ಡ್ರೋನ್ ಪ್ರತಾಪ್ ಗೆ ದೊಡ್ಡ ಆಘಾತ! ಮಗನ ಕೆನ್ನೆಗೆ ಬಾರಿಸಿದ ಡ್ರೋನ್ ತಂದೆ !!
ಈಗ ನಮ್ಮ ಬಿಗ್ ಬಾಸ್ ಕನ್ನಡದ ಹತ್ತನೆ ಸೀಸನ್ ಕೊಡ ಮುಗಿಯುವ ಹೊಸ್ತಿಲನ್ನು ತಲುಪಿದೆ ಎಂದು ಹೇಳಬಹುದು. ಇನ್ನೂ ಸೆಪ್ಟೆಂಬರ್ ತಿಂಗಳಲ್ಲಿ ದಶಕದ ಸಂಬ್ರಮ ಆಗಿರುವ ಕಾರಣದಿಂದ ಹ್ಯಾಪಿ ಬಿಗ್ ಬಾಸ್ ಎಂಬ ನಾಮ ಫಲಕ ಹೊತ್ತು ಈ ಬಾರಿಯ ಬಿಗ್ ಬಾಸ್ ನಲ್ಲಿ ಹೆಚ್ಚಿನ ಟ್ವಿಸ್ಟ್ ಹಾಗೂ ಮನೋರಂಜನೆಯನ್ನು ವೀಕ್ಷಿಸಬಹುದು ಎಂದು ವಾಹಿನಿ ಮೊದಲೇ ತಿಳಿಸಿತ್ತು. ಆದ್ರೆ ಸ್ಪರ್ಧಿಗಳ ಆಯ್ಕೆಯಲ್ಲಿ ಕೊಂಚ ಎಡವಿದೆ ಎಂದೇ ಹೇಳಬಹುದು. ಏಕೆಂದ್ರೆ ಮನೆ ಈವರೆಗೂ 12ವಾರ ತುಂಬುತ್ತಾ ಬಂದಿದ್ದರು ಕೊಡ ಮನೆಯಲ್ಲಿ ಒಂದು ದಿನವೂ ಯಾವ ಅನ್ಯೂನತೆಯನ್ನು ನಾವು ನೋಡಲು ಸಾಧ್ಯವಾಗಲೇ ಇಲ್ಲ. ಇನ್ನೂ ಅದೆಷ್ಟೋ ಬಾರಿ ವರ್ಸ್ಟ್ ಸೀಸನ್ ಎಂದು ನೇಮಕ ಕೊಡ ಪಡೆದುಕೊಂಡಿದೆ.
ಕಳೆದ ವಾರ ವೈಲ್ಡ್ ಕಾರ್ಡ್ ಎಂಟ್ರಿ ಆಗಿದ್ದ ಅವಿನಾಶ್ ಅವರು ಕೊಡ ಮನೆಯಿಂದ ಹೊರ ಬಂದರು. ಇನ್ನೂ ಈ ವಾರ ಕೊಡ ಒಂಬತ್ತು ಮಂದಿ ನಾಮಿನೇಟ್ ಆಗಿದ್ದಾರೆ. ಹಾಗೆಯೇ ಈ ವಾರ ಸ್ಪರ್ಧಿಗಳಿಗೆ ಕೊಂಚ ಸ್ಪೆಷಲ್ ಎಂದೇ ಹೇಳಬಹುದು ಕಾರಣ ದೊಡ್ಡ ಮನೆಗೆ ಆ ಮನೆಯಲ್ಲಿ 80ದಿನಗಳಿಂದ ಇರುವ ಸ್ಪರ್ಧಿಗಳ ಕುಟುಂಬವೇ ಬರುತ್ತಿದೆ. ಹಾಗಾಗಿ ತಮ್ಮ ಮನೆಯಿಂದ ದೂರ ಉಳಿದಿರುವವರನ್ನ ತಮ್ಮ ಪ್ರೀತಿ ಪಾತ್ರರೊಂದಿಗೆ ಭೇಟಿ ಮಾಡುವ ಸುಂದರ ಕ್ಷಣಗಳನ್ನು ಬಿಗ್ ಬಾಸ್ ಪಾಸ್ ಪ್ಲೆ ಆಟದ ಮೂಲಕ ತಿಳಿಸುತ್ತಾ ಇದ್ದಾರೆ. ಇನ್ನೂ ಈಗಾಗಲೇ ನಮ್ರತಾ ಅವರ ತಾಯಿಯಿಂದ ಶುರುವಾಗಿ ಎಲ್ಲಾ ಸ್ಪರ್ಧಿಗಳ ಮನೆಯವರು ಕೊಡ ಮನೆಗೆ ಬಂದು ಹೋಗಿದ್ದಾರೆ.
ಇನ್ನೂ ಕಾರ್ತಿಕ್ ಅವರಿಗೆ ಮಾತ್ರ ತಮ್ಮ ಅಮ್ಮನ ಹಾಡನ್ನು ಕೇಳಿಸಿ ಅವರನ್ನು ಭಾವುಕ ಮಾಡಿದ್ದು ಆ ನಂತರ ತನ್ನ ಅಮ್ಮನಿಗಾಗಿ ಮುಖ ತೊಳೆದು ರೆಡಿ ಆದ ಕಾರ್ತಿಕ್ ಗೆ ಪಾಸ್ ಹೇಳುತ್ತಾರೆ ಆದ್ರೆ ಅವರ ತಾಯಿ ಬಂದ ನಂತರವೂ ಕೊಡ ಅವರಿಗೆ ಪ್ಲೆ ಹೇಳದೆ ಇದ್ಧು ಅವರನ್ನು ಹಾಗೆಯೇ ಬೀಳ್ಕೊಡಲು ಬಿಗ್ ಬಾಸ್ ತಿಳಿಸುತ್ತಾರೆ. ಇನ್ನೂ ಎಲ್ಲರ ಮನೆಯಲ್ಲಿ ಪ್ರತಿ ಸದಸ್ಯರು ಬರುವ ಕಾರಣದಿಂದ ಕಾರ್ತಿಕ್ ಅವ್ರಿಗೆ ಬಿಗ್ ಬಾಸ್ ಸ್ಪರ್ಪ್ರೈಸ್ ನೀಡಲಿದ್ದಾರೆ ಎಂಬ ಊಹೆ ಕೊಡ ಕೇಳಿಬಂದಿದೆ. ಇನ್ನೂ ಮೂರು ವರ್ಷಗಳ ಕಾಲ ಮುಖ ನೋಡದೆ ಹಾಗೂ ಮಾತನಾಡದೆ ಇದ್ದ ಪ್ರತಾಪ್ ಅವರ ಕುಟುಂಬ ಅಂದರೆ ಅವರ ತಾಯಿ ಹಾಗೂ ತಂದೆ ಕೊಡ ಬಿಗ್ ಬಾಸ್ ಮನೆಗೆ ಬಂದಿದ್ದು ಆದರೆ ಕಾತುರದಿಂದ ಕಾಯುತ್ತಿದ್ದ ಪ್ರತಾಪ್ ಅವರಿಗೆ ಬಾಗಿಲ ಬಳಿ ನಿಲ್ಲಿಸಿ ಬಾಗಿಲನ್ನು ಮುಚ್ಚಿತ್ತಿದ್ದಾರೆ. ಅವರನ್ನು ಭೇಟಿ ಮಾಡಿ ಮಾತನಾಡಲು ಅವಕಾಶ ಮಾಡಿಕೊಡುತ್ತಾರೆ ಅಥವಾ ಕಾರ್ತಿಕ ಅವರಂತೆ ಮಾಡುತ್ತಾರೆ ಎಂದು ಕಾದು ನೋಡಬೇಕಿದೆ .
( video credit : Kannadanadu Tv )