ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿರುವ ದುನಿಯಾ ವಿಜಯ್ ಮಕ್ಕಳು! ಕಾರಣ ಏನು ಗೊತ್ತಾ?

ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿರುವ ದುನಿಯಾ ವಿಜಯ್ ಮಕ್ಕಳು! ಕಾರಣ ಏನು ಗೊತ್ತಾ?

ನಮ್ಮ ಸ್ಯಾಂಡಲ್ ವುಡ್ ನಲ್ಲಿ ಕಲಾವಿದರು ಹೇಗೆ ಆಕ್ಟಿವ್ ಇರುತ್ತಾರೆ ಹಾಗೆಯೇ ಅವರ ಮಕ್ಕಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಇರುತ್ತಾರೆ. ಇನ್ನೂ ಕೆಲ ಕಲಾವಿದರ ಮಕ್ಕಳು ಕೂಡ ಸಿನಿಮಾ ಕಡೆ ಬಂದು ದೊಡ್ಡ ಸ್ಟಾರ್ ಆಗಿರುವುದು ಇದೆ ಇತ್ತಾ ಕೆಲ ಕಲಾವಿದರ ಮಕ್ಕಳು ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದರು ಕೂಡ ಯಶಸ್ಸು ಪಡೆಯಲು ಸಾಧ್ಯವಾಗದೆ ಒದ್ದಾಡಿದ್ದು ಇದೆ. ಹಾಗೆಯೇ ಇನ್ನಷ್ಟು ಕಲಾವಿದರ ಮಕ್ಕಳು ಸಿನಿಮಾ ರಂಗಕ್ಕೆ ತಲೆ ಹಾಕದೆ ಅವರು ಇಷ್ಟ ಪಟ್ಟ ಬೇರೆಯ ಫೀಲ್ಡ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಅಂತದ್ದೇ ಸಾಲಿನಲ್ಲಿ ಗುರುತಿಸಿಕೊಂಡಿರುವ ನಮ್ಮ ಸ್ಯಾಂಡಲ್ ವುಡ್ ನ ಬ್ಲಾಕ್ ಟೈಗರ್ ಎಂದು ಗುರುತಿಸಿಕೊಂಡಿರುವ "ದುನಿಯಾ ವಿಜಯ್" ಮಕ್ಕಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದ್ದಾರೆ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ "ದುನಿಯಾ ವಿಜಯ್" ಅವರು ನಮ್ಮ ಸ್ಯಾಂಡಲ್ ವುಡ್ ಗೆ ಗುರುತಿಸಿಕೊಂಡು ದಶಕಗಳೇ ಕಳೆದಿವೆ. ಹೀಗಿದ್ದರು ಕೊಡ ಅವರು ಮಾಡುವ ಸಿನಿಮಾ ಸಂಖ್ಯೆ ಕಡಿಮೆ ಆದರೂ ಕೊಡ ಅವರ ಛಾಪು ಕೊಂಚವೂ ಕಡಿಮೆಯಾಗಿಲ್ಲ. ಅದ್ರಲ್ಲೂ ಅವರ ನಿರ್ದೇಶನದ ಚಿತ್ರ ಎಂದರೆ ನಮ್ಮ ಗಾಂಧಿ ಬಜಾರ್ ನಲ್ಲಿ ಬೇರೆಯ ರೀತಿಯ ಹೈಪ್ ಇದೆ ಎಂದರೆ ತಪ್ಪಾಗಲಾರದು. ಇನ್ನೂ ಇದೀಗ ದುನಿಯಾ ವಿಜಯ್ ಅವರ ಮೊದಲ ಪತ್ನಿಯ ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಸದ್ದು ಮಾಡುತ್ತಿದ್ದಾರೆ. ಯಾಕೆಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ ತಿಳಿದುಕೊಳ್ಳಿ.  

ದುನಿಯಾ ವಿಜಯ್ ಅವರಿಗೆ ಈಗಾಗಲೇ ಎರಡನೇ ಮದುವೆ ಕೂಡ ಆಗಿದೆ. ಆದ್ರೆ ಈಗಲೂ ಕೂಡ ತಮ್ಮ ಮೊದಲನೆಯ ಪತ್ನಿಯ ಮಕ್ಕಳ ಸಂಪರ್ಕದಲ್ಲಿ ಇದ್ದಾರೆ. ಅದ್ರಲ್ಲೂ ತಮ್ಮ ಕಿರಿಯ ಪುತ್ರಿಗೆ ಅವರ ಹುಟ್ಟು ಹಬ್ಬದ ದಿನದಂದು ದುಬಾರಿ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಇನ್ನೂ ವಿಜಯ್ ಅವರ  ಹಿರಿಯ ಮಗಳು "ಮೋನಿಕಾ" ಹಾಗೂ ಕಿರಿಯ ಮಗಳು *ಮೋನಿಷಾ". ಈ ಇಬ್ಬರು ನೋಡಲು ಬಹಳ ಸುಂದರವಾಗಿ ಇದ್ದಾರೆ. ಮೋನಿಕಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ತೊಡಗಿಸಿಕೊಂಡಿಲ್ಲ. ಆದ್ರೆ ಕಿರಿಯ ಮಗಳು ಮೋನಿಷಾ ಅವರು ಫ್ಯಾಷನ್ ಡಿಸೈನರ್ ಆಗಿರುವ ಕಾರಣದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸುದ್ದಿಯಲ್ಲಿ ಇರುತ್ತಾರೆ. ಹಾಗೆಯೇ ಇತ್ತೀಚೆಗೆ ಸೀರೆಯಲ್ಲಿ ಹಂಚಿಕೊಂಡ ಇವರ ಫೋಟ್ಸ್ ಯಾವ ಸೆಲೆಬ್ರಿಟಿಗಳಿಗೂ ಕಡಿಮೆ ಇಲ್ಲದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗಿದೆ.

( video credit : sstv )