ದರ್ಶನ್ ಹಾಗೂ ದ್ರುವ ಸರ್ಜಾ ಅವರ ಮನಸ್ತಾಪ ಬಗ್ಗೆ ಕ್ಲಾರಿಟಿ ಕೊಟ್ಟ ದ್ರುವ! ಮನಸ್ತಾಪ ಕಾರಣ ಏನು ಗೊತ್ತಾ?
ನಮ್ಮ ಬಣ್ಣದ ರಂಗದಲ್ಲಿ ಸ್ಟಾರ್ ವಾರ್ ಇದ್ದೆ ಇರುತ್ತದೆ. ಇನ್ನೂ ಸಿನಿಮಾ ಎಂದ ಕೂಡಲೇ ತಮ್ಮ ಸ್ನೇಹಿತರೇ ಆಗಿದ್ದರು ಕೊಡ ತಮ್ಮ ಸಿನಿಮಾ ಎನ್ನುವ ವಿಶೇಷ ಆತಿಥ್ಯ ಅಥವಾ ಪ್ರೀತಿ ಕೊಡ ಇರುತ್ತದೆ. ಆದರೆ ಸಿನಿಮಾ ವಿಚಾರವನ್ನು ಹೊರತು ಪಡಿಸಿ ವಯಕ್ತಿಕ ವಿಚಾರಕ್ಕೆ ಕಿತ್ತಾಡುವುದು ಬಹಳ ಕಡಿಮೆ ಎಂದರೆ ತಪ್ಪಾಗಲಾರದು. ಅದ್ರಲ್ಲೂ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಈ ವಯಕ್ತಿಕ ಜಗಳ ಬಹಳ ಕಡಿಮೆ. ಇನ್ನೂ ಈ ರೀತಿಯ ಮನಸ್ತಾಪ ಬಂದರು ಕೊಡ ಆದಷ್ಟು ಬೇಗ ಕುಳಿತು ಮಾತನಾಡಿ ಬಾಗೆ ಹರಿಸಿಕೊಳ್ಳುವವರು ಉಂಟು. ಈ ಮನಸ್ತಾಪ ಎಂದ ಕೂಡಲೇ ತಟ್ಟನೆ ನೆನಪಾಗುವ ಹೆಸರು ಎಂದರೆ ಅದು "ಕಿಚ್ಚ ಸುದೀಪ್ ಹಾಗೂ ದರ್ಶನ್". ಇವರಿಬ್ಬರು ನಮ್ಮ ಸ್ಯಾಂಡಲ್ ವುಡ್ ನ ಕುಚಿಕುಗಳು ಎಂದರೆ ತಪ್ಪಾಗಲಾರದು. "ಅಂಬರೀಶ್ ಹಾಗೂ ವಿಷ್ಣುವರ್ಧನ್" ಅವರ ನಂತರ ಬಂದ ಸ್ನೇಹಿತರು ಎಂದರೆ ಇವರಿಬ್ಬರೇ.
ಆದ್ರೆ ಏಳು ವರ್ಷಗಳ ಹಿಂದೆ ಇವರಿಬ್ಬರ ನಡುವೆ ಹುಟ್ಟಿಕೊಂಡ ಈ ವಯಕ್ತಿಕ ಮನಸ್ತಾಪ ಇಂದಿಗೂ ಕೊಡ ಒಂದೇ ವೇದಿಕೆಯಲ್ಲಿ ಇದ್ದರೂ ಕೊಡ ಮುಖ ನೊಡದಷ್ಟು ಬೆಳೆದು ನಿಂತಿದೆ. ಆದ್ರೆ ಇವರಿಬ್ಬರು ಕೂಡ ಒಂದಾಗಲು ಇಡೀ ಸ್ಯಾಂಡಲ್ ವುಡ್ ಕಾತುರತೆ ಇಂದ ಕಾದು ಕುಳಿತಿದೆ. ಇದೀಗ ಆ ಪಟ್ಟಿಗೆ ಮತ್ತೊಂದು ಸ್ಟಾರ್ ಸೇರ್ಪಡೆ ಆಗಿದ್ದಾರೆ. ಅವರಿಬ್ಬರೇ ದರ್ಶನ್ ಹಾಗೂ "ದ್ರುವ ಸರ್ಜಾ". ಇನ್ನೂ ಇವರಿಬ್ಬರ ಮನಸ್ತಾಪ ಗುರುತಿಗೆ ಬಂದಿದ್ದು ಕಾವೇರಿ ಗಲಾಟೆಯಲ್ಲಿ ಒಂದೇ ವೇದಿಕೆಯಲ್ಲಿ ಎಲ್ಲಾ ಕಲಾವಿದರೂ ಕೂಡಾ ನೆರದಿದ್ದರು. ಆ ಸಮಯದಲ್ಲಿ ದ್ರುವ ಹಾಗೂ ದರ್ಶನ್ ಅವರು ಒಬ್ಬರಿಗೊಬ್ಬರು ಮುಖ ಕೊಟ್ಟು ಮಾತನಾಡಲೇ ಇಲ್ಲ. ಆ ನಂತರ ದ್ರುವ ವೇದಿಕೆಯಿಂದ ಕೆಳಗೆ ಇಳಿದು ಹೊರಟು ಬಿಟ್ಟರು.
ಇದನ್ನು ಗಮನಿಸಿದ ದ್ರುವ ಸರ್ಜಾ ಹಾಗೂ ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಮಾಡುತ್ತಲೇ ಇದ್ದರೂ. ಆದರೆ ಇವರಿಬ್ಬರು ಕೊಡ ಯಾವ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಮೊನ್ನೆಯಷ್ಟೇ ದ್ರುವ ಅವರ ಹುಟ್ಟು ಹಬ್ಬದ ಆಚರಣೆಯಲ್ಲಿ ಮಾದ್ಯಮಗಳ ಮುಂದೆ ಶುಭ ಕೊರಿದವರಿಗೆ ಧನ್ಯವಾದ ತಿಳಿಸಲು ಬಂದ ದ್ರುವ ಅವರಿಗೆ ಈ ಮುನೀಸಿನ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಆಗ ದ್ರುವ ಅವರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೂ ದ್ರುವ ಅವರು "ನನಗೆ ಒಳಗೊಂದು ಹೊರಗೊಂದು ಇರಲು ಬರುವುದಿಲ್ಲ ನನಗೆ ದರ್ಶನ್ ಅವರಿಗೆ ಕೇಳಲು ಎರಡು ಮೂರು ಪ್ರಶ್ನೆಗಳಿವೆ ಅದಕ್ಕೆ ಉತ್ತರ ಸಿಕ್ಕ ನಂತರವೇ ನಾವು ಮೊದಲಿನಂತೆ ಆಗಲು ಸಾದ್ಯ. ಆದರೆ ದರ್ಶನ್ ಮೇಲೆ ನನಗೆ ಇವತ್ತಿಗೂ ಗೌರವ ಇದೆ" ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೂ ದರ್ಶನ್ ಅವರು ದ್ರುವ ಅವರ ಹೇಳಿಕೆಗೆ ಯಾವ ಪ್ರತಿಕ್ರಿಯೆ ನೀಡುತ್ತಾರೆ ಎಂದು ಕಾದು ನೋಡಬೇಕಿದೆ .