2010 ರಲ್ಲಿ ಪ್ರಾರಂಭಿಸಲಾಯಿತು ಮತ್ತು 2012 ರಲ್ಲಿ ಫೇಸ್‌ಬುಕ್ (ಈಗ ಮೆಟಾ) ಸ್ವಾಧೀನಪಡಿಸಿಕೊಂಡಿತು. 


ಇದೀಗ ಇದೆ ಇನ್ಸ್ಟ ಮೂಲಕ ಸಾಕಷ್ಟು ಜನ ಹಣ ಗಳಿಕೆಯನ್ನು ಮಾಡುವ ವೇದಿಕೆಯನ್ನು ಕೊಡ ಸೃಷ್ಟಿ ಮಾಡಿಕೊಟ್ಟಿದೆ. ತನ್ನ ದಿನನಿತ್ಯದ ದಿನಚರಿ ಹಾಗೂ ಇತರೆ ಕ್ಷೇತ್ರದಲ್ಲಿ ಮನೋರಂಜನೆಯನ್ನು ನೀಡುವ ಮೂಲಕ ಸಾಮಾನ್ಯ ಜನರು ಈಗ ಲಕ್ಷಗಟ್ಟಲೆ ಹಣ ಮಾಡುತ್ತಿದ್ದಾರೆ. ಇನ್ನು ಇನ್ಸ್ಟಾಗ್ರಾಮ್‌ನಲ್ಲಿ ಸುಮಾರು 90 ಸಾವಿರ ಫಾಲೋವರ್ಸ್‌ಗಳನ್ನು ಹೊಂದಿದ್ದ ಅಶ್ವಿನಿ ಶೆಟ್ಟಿ ಅವರು ತಮ್ಮ ವಿಭಿನ್ನ ಕಂಟೆಂಟ್‌ಗಳ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದರು. ತಮ್ಮ ಕಂಟೆಂಟ್ ನಲ್ಲಿ ಕನ್ನಡ ಮತ್ತು ತುಳು ಎರಡೂ ಭಾಷೆಗಳಲ್ಲಿ ಕಂಟೆಂಟ್ ಮೂಲಕ @caboose_ballals ಎಂಬ ಇನ್ಸ್ಟಾಗ್ರಾಮ್‌ನಲ್ಲಿ ಖಾತೆಯಲ್ಲಿ ಸದಾ  ಸಕ್ರಿಯರಾಗಿ ಜನರಿಗೆ ಮನೋರಂಜನೆಯನ್ನು ನೀಡುತ್ತಿದ್ದರು.

ಆದರೆ ಜೂಲೈ 15ರಂದು ಎಲ್ಲರೂ ಮಲಗಿದ್ದ ವೇಳೆಯಲ್ಲಿ ತಮ್ಮ ಮನೆಯಲ್ಲಿ ನಡೆದ ಅಗ್ನಿ ಅವಘಡಕ್ಕೆ ಸಿಲುಕಿದ ಈ ಕುಟುಂಬವನ್ನು ನೆರೆಯ ಮನೆಯವರು ರಕ್ಷಣೆ ಮಾಡಿ ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇನ್ನು ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿದರೆ ಅಶ್ವಿನಿ ಶೆಟ್ಟಿ ಅವರಿಗೆ ಬಹಳ ಗಂಭೀರ ಗಾಯಗೊಂಡು ಚಿಕಿತ್ಸೆ ನೀಡಲಾಗುತ್ತಿತ್ತು ಆದರೆ ಇಂದು ಮಧ್ಯಾನ ಚಿಕಿತ್ಸೆ ಫಲಕಾರಿ ಆಗದೆ ಕೊನೆ ಉಸಿರು ಎಳೆದಿದ್ದು ಈಗ ಎಲ್ಲೆಡೆ ಸುದ್ದಿಯಾಗಿದೆ. ಈ ಘಟನೆಯಲ್ಲಿ ಭಾಗಿ ಆಗಿದ್ದ ಮಕ್ಕಳು ಮಾತ್ರ ಬಚಾವ್ ಆಗಿದ್ದು ಅಶ್ವಿನಿ ಅವರು ತಮ್ಮ ಕುಟುಂಬವನ್ನೂ ಬಿಟ್ಟು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಇನ್ನು ಇವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾವೆಲ್ಲರೂ  ಕೊಡ ಆಶಿಸೋಣ.