ಧ್ರುವ ಸರ್ಜಾ ಹಾಗೂ ಪ್ರೇರಣಾ ಎರಡನೇ ಮಗು ಹುಟ್ಟಿರೋದು ಎಂಥಾ ಜಾತಕದಲ್ಲಿ ಗೊತ್ತೇ..?

ಧ್ರುವ ಸರ್ಜಾ ಹಾಗೂ ಪ್ರೇರಣಾ ಎರಡನೇ ಮಗು ಹುಟ್ಟಿರೋದು ಎಂಥಾ ಜಾತಕದಲ್ಲಿ ಗೊತ್ತೇ..?

ಹೌದು ಇತ್ತೀಚಿಗಷ್ಟೇ ಎಲ್ಲರಿಗೂ ಗೊತ್ತಿರುವಂತೆ ವರಮಹಾಲಕ್ಷ್ಮಿ ಹಬ್ಬದ ದಿನ ಧ್ರುವ ಸರ್ಜಾ ಮತ್ತು ಪ್ರೇರಣ ಅವರು ಎರಡನೇ ಮಗುವಿನ ಆಗಮನದ ಖುಷಿ ವಿಚಾರವನ್ನು ಹಂಚಿಕೊಂಡಿದ್ದರು. ಅದಾದ ಬಳಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ದಿನದಂದೆ, ಅವರ ಫಾರ್ಮ್ ಹೌಸ್ ನಲ್ಲಿ ತಮ್ಮ ಪ್ರೀತಿಯ ಮಡದಿಯಾದ ಪ್ರೇರಣಾ ಅವರ ಎರಡನೇ ಮಗುವಿನ ಆಗಮನದ ಸಿಹಿ ಸುದ್ದಿ ನಡುವೆ ಸೀಮಂತ ಕಾರ್ಯ ಕೂಡ ಮಾಡಿ ಮುಗಿಸಿದ್ದರು ನಟ ದ್ರುವ ಸರ್ಜಾ. ಹೌದು ನಿನ್ನೆ ಶ್ರೀ ಗೌರಿ ಗಣೇಶ ಹಬ್ಬದ ಚತುರ್ಥಿ ದಿನವೇ ಧ್ರುವ ಸರ್ಜಾ ತಂದೆ ಆಗಿದ್ದಾರೆ. ಪ್ರೇರಣಾ ತಾಯಿಯಾಗಿದ್ದಾರೆ. ಇದು ಇವರಿಗೆ ಎರಡನೇ ಮಗು ಆಗಿದ್ದು, ಕುಟುಂಬದಲ್ಲಿ ಸಂತಸ ಹೆಚ್ಚು ಮನೆ ಮಾಡಿದೆ ಎಂದು ಹೇಳಬಹುದು.

ಧ್ರುವ ಸರ್ಜಾ ಅವರ ಎರಡನೇ ಮಗು ಗಂಡು ಮಗು ಆಗಿದ್ದು, ಈ ಮಗುವಿಗೆ ಸಾಕಷ್ಟು ಬಂಧು ಬಳಗದವರು ಮಗುವನ್ನ ನೋಡಿ ಈಗಾಗಲೇ ಹಾರೈಸಿದ್ದಾರೆ. ಅತ್ತ ಧ್ರುವ ಸರ್ಜಾ ಅವರ ಅಣ್ಣ ಚಿರಂಜೀವಿ ಸರ್ಜಾ ಅವರ ಮಡದಿ ಮೇಘನಾ ರಾಜ್, ಅವರ ತಂದೆ ಸುಂದರ ರಾಜ್, ತಾಯಿ ಪ್ರಮೀಳಾ ಜೋಷಾಯಿ ಕೂಡ ಬಂದು ಧ್ರುವ ಸರ್ಜಾ ಮಗನನ್ನು ನೋಡಿಕೊಂಡು ಖುಷಿ ವ್ಯಕ್ತಪಡಿಸಿದ್ದಾರೆ.. ಸುಂದರ್ ರಾಜ್ ಮಗುವನ್ನು ನೋಡಿ ಮಗು ತುಂಬಾ ಚೆನ್ನಾಗಿದೆ ಮಗು, ನಮಗೆಲ್ಲಾ ಖುಷಿಯಾಯಿತು, ಈ ಮಗು ಗಜಕೇಸರಿ ಯೋಗದಲ್ಲಿ ಹುಟ್ಟಿದ್ದು, ತಂದೆಯಂತೆಯೇ ದೊಡ್ಡದಾಗಿ ಹೆಸರು ಮಾಡಲಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಕೇಳಿ ಬಂದಿದೆ.      

ಅಸಲಿಗೆ ಈ ಜಾತಕದಲ್ಲಿ ಹುಟ್ಟಿದವರು ಇನ್ನೂ ಏನೆಲ್ಲಾ ಲಾಭಗಳನ್ನು ಪಡೆಯುತ್ತಾರೆ ಎಂಬುವ ಮಾಹಿತಿ ಕೂಡ ನಿಮಗೂ ಗೊತ್ತಿದ್ದರೆ ತಪ್ಪದೆ ನಮಗೆ ಕಮೆಂಟ್ ಮಾಡಿ ತಿಳಿಸಿ, ಹೆಚ್ಚಿನ ಮಾಹಿತಿಗಾಗಿ ಈ ಲೇಖನದಲ್ಲಿರುವ ವಿಡಿಯೋವನ್ನು ಕೊನೆಯವರೆಗೂ ನೋಡಿ, ನಟ ಧ್ರುವ ಸರ್ಜಾ ಮತ್ತು ಪ್ರೇರಣಾ ಅವರ ಈ ಗಂಡು ಮಗುವಿಗೆ ಶುಭ ಹಾರೈಸಿ ಧನ್ಯವಾದಗಳು...