ದರ್ಶನ ಕೇಸ್ ಬಗ್ಗೆ ಮತ್ತೆ ಶಾಕಿಂಗ್ ಹೇಳಿಕೆ ಕೊಟ್ಟ ನಟಿ ರಮ್ಯಾ !! ಏನು ನೋಡಿ
![ದರ್ಶನ ಕೇಸ್ ಬಗ್ಗೆ ಮತ್ತೆ ಶಾಕಿಂಗ್ ಹೇಳಿಕೆ ಕೊಟ್ಟ ನಟಿ ರಮ್ಯಾ !! ಏನು ನೋಡಿ ದರ್ಶನ ಕೇಸ್ ಬಗ್ಗೆ ಮತ್ತೆ ಶಾಕಿಂಗ್ ಹೇಳಿಕೆ ಕೊಟ್ಟ ನಟಿ ರಮ್ಯಾ !! ಏನು ನೋಡಿ](/news_images/2024/06/ramya-darshan1719041010.jpg)
ದರ್ಶನ್ ಹತ್ಯೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಗಳು ಹೊರಬಿದ್ದಿವೆ. ಚಿತ್ರದುರ್ಗದ 33 ವರ್ಷದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಕನ್ನಡ ನಟ ದರ್ಶನ್ ತೂಗುದೀಪ, ಅವರ ಪತ್ನಿ ಪವಿತ್ರಾ ಗೌಡ ಸೇರಿದಂತೆ 11 ಮಂದಿಯನ್ನು ಬಂಧಿಸಲಾಗಿದೆ. ರೇಣುಕಾಸ್ವಾಮಿ ಅವರು ಪವಿತ್ರಾ ಗೌಡ ಅವರಿಗೆ ಸಾಮಾಜಿಕ ಮಾಧ್ಯಮದಲ್ಲಿ ಕಳುಹಿಸಿದ ಅವಹೇಳನಕಾರಿ ಮತ್ತು ಅಶ್ಲೀಲ ಸಂದೇಶಗಳಿಂದ ಈ ಘಟನೆ ಉದ್ಭವಿಸಿದೆ ಎಂದು ವರದಿಯಾಗಿದೆ. ಈ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಆತನ ಸಂಗಡಿಗರು ರೇಣುಕಾಸ್ವಾಮಿಯನ್ನು ಅಪಹರಿಸಿ ಬೆಂಗಳೂರಿನ ಶೆಡ್‌ವೊಂದರಲ್ಲಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ನಂತರ ಅವರ ದೇಹವನ್ನು ಮಳೆನೀರು ಚರಂಡಿಗೆ ಎಸೆಯಲಾಯಿತು. ಮೂವರು ಆರೋಪಿಗಳು ಪೊಲೀಸರಿಗೆ ಶರಣಾಗಿದ್ದು, ಕೊಲೆಯಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡು ದರ್ಶನ್ ಇತರರು ಆರೋಪಿಗಳಾಗಿ ಕೊಲೆಗಾಗಿ ಬಂಧಿತರು. ಇನ್ನೂ ಮೊನ್ನೆ ನಡೆದ ಕೋರ್ಟ್ ನ ತೀರ್ಪು ದರ್ಶನ ಹಾಗೂ 3ಜನ ಆರೋಪಿಗಳು ಮಾತ್ರ ಕಾಮಾಕ್ಷಿ ಪಾಳ್ಯದ ಪೊಲೀಸ್ ಕಸ್ಟಡಿಗೆ ಹಾಗೂ ಪವಿತ್ರ ಗೌಡ ಸೇರಿದಂತೆ ಮಿಕ್ಕ 6ಜನ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿಗೆ ರವಾನೆ ಮಾಡಲಾಗಿದೆ. ಇನ್ನೂ ಎರಡು ದಿನಗಳ ಕಾಲ ದರ್ಶನ್ ಅವರು ಪೊಲೀಸರ ಕಸ್ಟಡಿ ಯಲ್ಲಿ ಇರುವಂತೆ ಕೋರ್ಟ್ ಆದೇಶ ನೀಡಿದೆ. ಇನ್ನೂ ಎರಡು ದಿನಗಳು ಕಳೆದ ಬಳಿಕ ದರ್ಶನ್ ವಿರುದ್ಧ ಯಾವ ಸಾಕ್ಷಿ ಸಿಗದೇ ಇದ್ದರೆ ಅವರನ್ನು ಜೈಲಿನಿಂದ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇನ್ನೂ ಎಷ್ಟೆಲ್ಲಾ ಆಗಿದ್ದರು ಕೊಡ ದರ್ಶನ್ ಪರ ಯಾರೊಬ್ಬ ಸೆಲೆಬ್ರಿಟಿ ಕೊಡ ದ್ವನಿ ಎತ್ತುತ್ತಿಲ್ಲ. ಅಷ್ಟೇ ಯಾಕೆ ಸದಾ ಸ್ನೇಹಿತರು ಎಂದು ಜೊತೆಗೆ ಇರುತ್ತಿದ್ದ ವ್ಯಕ್ತಿಗಳು ಕೊಡ ಯಾವ ಪರ ಹಾಗೂ ವಿರೋಧದ ಮಾತುಗಳನ್ನು ಹೇಳಲು ಸಿದ್ಧವಿಲ್ಲ. ಆದರೆ ದರ್ಶನ್ ಅರೆಸ್ಟ್ ಆಗುತ್ತಿದ್ದಂತೆ ಅವರಿಗೆ ಗಲ್ಲು ಅಥವಾ ಜೀವಾವಧಿ ಶಿಕ್ಷೆ ಆಗಲೇಬೇಕು ಎಂದು ರಮ್ಯಾ ಟ್ವೀಟ್ ಮಾಡಿದ್ದರು. ಇದೀಗ ಮತ್ತೆ ರಮ್ಯಾ ಅವರು ನ್ಯಾಯದ ಪರವಾಗಿ ನಿಂತಿರುವ ಮದ್ಯಮ ಹಾಗೂ ಪೊಲೀಸರಿಗೆ ಶ್ಲಾಘಿಸಿದ್ದಾರೆ. ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ರಮ್ಯಾ ವೈರಲ್ ಆಗಿದ್ದು. ದರ್ಶನ್ ವಿರುದ್ಧ ನಿಂತಿರುವ ರಮ್ಯಾ ಅವರಿಗೆ ಪರ ಹಾಗೂ ವಿರೋಧಗಳು ಹೆಚ್ಚು ಬರುತ್ತಿದೆ. ಇನ್ನೂ ದರ್ಶನ್ ಅವರ್ ಕೇಸ್ ಯಾವ ತಿರುವು ಪಡೆಯಲಿದೆ ಎಂದು ಕಾದು ನೋಡಬೇಕಿದೆ .
![ದರ್ಶನ ಕೇಸ್ ಬಗ್ಗೆ ಮತ್ತೆ ಶಾಕಿಂಗ್ ಹೇಳಿಕೆ ಕೊಟ್ಟ ನಟಿ ರಮ್ಯಾ !! ಏನು ನೋಡಿ ದರ್ಶನ ಕೇಸ್ ಬಗ್ಗೆ ಮತ್ತೆ ಶಾಕಿಂಗ್ ಹೇಳಿಕೆ ಕೊಟ್ಟ ನಟಿ ರಮ್ಯಾ !! ಏನು ನೋಡಿ](/news_imgq/600x80/2024/06/divya-spandana-aka-ramya-speaks-about-darshn-renuka-case_11719041010.jpg)