ಅಣ್ಣನ ನೆನಪಿನಲ್ಲಿ ದ್ರುವ ಮಾಡಿದ ಕೆಲ್ಸ ನೋಡಿ ಎಲ್ಲರಿಗೂ ಶಾಕ್ ಆಗಿದೆ! ಅವರು ಮಾಡಿದ ಕೆಲ್ಸ ಏನು ಗೊತ್ತಾ?

ಅಣ್ಣನ ನೆನಪಿನಲ್ಲಿ ದ್ರುವ ಮಾಡಿದ ಕೆಲ್ಸ ನೋಡಿ ಎಲ್ಲರಿಗೂ ಶಾಕ್ ಆಗಿದೆ! ಅವರು ಮಾಡಿದ ಕೆಲ್ಸ ಏನು ಗೊತ್ತಾ?

ನಮ್ಮ ಬಣ್ಣದ ಲೋಕದ ಮೇಲೆ ಬಿದ್ದಿರುವ ಕರಿ ನೆರಳು ಯಾವಾಗ ಮಾಸಲಿದೆ ಎಂದು ಆ ದೇವರೇ ಬಲ್ಲ. ಇನ್ನೂ ಈ ಕರಿ ನೆರಳಿನ ಛಾಯೆ ಯಿಂದ ನಮ್ಮ ಬಣ್ಣದ ಲೋಕದ ಅದೆಷ್ಟೋ ಕಲಾವಿದರು ನಮ್ಮನ್ನು ಅಗಲುತ್ತಾ ಬರುತ್ತಿದ್ದಾರೆ. ನಾವಿನ್ನೂ ನಾಲ್ಕು ವರ್ಷದ ಹಿಂದೆ ನಗು ಮುಖದ ಒಡೆಯ ಎಂದೇ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಪ್ರಸಿದ್ದಿ ಪಡೆದಿದ್ದ "ಚಿರು" ಅವರ ಸಾವಿನ ನೋವಿನಿಂದ ಹೊರಬಂದಿರಲಿಲ್ಲ. ಹೀಗಿರುವಾಗ ನಾವು ಹೋಹಿಸದೇ ಇದ್ದ "ಸಂಚಾರಿ ವಿಜಯ್" ಹಾಗೂ ನಮ್ಮೆಲ್ಲರ ಪ್ರೀತಿಯ "ಅಪ್ಪು" ಕೂಡ ನಮ್ಮನ್ನು ಅಗಲಿದ್ದಾರೆ. ಜನರ ಜೀವನ ಎಷ್ಟು ಕ್ಷಣಿಕ ಎಂದು ಕುಳಿತಿರುವ ಸಮಯದಲ್ಲಿ "ಚಿನ್ನಾರಿ ಮುತ್ತನ ಚಿನ್ನ" ಕೂಡ ವಿಧಿ ಆಟಕ್ಕೆ ಬಲಿಯಾಗಿದ್ದಾರೆ.

ಹೀಗಿರುವಾಗ ಜನರ ಜೀವನ ಎಷ್ಟು ಕ್ಷಣಿಕ ಎಂದರೆ ಊಹಿಸುವುದಕ್ಕೆ ಸಾಧ್ಯವಾಗಿಲ್ಲ. ಇನ್ನೂ ಎಲ್ಲರ ಸಾವಿಗೆ ಈಗಲೂ ಬೇಸರ ಇದೆ ಎಂದರೆ ತಪ್ಪಾಗಲಾರದು. ಇದೀಗ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಚಿರು ಅವರನ್ನು ಸದಾ ನಗು ಮುಖದ ಒಡೆಯ ಎಂದು ಕರೆಯುತ್ತಿದ್ದರು ಎಂದರೆ ತಪ್ಪಾಗಲಾರದು. ಆದರೆ ಅಪ್ಪ ಅಮ್ಮ "ಚಿರಂಜೀವಿ" ಎಂದು ಹೆಸರಿಟ್ಟರು ಆದರೆ ಆತನ ಜೀವನ ಚಿರ ಕಾಲ ಉಳಿಯದಂತೆ ಅರ್ಧದಷ್ಟು ಕೂಡ ಮುಗಿಸದೆ ಎಲ್ಲಾ ಜೀವನಕ್ಕೂ ಪೂರ್ಣ ವಿರಾಮ ಇಟ್ಟು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಅವರನ್ನು ಹಚ್ಚು ಕೊಂಡಿದ್ದ ಅವರ ಕುಟುಂಬ ಅವರನ್ನು ಅಗಲಿ ಹೇಗೆ ಜೀವನ ನಡೆಸುತ್ತಿದೆ ಎಂದು ಆ ದೇವರೇ ಬಲ್ಲ. ಇನ್ನೂ ಬರೋಬ್ಬರಿ 10ವರ್ಷಗಳ ಕಾಲ ಪ್ರೀತಿಸಿ ಮದುವೆಯಾದ "ಮೇಘನಾ" ಅವರನ್ನು ಕೇವಲ ಎರಡೇ ವರ್ಷಕ್ಕೆ ಅಂತ್ಯ ಮಾಡಿದ್ದಾರೆ.   

ಇನ್ನೂ ಚಿರು ಅವರು ತಮ್ಮ ಮಗನ ಮುಖ ನೋಡದೇ ಬಾರದ ಲೋಕಕ್ಕೆ ಪಯಣ ಬೆಳೆಸಿರುವುದು ನಿಜಕ್ಕೂ ದುಃಖದ ಸಂಗತಿ ಎಂದರೇ ತಪ್ಪಾಗಲಾರದು. ಇತ್ತ ಚಿಕ್ಕ ವಯಸ್ಸಿನಿಂದಲೂ ಒಟ್ಟಾಗಿ ಬೆಳೆದ ಅಣ್ಣನ ಆಗಲಿಕೆಯನ್ನು "ದ್ರುವ ಸರ್ಜಾ" ಅವರು ಕೂಡ ಅದೆಷ್ಟೋ ವೇದಿಕೆಯಲ್ಲಿ ನನಗೆ ಅಪ್ಪ ಅಮ್ಮ ಇಲ್ಲದೆ ಬದುಕುವುದಕ್ಕೆ ಅಭ್ಯಾಸ ಇದೆ. ಆದ್ರೆ ನಮ್ಮ ಅಣ್ಣ ಇಲ್ಲದೆ ಬದುಕುವುದಕ್ಕಿಂತ ಊಹಿಸಿಕೊಳ್ಳುವುದಕ್ಕು ಕಷ್ಟ ಎಂದು ಹೇಳಿಕೊಂಡಿದ್ದಾರೆ. ಇದೀಗ ದ್ರುವ ಅವರು ತಮ್ಮ ಸಿನಿಮಾಗಳಲ್ಲಿ ಬ್ಯುಸಿ ಇದ್ದರೂ ಕೂಡ ಅಣ್ಣನ ನೆನಪಿನಲ್ಲಿ ಸದಾ ಇರುತ್ತಾರೆ ಎನ್ನುವುದಕ್ಕೆ ಸಾಕ್ಷಿಯಾಗಿ ನೆನ್ನೆ ದ್ರುವ ಅವರು ಚಿರು ಅವರ ಸಮಾಧಿಯ ಪಕ್ಕದಲ್ಲಿ ಮಲಗಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದ್ರುವ ಅವರ ತೋಟದಲ್ಲಿ ಕೆಲಸ ಮಾಡುವ ಕೆಲ್ಸಗಾರನೊಬ್ಬ ಆ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅಗಲಿಕೆಯ ನಂತರವೂ ಅಣ್ಣನ ಪ್ರೀತಿಯಲ್ಲಿ ಬದುಕುತ್ತಿರುವ ಅವರನ್ನು ನೋಡಿದರೆ ಸಂಭಂದದ ಬೆಲೆ ತಿಳಿಯುತ್ತದೆ.