ಡಬಲ್ ಎಲಿಮಿನೇಷನ್ ಬಿಸಿ ಮುಟ್ಟಿಸಿದ ಬಿಗ್ಬಾಸ್...! ನಮ್ರತಾ ಜೊತೆ ಪ್ರಭಲ ಸ್ಪರ್ಧಿಯೂ ಔಟ್

ಡಬಲ್ ಎಲಿಮಿನೇಷನ್ ಬಿಸಿ ಮುಟ್ಟಿಸಿದ ಬಿಗ್ಬಾಸ್...! ನಮ್ರತಾ ಜೊತೆ ಪ್ರಭಲ ಸ್ಪರ್ಧಿಯೂ ಔಟ್

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಎಂದೇ ಕರೆಯಲ್ಪಡುವ ಬಿಗ್ ಬಾಸ್ ಇದೀಗ ಕೊನೆಯ ಹಂತಕ್ಕೆ ಬಂದು ತಲುಪಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಶೋ ಮುಕ್ತಾಯ ಆಗಲಿದೆ. ಬಿಗ್ಬಾಸ್ ಕಾರ್ಯಕ್ರಮ ಸಾಕಷ್ಟು ಜನರಿಗೆ ಸಿಗುವಂತಹ ಕಾರ್ಯಕ್ರಮ ಅಲ್ಲ. ಆದರೆ ಕೆಲವು ಜನರು ಈ ವೇದಿಕೆಯಿಂದ ತುಂಬಾನೇ ಪಡೆದುಕೊಂಡು ಹೋಗುತ್ತಾರೆ. ಅಷ್ಟೇ ಜನಮನ್ನಣೆ ಅಭಿಮಾನ ಹೆಸರು ಹಣ ಎಲ್ಲವನ್ನ ಈ ಕಾರ್ಯಕ್ರಮ ಅವರಿಗೆ ನೀಡುತ್ತದೆ. ಇದಕ್ಕೆಲ್ಲ ಕಾರಣ ನಾವು ಅಂದ್ರೆ ಪ್ರೇಕ್ಷಕರು. ಶೋ ಯಶಸ್ವೀಯಾಗಿ ಮುಗಿಯುತ್ತಿದೆ ಅಂದ್ರೆ ಅದಕ್ಕೆಲ್ಲಾ ನಾವೇ ಕಾರಣ. 

ಹೌದು ಈಗಾಗಲೇ ಬಿಗ್ ಮನೆಯಲ್ಲಿರುವ ಸ್ಪರ್ಧಿಗಳಿಗೆ ನಾಮಿನೇಷನ್ ಪ್ರಕ್ರಿಯೆ ಬಿಸಿ ಏರಿದೆ. ವಾರಂತ್ಯ ಕೂಡ ಬಂದೇ ಬಿಟ್ಟಿದೆ.. ಹೌದು ಈ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ ಈ ರಾತ್ರಿ ಪ್ರಸಾರ ಆಗಲಿದ್ದು ಯಾರೆಲ್ಲಾ ಬಿಗ್ ಬಾಸ್ ಮನೆಯಲ್ಲಿ ಉಳಿಯಲಿದ್ದಾರೆ, ಯಾರೆಲ್ಲಾ ಬಿಗ್ ಬಾಸ್ ಮನೆಯಿಂದ ಹೊರ ಬರಲಿದ್ದಾರೆ ಎನ್ನುವ ವಿಚಾರ ತಿಳಿಯಲಿದೆ. ಹೌದು ಅದಕ್ಕಿಂತ ಮುಂಚೆ ಕಳೆದ ವಾರ ನಾಮಿನೇಷನ್ ಪ್ರಕ್ರಿಯೆಯಲ್ಲಿ ಸಂಗೀತ ಮತ್ತು ತುಕಾಲಿ ಹೊರತುಪಡಿಸಿ, ಪ್ರತಾಪ್, ವಿನಯ್, ಕಾರ್ತಿಕ್ ವರ್ತೂರು ಸಂತೋಷ್, ಹಾಗೆ ನಮೃತ ಅವರು ಕೂಡ ನಾಮಿನೇಟ್ ಆಗಿದ್ದರು.

ಇದರ ನಡುವೆ ಎಲ್ಲರಿಗೂ ಗೊತ್ತಿರುವ ವಿಚಾರ ವಾರದ ಮಧ್ಯೆ ತನಿಷ ಕುಪ್ಪಂಡ ಅವರನ್ನು ಹೊರ ಕಳಿಸಿದ್ದು ಕೆಲವರಲ್ಲಿ ಅಸಮಾಧಾನ ಮೂಡಿಸಿತು. ಈಗ ಉಳಿದ ಈ ಐದು ಜನರ ಪೈಕಿ ಒಬ್ಬರೇ ಹೊರಗಡೆ ಬರುತ್ತಾರೆ ಇಂದುಎಂದು ಸಾಕಷ್ಟು ಜನರು ಅಂದುಕೊಂಡಿದ್ದರು. ಅದು ಉಲ್ಟಾ ಆಗಿದೆ ಸ್ನೇಹಿತರೆ,, ಏನು ಅಂದರೆ ಈ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಮೊದಲು ಸೇವ್ ಆಗಿದ್ದು ವಿನಯ್, ಎರಡನೇ ಸ್ಪರ್ಧೆ ಪ್ರತಾಪ್, ಮೂರನೇ ಸ್ಪರ್ಧೆ ಕಾರ್ತಿಕ್, ಹಾಗೆ ಇನ್ನುಳಿದ ನಮೃತ ಮತ್ತು ವರ್ತೂರ್ ಅವರು ಬಾಟಮ್ ನಲ್ಲಿ ಕುಳಿತಿದ್ದಾರೆ ಎಂದು ಕೇಳಿ ಬಂದಿದೆ.

ನಮಗೆ ಮಾಹಿತಿ ಲಭ್ಯವಾಗಿರುವ ಪ್ರಕಾರ ನಮೃತ  ಅವರು ಬಿಗ್ ಬಾಸ್ ಮನೆಯಿಂದ ಈ ದಿನ ಹೊರ ಬರುತ್ತಿದ್ದಾರೆ. ಜೊತೆಗೆ ಡಬ್ಬಲ್ ಎಲಿಮಿನೇಷನ್ ಕೂಡ ಎಂದು ಕೇಳಿ ಬಂದಿದ್ದು, ವರ್ತೂರ್ ಅವರು ಕೂಡ ಹೊರಗಡೆ ಬರುವ ಸಾಧ್ಯತೆ ಹೆಚ್ಚಿದೆ ಎಂದು ಮಾಹಿತಿ ಲಭ್ಯವಾಗಿದೆ. ಇಬ್ಬರು ಎಲಿಮಿನೇಷನ್ ಆಗಿದ್ದು ಟಾಪ್ ಫೈವ್ ನಲ್ಲಿ ಪ್ರತಾಪ್, ವಿನಯ್, ಕಾರ್ತಿಕ್, ಸಂಗೀತ, ಹಾಗೂ ತುಕಾಲಿ ಉಳಿದಿದ್ದಾರೆ ಎನ್ನಲಾಗಿದೆ. ಇಲ್ಲಿದೆ ನೋಡಿ ಆ ವಿಡಿಯೋ, ಮತ್ತು ನಿಮ್ಮ ಪ್ರಕಾರ ಯಾರು ಈ ವಾರ ಹೊರಗಡೆ ಬರಬೇಕಿತ್ತು, ಹಾಗೆ ಯಾವ ಸ್ಪರ್ಧಿ ಟಾಪ್ ಫೈ ನಲ್ಲಿ ಉಳಿಯಬೇಕಿತ್ತು ಎಂಬುದಾಗಿ ನಮಗೆ ಕಮೆಂಟ್ ಮಾಡಿ ತಿಳಿಸಿ, ವಿಡಿಯೋ ಶೇರ್ ಮಾಡಿ ಧನ್ಯವಾದಗಳು..