ಡ್ರೋನ್ ಪ್ರತಾಪ್ ತಂದೆ ತಾಯಿ ಯಾರು..? ಮಗನ ನೋಡಲು ಬಿಗ್ ಮನೆಗೆ ಪ್ರತಾಪ್ ಕುಟುಂಬ ಎಂಟ್ರಿ..??
ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆಗಿ ಈಗಾಗಲೇ ಹೆಚ್ಚು ಗಮನಸೆಳೆದಿರುವ ಕನ್ನಡದ ಬಿಗ್ ಬಾಸ್ ಮನೆ ಮತ್ತೆ ತನ್ನ ಆಟವನ್ನು ಶುರು ಮಾಡಿದೆ. ಪ್ರಬಲ ಸ್ಪರ್ಧಿಗಳು, ಆಟದ ಚಾಣಾಕ್ಷತನ ಅರಿತಿರುವ ಜನರು, ಗೇಮ್ ಪ್ಲಾನ್ ಮಾಡುವ ಸ್ಪರ್ಧಿಗಳು, ಇನ್ನೂ ಕೆಲವರು ಸ್ಟ್ರಾಟಜಿ ಮಾಡುತ್ತಾ ಆಟವ ಬಿಗ್ ಮನೆಯಲಿ ಆಡುತ್ತಿದ್ದಾರೆ. ಇನ್ನೂ ಹಲವರು ಬೇರೆ ರೀತಿ ಗುರುತಿಸಿಕೊಳ್ಳುತ್ತಿದ್ದಾರೆ. ಪ್ರತಿಬಾರಿಯಂತೆಯೆ ಈ ಸಲಾನು ಬಿಗ್ ಬಾಸ್ ಮನೆಯೊಳಗೆ ಈ ಬಾರಿಯೂ ಕೂಡ ಅಂತಹವರೇ ಸೇರಿಕೊಂಡಿದ್ದಾರೆ.
ಹೌದು ಬಿಗ್ ಬಾಸ್ ಮನೆ ಒಳಗೆ ಹೋಗುವ ಮುನ್ನ ಡ್ರೋನ್ ಪ್ರತಾಪ್ ಅವರು ಡ್ರೋನ್ ವಿಚಾರವಾಗಿ ತುಂಬಾನೇ ಕೆಟ್ಟದಾಗಿ ಜನರಿಗೆ ಕಾಣಿಸಿಕೊಂಡಿದ್ದರು. ಅವರು ಹೇಳಿದ್ದು ಎಲ್ಲವೂ ಸುಳ್ಳು ಎಂಬುದಾಗಿ ಅವರ ಮೇಲೆ ಆರೋಪ ಬಂದಿತ್ತು. ಆದರೆ ಒಮ್ಮೆ ಬಿಗ್ ಬಾಸ್ ಮನೆ ಒಳಗೆ ಹೋಗುತ್ತಿದ್ದಂತೆಯೇ ಮಾನವೀಯತೆ ನೋವು ಕಣ್ಣೀರು ಎಲ್ಲರನ್ನು ಗೆದ್ದು ಬಿಟ್ಟಿದೆ. ಪ್ರತಾಪ್ ಅವರ ನಿಷ್ಕಲ್ಮಶ ಮನಸ್ಸು, ಆ ಒಳ್ಳೆಯತನ, ಜೊತೆಗೆ ಅವರ ಕ್ಯಾರೆಕ್ಟರ್ ಎಲ್ಲರಿಗೂ ಕೂಡ ಬಿಗ್ ಬಾಸ್ ಮನೆ ಹೊರಗಿನ ಇಡೀ ಕರ್ನಾಟಕಕ್ಕೆ ಇಷ್ಟ ಆಗುತ್ತಿದೆ. ಜೊತೆಗೆ ಅವರು ಮುಗ್ಧರು ಇದ್ದಾರೆ.. ಏನೋ ಅರಿಯದೆ ತಪ್ಪು ಮಾಡಿರಬಹುದು, ತಪ್ಪು ಮಾಡಿದ್ದಾರೋ ಇಲ್ಲವೋ ಅವರಿಗೆ ಮಾತ್ರ ಗೊತ್ತು.. ಅದನ್ನು ಸಾಬೀತು ಮಾಡಿಕೊಳ್ಳಲು ಇನ್ನೊಂದು ಅವಕಾಶ ಅವರಿಗೆ ಈ ಬಿಗ್ ಬಾಸ್ ನೀಡಿದೆ. ಹಾಗೆ ಕರ್ನಾಟಕದ ಹೆಚ್ಚು ಜನತೆ ಸಹ ಅವರನ್ನ ಈಗ ಒಪ್ಪಿಕೊಂಡಿದೆ.
ಬಿಗ್ ಬಾಸ್ ಮನೆಯಲ್ಲಿ ಪ್ರತಾಪ್ ಅವರನ್ನು ಹೆಚ್ಚು ಸ್ಪರ್ಧಿಗಳು ತುಳಿಯಲು ಯತ್ನಿಸುತ್ತಿದ್ದಾರೆ. ಅದನ್ನ ನೀವೂ ಸಹ ನೋಡಿದ್ದಿರಿ. ಒಬ್ಬ ಮನುಷ್ಯ ದೈಹಿಕವಾಗಿ ಮಾನಸಿಕವಾಗಿ ಸಬಲ ಇಲ್ಲ ಅಂತ ಆದ್ರೆ ಯಾವ ರೀತಿ ಅವನನ್ನು ತುಳಿಯುತ್ತಾರೆ ಎಂಬುದಕ್ಕೆ ಈ ಬಿಗ್ ಬಾಸ್ ವೇದಿಕೆಯೇ ಒಂದು ಅತ್ಯದ್ಭುತ ಉದಾಹರಣೆ ಎಂದು ಹೇಳಬಹುದು. ಹೌದು ಪ್ರತಾಪ್ ಅವರು ಅವರ ತಂದೆ ತಾಯಿ ವಿಚಾರವಾಗಿ ತಾರಾ ಅವರ ಬಳಿ ಎಲ್ಲವನ್ನು ಮೊನ್ನೆ ಹೇಳಿಕೊಂಡಿದ್ದು ಉಂಟು. ಅದು ನೋವಿನಲ್ಲಿ. ಅದನ್ನು ನೋಡಿದ ಎಲ್ಲರೂ ಕೂಡ ಕಣ್ಣಂಚಲ್ಲಿ ಕಣ್ಣೀರು ತಂದರು. ತಾರಾ ಅವರು ಕೂಡ ಮುಕ್ತವಾಗಿ ನಾನು ನಿನ್ನ ತಾಯಿಯೇ ಇದ್ದಹಾಗೆ ಎಂದು ಮಾತನಾಡಿಸಿ ಅವರಿಗೆ ಧೈರ್ಯ ತುಂಬಿದ್ದು ಸಹ ನೋಡುವಂತಿತ್ತು. ಅಸಲಿಗೆ ಪ್ರತಾಪ್ ಅವರ ಕುಟುಂಬ ಹೇಗಿದೆ ಗೊತ್ತಾ..? ಅವರ ತಂದೆ ತಾಯಿ ಯಾರು..? ಪ್ರತಾಪ್ ತಂಗಿ ಯಾರು? ಈ ವಿಡಿಯೋ ನೋಡಿ..
ಬಿಗ್ ಬಾಸ್ ಅವರಿಗೆ ತಾರಾ ಅವರು ಮನವಿ ಮಾಡಿಕೊಂಡಂತೆ, ಪ್ರತಾಪ್ ತಂದೆ ತಾಯಿಯನ್ನು ಪ್ರತಾಪ್ ಅವರ ಜೊತೆ ಮಾತನಾಡಿಸಲು ಬಿಗ್ ಮನೆಗೆ ಮುಂದೆ ಕರಿಸುತ್ತಾರ..? ಅದು ಫೈನಲ್ ತನಕ ನಾವು ಕಾಯಲೆ ಬೇಕಾಗಿದೆ, ಒಂದು ವೇಳೆ ಪ್ರತಾಪ್ ಅವರು ಬಿಗ್ ಬಾಸ್ ಮನೆಯಲ್ಲಿ ಕೊನೆಯವರೆಗೂ ಇದ್ದರೆ ಖಂಡಿತ ಅವರ ತಂದೆ ತಾಯಿ ಬರುವ ಸಾಧ್ಯತೆ ಹೆಚ್ಚಿದೆ. ಜೊತೆಗೆ ಪ್ರತಾಪ್ ಅವರೇ ಗೆದ್ದು ಬರಲಿ ಎಂದು ಹೆಚ್ಚು ಕನ್ನಡಿಗರು ಹಾರೈಸುತ್ತಿದ್ದಾರೆ. ಮನುಷ್ಯರು ತಪ್ಪು ಮಾಡುವುದು ಸಹಜ, ಯಾರು ಕೂಡ ಇಲ್ಲಿ ಸಾಚಾ ಇಲ್ಲ ಎಂದು ಸೋಶಿಯಲ್ ಮೀಡಿಯಾದ ಪ್ರಿಯರು ಸಹ, ಹಾಗೆ ನೆಟ್ಟಿಗರು ಹಾಗೂ ಟ್ರೋಲಿಗರು ಕೂಡ ಅವರನ್ನು ಇನ್ನು ಎತ್ತರಕ್ಕೆ ಬೆಳೆಸುತ್ತಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಅವರನ್ನು ಎಷ್ಟು ತುಳಿಯಲು ಮಿಕ್ಕಿದ ಕಂಟೆಸ್ತೆಂಟ್ ಯತ್ನಿಸುತ್ತಾರೋ, ಅಷ್ಟು ಪ್ರತಾಪ್ ಮೇಲಕ್ಕೆ ಬರುವುದು ಖಚಿತ. ಎರಡನೇ ಚಾನ್ಸ್ ಪ್ರತಾಪ್ ಅವರಿಗೂ ಕೊಡಬೇಕು ಎನ್ನುವ ನಮ್ಮ ಕನ್ನಡಿಗರ ಹೃದಯ ಎಷ್ಟು ವಿಶಾಲತೆಯಿಂದ ತುಂಬಿದೆ ಎಂದು ಇದರಲ್ಲೇ ಗೊತ್ತಾಗುತ್ತದೆ. ಅವರ ತಂದೆ ತಾಯಿ ಅವರ ಕುಟುಂಬ ಹೀಗಿದೆ ನೋಡಿ, ವಿಡಿಯೋ ನೋಡಿ ಮತ್ತು ವಿಡಿಯೋ ಶೇರ್ ಮಾಡಿ, ಧನ್ಯವಾದಗಳು...
( video credit : News Boxx )