ನನ್ನ ತಂದೆ ಅಂದ್ರೆ ನಂಗೆ ಜಾಸ್ತಿ ಇಷ್ಟ..! ಶೊಕ್ಕಿಂಗ್ ಹೇಳಿಕೆ ಕೊಟ್ಟು ಕಣ್ಣೀರಿಟ್ಟ ಡ್ರೋನ್ ಪ್ರತಾಪ್

ನನ್ನ ತಂದೆ ಅಂದ್ರೆ ನಂಗೆ ಜಾಸ್ತಿ ಇಷ್ಟ..!  ಶೊಕ್ಕಿಂಗ್ ಹೇಳಿಕೆ ಕೊಟ್ಟು ಕಣ್ಣೀರಿಟ್ಟ ಡ್ರೋನ್ ಪ್ರತಾಪ್

ಹೌದು ಎಲ್ಲರಿಗೂ ಗೊತ್ತಿರುವಂತೆ ಕನ್ನಡದಲ್ಲಿ ಇದೀಗ ಬಿಗ್ ಬಾಸ್ ರಿಯಾಲಿಟಿ ಶೋ ಮತ್ತೆ ಆರಂಭವಾಗಿದೆ. ಪ್ರತಿ ಬಾರಿಯೂ ಒಂದು ಉತ್ಸುಕತೆ ಮೂಡಿಸುವ ಬಿಗ್ ಬಾಸ್ ಈ ಬಾರಿಯೂ ಕೂಡ ಯಶಸ್ವಿಯಾದಂತಿದೆ.. ಮೊದಲನೇ ವಾರದಲ್ಲಿಯೇ ಕರ್ನಾಟಕದ ತುಂಬೆಲ್ಲಾ ಡ್ರೋನ್ ವಿಚಾರವಾಗಿ ಕೆಟ್ಟದಾಗಿ ಕಾಣಿಸಿಕೊಂಡಿದ್ದ ಪ್ರತಾಪ್ ಬಂದಿದ್ದಾರೆ ಎಂದು ಆರಂಭದಲ್ಲಿ ಮಾತು ಕೇಳಿಬಂದವು, ಅದೇ ವಿಚಾರವಾಗಿ ಜನರಿಗೆ ಮೋಸ ಮಾಡಿದ್ದಾನೆ ಎನ್ನಲಾಗಿ ಕಾಣಿಸಿಕೊಂಡಿದ್ದ ಡ್ರೋನ್ ಪ್ರತಾಪ್ ಅವರು ಮೊದಲನೆ ವಾರದ ಅಂತ್ಯಕ್ಕೆ ದೂಳೆಬ್ಬಿಸಿದ್ದಾರೆ.   

ಎಲ್ಲರೂ ತಪ್ಪು ಮಾಡುತ್ತಾರೆ ಅವರಿಗೆ ಒಂದು ಅವಕಾಶ ಕೊಡೋಣ ಎಂದು ಕನ್ನಡಿಗರು ಹಾಗೂ ಟ್ರೊಲ್ ಪೇಜಸ್ ಅವರು ಡ್ರೋನ್ ಮಾಡಿರುವ ವಿಚಾರವಾಗಿ ಪ್ರತಾಪ್ ಹೇಳಿದ್ದು ಸತ್ಯ ಸುಳ್ಳು ಆತನಿಗೆ ಗೊತ್ತು ಎಂದು  ಸಮ್ಮತಿಸಿಕೊಂಡಿದ್ದಾರೆ.. ಇತ್ತೀಚೆಗೆ ಬಿಗ್ ಬಾಸ್ ಸ್ಪರ್ಧಿಗಳಿಗೆ ನಿಮ್ಮ ಮನೆಯವರ ಬಗ್ಗೆ ಹೇಳಿಕೊಳ್ಳಿ ಎಂದು ಒಂದು ಚಟುವಟಿಕೆ ನೀಡಿತ್ತು. ಆಗ ಎಲ್ಲರೂ ಕೂಡ ಅವರವರ ಮನೆಯವರನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂಬುದಾಗಿ ಹೇಳಿಕೊಂಡರು.
ಡ್ರೋನ್ ಪ್ರತಾಪ್ ಅವರು ಕೂಡ ಮಾತನಾಡಿದ್ದು, ನನ್ನ ತಂದೆ ಅಂದ್ರೆ ನನಗೆ ತುಂಬಾನೇ ಇಷ್ಟ, ನನ್ನ ತಾಯಿಗಿಂತ ತುಂಬಾನೇ ಇಷ್ಟ, ಆದರೆ ಅವರ ಜೊತೆ ನಾನು ಮಾತನಾಡಿ ಮೂರು ವರ್ಷ ಆಯಿತು, ಅವರು ತುಂಬಾ ಮುಗ್ಧರು, ನನಗೆ ಒಂದು ಅವಕಾಶ ಮಾಡಿಕೊಡಿ ಬಿಗ್ ಬಾಸ್ ನಾನು ಅವರಿಗೆ ಹಾಯ್ ಹೇಳಬೇಕು ಎಂದು ತುಂಬಾನೇ ಭಾವುಕರಾದರು.

ಏನೇ ಇರಲಿ ಎಲ್ಲರೂ ಕೂಡ ಒಂದಲ್ಲ ಒಂದು ರೀತಿ ತಪ್ಪು ಮಾಡುವವರೇ. ಆದರೆ ಡ್ರೋನ್ ವಿಚಾರದಲ್ಲಿ ಪ್ರತಾಪ್ ಕೆಟ್ಟವ ಅನಿಸಿಕೊಂಡರು. ಕೇವಲ ಜಗತ್ತಿನ ಎದುರು ಮಾತ್ರವಲ್ಲದೆ ಅವರ ಮನೆಯವರು ಕೂಡ ಈತನ ವಿರುದ್ಧ ಮುನಿಸಿಕೊಂಡಿದ್ದರು...ಅದೇ ವಿಚಾರವಾಗಿ ಡ್ರೋನ್ ಪ್ರತಾಪ್ ಅವರು ಈ ರೀತಿ ಹೇಳುತ್ತಿರಬಹುದು ಎಂದು ಅವರ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಡ್ರೋನ್ ಪ್ರತಾಪ್ ಅವರ ಆಟದ ವೈಖರಿ ಹೇಗಿದೆ ಬಿಗ್ ಬಾಸ್ ಮನೆಯಲಿ ಎಂದು ಹೇಳಿ, ಹಾಗೆ ಈ ಬಾರಿ ಬಿಗ್ ಬಾಸ್ ಯಾರು ಗೆಲ್ಲಬಹುದು ಎಂಬುದಾಗಿಯೂ ಕಮೆಂಟ್ ಮಾಡಿ ತಿಳಿಸಿ.. ಪ್ರತಾಪ್ ಅವರು ಕೂಡ ಗೆದ್ದರೂ ಆಶ್ಚರ್ಯ ಪಡಬೇಕಾಗಿಲ್ಲ.. ಯಾಕಂದ್ರೆ ಅಷ್ಟು ಸಕ್ಕತಾಗಿ ಬಿಗ್ ಬಾಸ್ ಮನೆಯಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ, ಮತ್ತು ಅವರು ಆಟವನ್ನು ಆಡುತ್ತಿದ್ದಾರೆ ಎನ್ನಬಹುದು.