ಕನಸಿನಲ್ಲಿ ಕಾಣುವ ವಿಷಯದ ಬಗ್ಗೆ ಎಚ್ಚರ ಇರಲಿ! ಯಾವ ವಸ್ತು ಯಾವ ಸೂಚನೆ ಗೊತ್ತಾ?
ಕನಸುಗಳ ವಿಷಯಕ್ಕೆ ಬಂದಾಗ, ಈ ಪದಗಳು ಸಂಪೂರ್ಣವಾಗಿ ಹೊಂದಿಕೊಳ್ಳುತ್ತವೆ. ಕನಸುಗಳು ಯಾವಾಗ ಬೇಕಾದರೂ ಮತ್ತು ಎಲ್ಲಿ ಬೇಕಾದರೂ ಬರಬಹುದು ಮತ್ತು ಕನಸಿನಲ್ಲಿ ಏನು ಬೇಕಾದರೂ ಆಗಬಹುದು. ಆದರೆ ಕನಸಿನಲ್ಲಿ ಏನನ್ನು ಕಂಡರೂ ಅದು ನಿಜ ಜೀವನದಲ್ಲಿ ಖಂಡಿತವಾಗಿಯೂ ಕೆಲವು ಅರ್ಥವನ್ನು ನೀಡುತ್ತದೆ. ಇಂದು ನಾವು ಇದೇ ರೀತಿಯ ಕನಸುಗಳ ಬಗ್ಗೆ ಮಾತನಾಡಲಿದ್ದೇವೆ.
ಕನಸಿನಲ್ಲಿ ಹಣವನ್ನು ಕಂಡರೆ ನೀವು ದೊಡ್ಡ ಗೆಲುವನ್ನು ಸಾಧಿಸಿದ್ದೀರಿ ಮತ್ತು ನೀವು ಸಾಕಷ್ಟು ಹಣವನ್ನು ಗೆದ್ದಿದ್ದೀರಿ ಎಂದು ನೀವು ಕನಸು ಕಂಡಿದ್ದರೆ, ನಿಜ ಜೀವನದಲ್ಲಿ ಇದು ತುಂಬಾ ಸಕಾರಾತ್ಮಕವಾಗಿದೆ ಎಂದರ್ಥ. ಕನಸಲ್ಲಿ ಕುಂಕುಮ ಕಂಡರೆ ಕೀರ್ತಿ ನಿವಗೆ ಅದೃಷ್ಟ ಶುರುವಾಯಿತು ಮತ್ತು ನಿಮ್ಮ ಆರೋಗ್ಯದಲ್ಲಿ ಚೇತರಿಕೆ ಎಂದರ್ಥ.ಅಡುಗೆಮನೆ ಕನಸಲ್ಲಿ ಕಂಡರೆ ನಿಮಗೆ ದೊರೆಯಲಿದೆ ಭೋಜನ ಪ್ರಾಪ್ತಿ ಹಾಗು ಸಾಲದಿಂದ ಮುಕ್ತಿ. ನಿಸ್ಚಿಂತೆ ಇಂದ ಬಾಳುವುದಕ್ಕೆ ತೊಂದರೆಯನ್ನುಂಟುಮಾಡುವ ಎರಡು ವಿಷಯಗಳಿಂದ ಮುಕ್ತಿ.
ಇನ್ನು ಕನಸಲ್ಲಿ ದೇವಸ್ಥಾನ ಕಂಡರೆ ನಿಮ್ಮ ಬಾಳಿನಲ್ಲಿ ಶುಭಕಾಲ ಬರುತ್ತಿದೆ ಎಂದರ್ಥ. ಶುದ್ಧವಾದ ನೀರು ಕನಸಲ್ಲಿ ಕಂಡರೆ ನಿಮಗೆ ಅದೃಷ್ಟ ಶುರುವಾಗುತ್ತಿದೆ ಎಂದರ್ಥ. ಅಶುದ್ಧವಾದ ನೀರು ಕನಸಲ್ಲಿ ಕಂಡರೆ ಕೆಟ್ಟಸುದ್ದಿ. ನಷ್ಟ ದುಃಖ. ನಿಧಿಯನ್ನು ಕನಸಲ್ಲಿ ಕಂಡರೆ - ಸಂಪತ್ತು ನಿಮ್ಮ ಸ್ವಂತ. ಚಿಲ್ಲರೆ ಕನಸಿನಲ್ಲಿ ಕಂಡರೆ - ಖರ್ಚು ಎಂದರ್ಥ
ದೀಪವನ್ನು ಕನಸಿನಲ್ಲಿ ನೋಡಿದರೆ ಸಮೃದ್ಧಿ ಹೆಚ್ಚುತ್ತದೆ. ಹೂಗಳನ್ನು ಕನಸಿನಲ್ಲಿ ಕಂಡರೆ ನೀವು ಒಳ್ಳೆಯ ಆರೋಗ್ಯವನ್ನು ಪಡೆಯುವುದು ಖಚಿತ. ಪುಸ್ತಕಗಳು ಕನಸಿನಲ್ಲಿ ಕಂಡರೆ ನಿಮ್ಮ ಮಾನಸಿಕ ಅರಿವು ಮೂಡುತ್ತದೆ ಎಂದರ್ಥ. ಆಯುಧಗಳನ್ನು ಕನಸಿನಲ್ಲಿ ಕಂಡರೆ ನಿಮ್ಮ ಜೀವನದಲ್ಲಿ ನಿಂತು ಹೋದ ಕೆಲಸಗಳು ಪೂರ್ತಿ ಆಗುತ್ತದೆ ಎಂದರ್ಥ. ಕನಸಿನಲ್ಲಿ ಕಾಗೆ ನೋಡಿದರೆ ನೀವು ಜೀವನದಲ್ಲಿ ಇಡುವ ಹೆಜ್ಜೆ ತುಂಬ ಎಚ್ಚರಿಕೆಯಿಂದ ಇರಬೇಕಾಗಿ ಸೂಚನೆ. ಕನಸಿನಲ್ಲಿ ಸತ್ತವರು ಕಂಡರೆ ನಿಮಗೆ ನಿಮ್ಮ ಹಿರಿಯರಿಂದ ಬಂದ ಆಶಿರ್ವಾದದ ಸೂಚನೆ. ಕನಸಿನಲ್ಲಿ ವಾಹನಗಳನ್ನ ಕಂಡರೆ ಅದು ಪ್ರಯಾಣದ ಸಂಕೇತ. ಕುದುರೆಯ ಮೇಲೆ ಸವಾರಿ ಮಾಡಿದ ಹಾಗೆ ಕನಸು ಕಂಡರೆ ಅದರ ಸೂಚನೆ ಏನೆಂದರೆ ಕೆಲಸದಲ್ಲಿ ವಿಜಯ ಎಂದರ್ಥ. ( MS Voice Kannada )