ಎಲ್ಲಾ ತಂದೆ ತಾಯಿಯರು ನೋಡ ಬೇಕಾದ ಕಿರು ಚಿತ್ರ! ಆ ಚಿತ್ರ ಯಾವುದು ಗೊತ್ತಾ?

ಎಲ್ಲಾ ತಂದೆ ತಾಯಿಯರು   ನೋಡ ಬೇಕಾದ   ಕಿರು ಚಿತ್ರ! ಆ ಚಿತ್ರ ಯಾವುದು ಗೊತ್ತಾ?

ಇತ್ತೀಚಿನ ದಿನಗಳಲ್ಲಿ ನಮ್ಮ ಕಾಲ ದೇಶ ಬೇಳೆದಷ್ಟು ಮನುಷ್ಯರ ಬೆಲೆ ಕಡಿಮೆಯಾಗುತ್ತಾ ಬರುತ್ತಿದೆ. ಈಗ ಮಾನವನ ಬದುಕು ಎನ್ನುವುದಕ್ಕಿಂತ ಮೆಷಿನ್ ನ ಯುಗ ಎಂದರೆ ತಪ್ಪಾಗಲಾರದು. ಇನ್ನೂ ಎಲ್ಲಾ ಕೆಲಸಗಳಿಗು ಕೂಡ ಮಿಷನ್ ಬಂದಿದೆ. ಹೀಗಿರುವ ಕಾಲದಲ್ಲಿ ಮನುಷ್ಯರ ಅವಶ್ಯಕತೆ ಕೂಡ ಕುಗ್ಗಿದೆ. ಇನ್ನೂ ಈ ಕಾರಣದಿಂದಲೇ ನಮ್ಮ ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಹೀಗೆ ಹೇಳುತ್ತಾ ಹೋದರೆ ಜನರ ಸಮಸ್ಯೆ ಬೆಳೆಯುತ್ತಲೇ ಇದೆಯೇ ಹೊರತು ಎಂದಿಗೂ ಕುಗ್ಗಿಲ್ಲ. ಇದರಿಂದ ನಮಗೆ ತಿಳಿಯುವುದು ಏನೆಂದರೆ ನಮ್ಮ ಈ ಫಾಸ್ಟ್ ಫಾರ್ವರ್ಡ್ ಜಗತ್ತು ಎಂದಿಗೂ ಕೂಡ ಹಿಂದಿನ ದಿನಗಳಂತೆ ಆಗಲು ಸಾಧ್ಯವಿಲ್ಲ ಎನ್ನುವ ಸತ್ಯತೆ ನಮಗೆ ತಿಳಿದಿದೆ.  

ಅಂದೊಂದಿತ್ತು ಕಾಲ ಆ ಕಾಲದಲ್ಲಿ ಸಂಬಂಧಗಳಿಗೆ ಬೆಲೆ ಇತ್ತು ಆದರೆ ಈಗ ಅಪ್ಪ ಅಮ್ಮ ಹಾಗೂ ಮಕ್ಕಳ ಸಂಬಂಧಗಳಿಗೆ ಬೆಲೆ ಇಲ್ಲದಂತೆ ಆಗಿದೆ. ಅದರಲ್ಲೂ ಈ ಬ್ಯುಸಿ ಜೀವನದಲ್ಲಿ ಮಕ್ಕಳ ಹಾಗೂ ಹೋಗುಗಳನ್ನು ಕೂಡ ಗಮನಿಸಿದ ಪೋಷಕರು ಅದೆಷ್ಟು ಸಂಖ್ಯೆಯಲ್ಲಿ ಇದ್ದಾರೆ. ಇಂತಹ ಕೃತ್ಯ ತುಂಬಿರುವ ಈ ಕಾಲದಲ್ಲಿ ಮಕ್ಕಳ ದಿನಚರಿಯಲ್ಲಿ  ಕಾಣುವ ಸಣ್ಣ ಬದಲಾವಣೆಗಳನ್ನು ನಾವು ಗಮನಿಸದೆ ಇದ್ದರೆ ಇದರಿಂದಲೇ ನಮ್ಮ ಜೀವನಕ್ಕೆ ದೊಡ್ಡ ಆಗತಾದ ಘಟನೆಗಳು ಕೂಡ ಎದುರಿಸಬೇಕಾಗುತ್ತದೆ ಎಂಬುದು ಅಕ್ಷರ ಸಹ ಸತ್ಯ.ಇದೀಗ .  

ಇಂತದ್ದೇ ಒಂದು ಅದ್ಬುತ ಮೆಸೇಜ್ ತಿಳಿಸುವ ಕಿರು ಚಿತ್ರದ ಕಥೆಯನ್ನು ನಾವು ನಮ್ಮ ಲೇಖನದಲ್ಲಿ ಹೇಳಲು ಹೊರಟ್ಟಿದ್ದೇವೆ. ಆ ಕಥೆಯ ಬಗ್ಗೆ ತಿಳಿಯಲು ನಮ್ಮ ಲೇಖನವನ್ನು ಓದಿ.

ಇನ್ನೂ ಈ ಕಿರು ಚಿತ್ರದ ಹೆಸರು "ಟಚ್ ಮಿ ನಾಟ್" . ಈ ಚಿತ್ರದ ಕಥಾ ಹಂದರದ ಪ್ರಕಾರ ಬೆಂಗಳೂರಿನ ಒಂದು ಭಾಗದಲ್ಲಿ ಒಂದು ಕುಟುಂಬ ವಾಸವಾಗಿರಿತ್ತದೆ. ಆ ಕುಟುಂಬದಲ್ಲಿ ಗಂಡ ಹೆಂಡತಿ ಹಾಗೂ ಮಗಳು ಇರುತ್ತಾರೆ. ಗಂಡ ಹೆಂಡತಿ ಇಬ್ಬರು ಕೊಡ ಕೆಲ್ಸಕ್ಕೆ ಹೋಗುತ್ತಾರೆ. ಇದರಿಂದ ತಮ್ಮ ಮಗಳ ಮೇಲೆ ಗಮನ ಅಷ್ಟಾಗಿ ಹರಿಸಲು ಸಾಧ್ಯವಾಗುವುದಿಲ್ಲ. ಹೀಗೆ ಆ ಮನೆಗೆ ಬಂದ ಆ ಹೆಣ್ಣು ಮಗುವಿನ ಮಾವ ಕೂಡ ಆ ಮಗುವಿನ ಜೊತೆ ಅಶ್ಲೀಲವಾಗಿ ಮುಟ್ಟುತ್ತಾ ವರ್ತಿಸುತ್ತಾನೆ. ಆ ಮಗು ದಿನ ಶಾಲೆಗೆ ಹೋಗುವ ಆಟೋ ಅಂಕಲ್ ಕೂಡಾ ಇದೆ ರೀತಿ ವರ್ತಿಸುತ್ತಾನೆ. ಹಾಗೆಯೇ ಆ ಮಗುವಿನ ನೆರೆ ಮನೆಯ ಹುಡುಗ ಕೂಡ ಇದೆ ರೀತಿ ವರ್ತಿಸುತ್ತಾನೆ. ಆದರೆ ಆ ಮಗು ಈ ವಿಚಾರವನ್ನು ತನ್ನ ಪೋಷಕರಿಗೆ ಹೇಗೆ ಹೇಳಿಕೊಲ್ಲುವುದು ಎಂದು ತಿಳಿಯದೇ ಒದ್ದಾಡುತ್ತಿರುತ್ತದೆ. ಅದೇ ನೀವೇನಾದರೂ ನಿಮ್ಮ ಮಗುವನ್ನು ಈ ಗುಡ್ ಟಚ್ ಹಾಗೂ ಬ್ಯಾಡ ಟಚ್ ಬಗ್ಗೆ ಶಿಕ್ಷಣ ನೀಡಿದ್ದರೆ ಅವನ್ನು ಕಂಡಿಸುವ ಬಗ್ಗೆ ತಿಳಿಸಿದ್ದರೆ ಈ ರೀತಿ ಆಗುವ ಅನಾಹುತವನ್ನು ನಾವು ತಡೆಯಬಹುದು. ಹಾಗೆಯೇ ನಿಮ್ಮ ನಿಮ್ಮ ಎಷ್ಟೇ ಬ್ಯುಸಿ ಶೆಡ್ಯೂಲ್ ನಲ್ಲಿ ಕೂಡ ಮಕ್ಕಳ ಮೇಲೆ ನಿಮ್ಮ ಗಮನ ಇರಲಿ ಅವರಲ್ಲಿ ಆಗುವ ಸಣ್ಣ ಬದಲಾವಣೆ ಕೂಡ ನೀವು ಗುರುತಿಸುವಷ್ಟು ನೀವು ಜಾಗರೂಕ ರಾಗಿರಿ ಎಂದು ನಾವೆಲ್ಲರೂ ಆಶಿಸುತ್ತೇವೆ.

( video credit : Mov I Eyes )