ಈ ಬಾರಿ ಡಬಲ್ ಎಲಿಮಿನೇಷನ್ ಎಂದ ಬಿಗ್ ಬಾಸ್! ಮನೆಗೆ ಹೋಗುವ ಇಬ್ಬರು ಸದಸ್ಯರು ಯಾರು ಗೊತ್ತಾ?

ಈ ಬಾರಿ ಡಬಲ್ ಎಲಿಮಿನೇಷನ್ ಎಂದ ಬಿಗ್ ಬಾಸ್! ಮನೆಗೆ ಹೋಗುವ ಇಬ್ಬರು ಸದಸ್ಯರು ಯಾರು ಗೊತ್ತಾ?

ಇನ್ನೂ ಈ ಬಾರಿಯ ಬಿಗ್ ಬಾಸ್ ದಶಕದ ಸಂಬ್ರಮ ಆಗಿರುವ ಕಾರಣದಿಂದ ಈ ಸೀಸನ್ ಉಳಿದ ಎಲ್ಲಾ ಸೀಸನ್ ಗಳಿಗಿಂತ ಹೆಚ್ಚು ವಿಭಿನ್ನವಾಗಿ ಇರಲಿದೆ ಎಂದು ವಾಹಿನಿ ಮೊದಲೇ ಘೋಷಣೆ ಮಾಡಿತ್ತು. ಇನ್ನೂ ಅದರಂತೆಯೇ ಪ್ರೇಕ್ಷಕರ ಮನೋರಂಜನೆಯನ್ನು ದುಪ್ಪಟ್ಟು ಮಾಡುವಂತೆ ಕೊಡ ಸಾಕಷ್ಟು ಟ್ವಿಸ್ಟ್ ಹಾಗೂ ಟರ್ನ್ ಕೊಡ ನೀಡುತ್ತಾ ಬಂದಿದ್ದರು. ಆದರೆ ವಾಹಿನಿ ಈ ಬಾರಿ ಸ್ಪರ್ಧಿಗಳ ವಿಚಾರದಲ್ಲಿ ಕೊಂಚ ಎಡವಿದ್ದಾರೆ ಎಂದು ಹೇಳಬಹುದು. ಏಕೆಂದ್ರೆ ಮನೆ 50ದಿನಗಳು ಕಳೆದಿದ್ದರು ಕೂಡ ಮನೆಯಲ್ಲಿ ಹೊಂದಾಣಿಕೆ ಮಾಡಲು ಕೊಂಚವೂ ಸಾದ್ಯವಾಗುತ್ತಿಲ್ಲ. ಇವರ ನಡೆಯುವ ಜಗಳ ಆಟವನ್ನು ಹೊರತು ಪಡಿಸಿ ಪರಸ್ಪರ ದ್ವೇಷಕ್ಕೆ ತಿರುಗುತ್ತಾ ಬರುತ್ತಿದೆ.

ಇನ್ನೂ ಇವರ ದ್ವೇಷ ಆಟಗಳಲ್ಲಿ ಪ್ರತೀಕಾರ ತೀರಿಸಿಕೊಳ್ಳುವ ರೀತಿಯಲ್ಲಿ ನಡೆಯುತ್ತಾ ಬರುತ್ತಿದೆ. ಇನ್ನೂ ಬಿಗ್ ಬಾಸ್ ಈ ವಾರ ಗಂಧರ್ವ ಹಾಗೂ ರಾಕ್ಷಸರ ಟಾಸ್ಕ್ ನೀಡಿದ್ದರು. ಆದರೆ ರಾಕ್ಷಸ ರೂಪ ತಾಳಿದ ಎರಡು ತಂಡಗಳು ಕೊಡ ತಮ್ಮ ಅಸಲಿ  ರಾಕ್ಷಸ ಗುಣಗಳನ್ನು ತೋರಿಸಿದ್ದಾರೆ. ಆದರೆ ವಿನಯ ಟೀಂ ಅವರು ಅತ್ಯಂತ ಕ್ರೂರವಾಗಿ ಆಟವಾಡಿದ್ದಾರೆ. ಇನ್ನೂ ಈ ಕಾರಣದಿಂದ ನೀರು ಎರಚುವ ಟಾಸ್ಕ್ ನಲ್ಲಿ ನೀರಿಗೆ ಕೆಮಿಕಲ್ಸ್ ಅಂದರೆ ಸೋಪಿನ ಪುಡಿ, ಪಿನೈಲ್ ಹಾಗೂ ಶ್ಯಾಂಪೂ ಬಳಸಿರುವ ಕಾರಣ ಪ್ರತಾಪ್ ಹಾಗೂ ಸಂಗೀತ ಅವರಿಗೆ ಸಾಕಷ್ಟು ಇಂಜ್ಯುರಿ ಆಗಿ ಬೆಂಗಳೂರಿನ ರಾಮಯ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಸುದ್ದಿ ಹೊರಬಿದ್ದಿದೆ. ಇದೀಗ ಬಿಗ್ ಬಾಸ್ ಮನೆಯಲ್ಲಿ ನಡೆಯುತ್ತಿರುವ ಈ ಕೃತ್ಯಗಳಿಗೆ ಎಲ್ಲರೂ ಧ್ವನಿ ಎತ್ತಿದ್ದಾರೆ.

ಹಾಗೆಯೇ ಸಂಗೀತ ಅವರ ಅಣ್ಣ ಕೊಡ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ನ್ಯಾಯಕ್ಕಾಗಿ ನಾವು ಕಿಚ್ಚ ಸುದೀಪ್ ಅವರು ಬರುವ ವರೆಗೂ ಯಾಕೆ ಕಾಯಬೇಕು ಅನ್ಯಾಯ ಎಂದ ಕೂಡಲೇ ಅಲ್ಲೇ ವಿರೋಧ ಮಾಡಬಹುದಲ್ವ  ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ. ಹಾಗೆಯೇ ಹಲವಾರು ಮೂಲಗಳ ಪ್ರಕಾರ ಈಗಾಗಲೇ ಪ್ರತಾಪ್ ಅವರೂ ಮನೆಗೆ ಹಿಂದಿರುಗಿದ್ದು ಈ ವರೆಗೂ ಸಂಗೀತ ಅವರು ಮನೆಗೆ ಬಂದಿಲ್ಲ. ಹಾಗಾಗಿ ಎಲ್ಲರಲ್ಲೂ ಆತಂಕ ಸೃಷ್ಟಿ ಆಗಿದೆ. ಇನ್ನೂ ಈ ಕಾರಣಕ್ಕೆ ಕಿಚ್ಚ ಸುದೀಪ್ ಅವರು ಇವತ್ ಸಖತ್ ಕ್ಲಾಸ್ ಮಾಡಲಿದ್ದಾರೆ ಎನ್ನುವ ನಿರೀಕ್ಷೆ ಕೊಡ ಎಲ್ಲರಲ್ಲೂ ಇದೆ.

ಹಾಗೆಯೇ ಈ ಬಾರಿ ಒಂಬತ್ತು ಮಂದಿ ನಾಮಿನೇಟ್ ಆಗಿರುವ ಕಾರಣ ಈ ಬಾರಿ ಡಬಲ್ ಎಲಿಮಿನೇಷನ್ ಏರಬಹುದು ಎನ್ನುವ ಅನುಮಾನ ಕೊಡ ಹುಟ್ಟಿಕೊಂಡಿದೆ. ಇದೀಗ ಕಳೆದ ವಾರ ಹೋಗಬೇಕಿದ್ದ ಸ್ನೇಹಿತ್ ಹಾಗೂ ಮೈಕಲ್ ಇಬ್ಬರೇ ಹೋಗುತ್ತಾರೋ ಅಥವಾ ಮನೆಯಲ್ಲಿ ಈ ವಾರ ಯಾವ ಪ್ರದರ್ಶನ ನೀಡದೆ ಇರುವ ಸಿರಿ ಅವರೊಟ್ಟಿಗೆ ಯಾರನ್ನು ಕರೆದುಕೊಂಡು ಹೋಗುತ್ತಾರೆ ಎಂದು ನಾವು ಕಾದು ನೋಡಬೇಕಿದೆ. ಅಥವಾ ಆಟದಲ್ಲಿ ಬಹಳ ಕ್ರೌರ್ಯ ಸೃಷ್ಟಿ ಮಾಡಿದ ಈ ಎಲಿಮಿನೇಷನ್ ಗೆ ನಮ್ರತಾ ಹಾಗೂ ವಿನಯ್ ಬಲಿ ಆಗುತ್ತಾರ ಎಂದು ನಾವು ಕಾದು ನೋಡಬೇಕಿದೆ.