ದ್ವೇಷ ಮರೆತು ದರ್ಶನ್ ಕಾಟೇರ ಸಿನಿಮಾ ಬಗ್ಗೆ ಧ್ರುವ ಸರ್ಜಾ ಹೇಳಿದ್ದೇನು ಗೊತ್ತಾ..? ಡಿ ಬಾಸ್ ಶಾಕ್

ದ್ವೇಷ ಮರೆತು ದರ್ಶನ್ ಕಾಟೇರ ಸಿನಿಮಾ ಬಗ್ಗೆ ಧ್ರುವ ಸರ್ಜಾ ಹೇಳಿದ್ದೇನು ಗೊತ್ತಾ..? ಡಿ ಬಾಸ್ ಶಾಕ್

ಹೌದು ಎಲ್ಲರಿಗೂ ಗೊತ್ತಿರುವಂತೆ ನಟ ದ್ರುವ ಸರ್ಜಾ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಡುವೆ ಕೆಲವು ದಿನಗಳಿಂದ ವೈಮನಸ್ಸು ಇರುವ ವಿಚಾರ ಎಲ್ಲೆಡೆ ಸ್ವಲ್ಪ ದಿವಸದ ಹಿಂದೆ ಚರ್ಚೆ ಆಗಿತ್ತು. ಧ್ರುವ ಸರ್ಜಾ ಮತ್ತು ದರ್ಶನ್ ನಡುವೆ ಎಲ್ಲವೂ ಸರಿ ಇಲ್ಲ ಎನ್ನಲಾಗಿ ಕೆಲವು ವೇದಿಕೆಗಳಲ್ಲಿ ಅವರು ನಡೆದುಕೊಂಡ ರೀತಿ ಅವರಿಬ್ಬರ ನಡುವೆ ಏನೋ ವೈ ಮನಸ್ಸು ಉಂಟಾಗಿದೆ ಎಂಬಂತೆ ಕಂಡುಬಂದಿತ್ತು. ಹೌದು ಧ್ರುವ ಸರ್ಜಾ ಅವರು ಹುಟ್ಟು ಹಬ್ಬದ ದಿನವೇ ಮಾಧ್ಯಮಕ್ಕೆ ಉತ್ತರ ನೀಡಿದ್ದು ನಾನು  ದರ್ಶನ್ ಅವರಿಗೆ ಒಂದೆರಡು ಪ್ರಶ್ನೆಗಳನ್ನು ಕೇಳಬೇಕಿದೆ, ಅದಾದ ನಂತರ ಕ್ಲಾರಿಟಿ ಸಿಗುತ್ತದೆ.

ನಮಗೂ ಸೆಲ್ಫ್ ರೆಸ್ಪೆಕ್ಟ್ ಇದೆ ಅಲ್ವಾ ಎಂದು ಪ್ರತಿಕ್ರಿಯೆ ನೀಡಿದ್ದರು.. ಇದಕ್ಕೂ ಮುನ್ನ ಶಿವಣ್ಣ ಅವ್ರು ಒಮ್ಮೆ ಇದೆ  ಕಾವೇರಿ ವಿಚಾರವಾಗಿ ಕಾರ್ಯಕ್ರಮ ಹಮ್ಮಿಕೊಂಡಾಗ ದರ್ಶನ್ ಅವರು ಬರುತ್ತಿದ್ದಂತೆಯೇ ಅಲ್ಲಿಂದ ಧ್ರುವ ಸರ್ಜಾ ಅವರು ಇದ್ದಕಿದ್ದ ಹಾಗೆ ಕಾಲ್ ಕಿತ್ತಿದ್ದರು. ಹೌದು ಎಲ್ಲಾ ಸಿನಿಮಾರಂಗಗಳಲ್ಲಿಯೂ ದೊಡ್ಡ ದೊಡ್ಡ ಸ್ಟಾರ್ ನಟರ ನಡುವೆ ಕೆಲವೊಮ್ಮೆ ಯಾವುದೋ ಒಂದು ಕಾರಣಕ್ಕೆ ವೈಮನಸು ಉಂಟಾಗಿರುತ್ತದೆ. ಆದ್ರೆ ಹೆಚ್ಚು ದಿನ ಯಾವುದು ಉಳಿಯುವುದಿಲ್ಲ. ಅಂಥಹ ಸಮಸ್ಯೆ ಬಗೆ ಹರಿದಿರುತ್ತವೆ. 

ಅಂತಹದೇ ಸಮಸ್ಯೆ ದ್ರುವ ಸರ್ಜಾ ಹಾಗೂ ಡಿ ಬಾಸ್ ನಡುವೆ ನಡೆದಿತ್ತು. ಅದನ್ನೆಲ್ಲ ಪಕ್ಕಕ್ಕೆ ಇರಿಸಿ ಇತ್ತೀಚಿಗೆ ಸಂದರ್ಶನದಲ್ಲಿ ಕಾಣಿಸಿಕೊಂಡ ದ್ರುವ ಸರ್ಜಾ ಅವರಿಗೆ ಕಾಟೇರ ಸಿನಿಮಾ ದೊಡ್ಡದಾಗಿ ಸದ್ದು ಮಾಡುತ್ತಿದೆ, ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಿದೆ, ಇದರ ಬಗ್ಗೆ ನೀವು ಏನು ಹೇಳುತ್ತೀರಿ ಎಂದು ಮಾದ್ಯಮ ಮಿತ್ರರು ಪ್ರಶ್ನೆ ಮಾಡಿದ್ದರು. ನಟ ದ್ರುವ ಸರ್ಜಾ ಅವರು ಎಲ್ಲ ವೈ ಮನಸು, ದ್ವೇಷ ಮರೆತು ಕಾಟೇರ ಚಿತ್ರದ ಬಗ್ಗೆ ಹಾಡಿ ಹೊಗಳಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಈಗೀಗ ಒಳ್ಳೆ ಒಳ್ಳೆಯ ಸಿನಿಮಾಗಳು ಬರುತ್ತಿವೆ. 

ಕೆಜಿಎಫ್, ಕಾಂತಾರ, ಕಾಟೆರಾ ಎಲ್ಲವೂ ತುಂಬಾನೇ ಒಳ್ಳೆಯ ಸಿನಿಮಾಗಳು, ಇದು ಕನ್ನಡ ಚಿತ್ರರಂಗದ ಬೆಳವಣಿಗೆ ಕೂಡ, ಇಂತಹ ಸಿನಿಮಾಗಳು ಬರಬೇಕು, ಕಾಟೇರ ಚಿತ್ರ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ. ಚಿತ್ರತಂಡಕ್ಕೆ ಮತ್ತು ದರ್ಶನ್ ಅವರಿಗೆ ಒಳ್ಳೆಯದಾಗಲಿ ಎಂದು ಧ್ರುವ ಸರ್ಜಾ ಅವರು ಆಶಿಸಿದ್ದಾರೆ ಎಂದು ಕೇಳಿ ಬಂದಿದೆ. ಇಲ್ಲಿದೆ ನೋಡಿ ಆ ವಿಡಿಯೋ, ಮತ್ತು ನೀವು ಕೂಡ ದರ್ಶನ್ ಮತ್ತು ಧ್ರುವ ಸರ್ಜಾ ಎಲ್ಲ ವೈಮನಸ್ಸು ಮರೆತು ಇದೇ ರೀತಿ ಇರಲಿ ಎಂದು ಕಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು... ( video credit :Karunada suddi )