ಕಾರ್ತಿಕ್ ಎಷ್ಟು ಕೇಳಿಕೊಂಡರು ಬಿಗ್ ಮನೆಯಿಂದ ಹೊರ ಬಂದ ಸಂಗೀತ..! ಅಸಲಿಗೆ ಇದು ನಿಜವೇ ಆಗಿದೆ ನೋಡಿ

ಕಾರ್ತಿಕ್ ಎಷ್ಟು ಕೇಳಿಕೊಂಡರು ಬಿಗ್ ಮನೆಯಿಂದ ಹೊರ ಬಂದ ಸಂಗೀತ..! ಅಸಲಿಗೆ ಇದು ನಿಜವೇ ಆಗಿದೆ ನೋಡಿ

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆಗಿ ಈಗಾಗಲೇ ಒಂಬತ್ತು ಸೀಸನ್ ಗಳನ್ನು ಮುಗಿಸಿದ್ದ ಬಿಗ್ ಬಾಸ್ ಈ ಬಾರಿ ರೋಚಕತೆ ಆಟದ ವೈಖರಿಯನ್ನು ಬದಲು ಮಾಡಿಕೊಂಡಿದೆ..ಬಿಗ್ ಬಾಸ್ 10 ತುಂಬಾನೇ ಸಕ್ಕತಾಗಿ ಮೂಡಿ ಬರುತ್ತಿದೆ. ಇಲ್ಲಿಯವರೆಗೆ ಬಿಗ್ಬಾಸ್ ಮನೆಯಲ್ಲಿಯ ಎಲ್ಲರ ಅಸಲಿ ಮುಖಗಳು ಹೆಚ್ಚು ಬಯಲಾಗಿದ್ದವು. ಅದನ್ನು ನೀವು ಕೂಡ ನೋಡಿದ್ದೀರಿ. ಆದರೆ ಈ ಬಾರಿ ಆ ರೀತಿ ಮುಖವಾಡ ಹೊತ್ತು ನಾಟಕ ಮಾಡುವ ರೀತಿ ಕಾಣಿಸಿಕೊಂಡ ಕೆಲವು ಸ್ಪರ್ಧಿಗಳು ವಾರದಿಂದ ವಾರಕ್ಕೆ ಅವರತನವನ್ನು ಹಾಗೆ ಅವರ ಬದಲಾವಣೆಯನ್ನು ಅವರ ಮುಖವಾಡನ್ನು ಕಳಚಿ ಇಡುವುದರಲ್ಲಿ ಮುಂದಾಗುತ್ತಿದ್ದಾರೆ.

ಕಾರ್ತಿಕ್ ಮತ್ತು ಸಂಗೀತ ಜೊತೆಗೆ ತನುಷ ಹಾಗೂ ಪ್ರತಾಪ್ ಅವರು ಒಳ್ಳೆಯ ಸ್ನೇಹಿತರು ಆಗಿದ್ದರು. ಹಾಗೆ ಅಷ್ಟೇ ಚೆನ್ನಾಗಿ ಟಾಸ್ಕ್ ಕೂಡ ಮಾಡುತ್ತಾ ಬಂದವರು.  ಆದರೆ ಬರ ಬರುತ್ತಾ ನಿನ್ನೆ ಮೊನ್ನೆಯ ಎಪಿಸೋಡ್ ಗಳಲ್ಲಿ ಕಳೆದ ವಾರ ಕಿಚ್ಚನ ಪಂಚಾಯಿತಿ ಬಳಿಕ ಸಂಗೀತ ಅವರು ಪೂರ ಬದಲಾಗಿ ಹೋಗಿದ್ದಾರೆ ಎನ್ನಬಹುದು. ಹೊರಗಿನ ಬಿಗ್ ಬಾಸ್ ಪ್ರಿಯರಿಗೆ ಸಂಗೀತ ತುಂಬಾ ಸೊಕ್ಕಿನ ಹುಡುಗಿ, ಆಕೆ ಆಟ ಸರಿಯಾಗಿ ಆಡುತ್ತಿಲ್ಲ, ಅವಳು ಹೆಚ್ಚು ಸ್ವಾರ್ಥಿ ಆಗಿದ್ದಾಳೆ ಹಾಗೆ ಹೀಗೆ ಎನ್ನುವ ಮಾತುಗಳೇ ಹೆಚ್ಚು ಕೇಳಿ ಬಂದಿದ್ದು, ಅವರು ನಿನ್ನೆ ಕಾರ್ತಿಕ್ ಅವರೊಟ್ಟಿಗೆ ಮಾತಿಗೆ ಇಳಿದರು.  

ಸಂಗೀತಾ ಹೇಳುವ ಹಾಗೆ, ನಾನು ಇಲ್ಲಿ ಈಗ ಏನೇ ಮಾಡಿದರು ತಪ್ಪಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ನಾನು ಏನು ಮಾತನಾಡಿದರು ಜಗಳಕ್ಕೆ ಬರುತ್ತಿದ್ದಾರೆ. ಹಾಗೆ ಹೀಗೆ ಎಂದು ಬಿಗ್ ಬಾಸ್ ಮನೆಯ ಸ್ಪರ್ಧಿ ಕಾರ್ತಿಕ್ ಮೇಲೆ ನೋವಿನ ವಿಚಾರವಾಗಿ ಹೇಳುತ್ತಾ, ಕಣ್ಣೀರು ಸುರಿಸಿದ್ದರು.. ಏನೋ ಮಾಡಲು ಹೋದರೆ ಏನು ಆಗುತ್ತಿದೆ, ಎಲ್ಲದಕ್ಕೂ ನನ್ನ ಮೇಲೆ ಎಲ್ಲರೂ ಸಿಡಿ ಮಿಡಿ ಮಾಡುತ್ತಿದ್ದಾರೆ ಎಂದು ತುಂಬಾನೇ ಕಣ್ಣೀರು ಹಾಕುತ್ತಾ ಸಂಗೀತ ಬಿಗ್ ಬಾಸ್ ಪ್ಲೀಸ್ ನನ್ನನ್ನು ಇಲ್ಲಿಂದ ಕಳಿಸಿ ಬಿಡಿ ನನಗೆ ಇಲ್ಲಿ ಇರಲು ಆಗುತ್ತಿಲ್ಲ ಎಂದಿದ್ದರು..

ಅದರಂತೆ ಇದೇ ಮೊಟ್ಟಮೊದಲ ಬಾರಿಗೆ ಬಿಗ್ ಬಾಸ್ ಸ್ಪರ್ಧಿಯೋಬ್ಬರ ಮನವಿ ಒಪ್ಪಿ ಬಿಗ್ ಬಾಸ್ ಡೋರ್ ಓಪನ್ ಮಾಡಿ ಬಿಟ್ಟಿದ್ದಾರೆ ಗೆಳೆಯರೇ. ಇದೇ ಮೊಟ್ಟ ಮೊದಲ ಬಾರಿಗೆ ಸ್ಪರ್ಧಿ ಮನವಿ ಮಾಡಿದ ತಕ್ಷಣ ಡೋರ್ ಓಪನ್ ಆಗಿದ್ದು, ಸಂಗೀತ ಅವರು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ ಎಂದು ಕೆಳಲಾಗಿದ್ದು ಪ್ರಮೋದಲ್ಲಿ ಕಂಡು ಬಂದಿರುವ ಆ ದೃಶ್ಯ ನಿಜವೇ ಆಗಿದೆಯಂತೆ.. ಕಾರ್ತಿಕ್ ಹಾಗೂ ತುಕಾಲಿ ಸಂತೋಷ ಅವರು ಎಷ್ಟು ಕೇಳಿಕೊಂಡರು ಸಂಗೀತ ಅವರು ಬಿಗ್ ಬಾಸ್ ಮನೆಯಿಂದ ಸೆಲ್ಫ್ ಆಗಿ ಹೊರ ಬಂದಿದ್ದಾರೆ ಎನ್ನಲಾಗಿ ಕೆಲವು ಕಡೆ ಕೇಳಿ ಬರುತ್ತಿದೆ..

ಅಸಲಿಗೆ ಸಂಗೀತಾ ಬಿಗ್ ಮನೆಯ ಬಿಟ್ಟು ಹೋಗಿದ್ದಾರ ಅಥವಾ ಸಂಗೀತ ಅವರು ಬಿಗ್ ಬಾಸ್ ಮನೆಯಿಂದ ಹೋಗಿಯೇ ಇಲ್ವಾ ಎಲ್ಲದಕ್ಕೂ ಇಂದಿನ ಎಪಿಸೋಡ್ ತೆರೆ ಎಳೆಯಲಿದೆ..ಹಾಗೆ ಸೀಕ್ರೆಟ್ ರೂಮ್ ಗೆ ಸಹ ಹೋಗಿರಬಹುದು. ಇಲ್ಲಿದೆ ನೋಡಿ ಆ ವಿಡಿಯೋ, ಮತ್ತು ನಿಮ್ಮ ಪ್ರಕಾರ ಸಂಗೀತ ಅವರ ಕಳೆದ ಎರಡು ದಿನದ ಆಟದ ಬಗ್ಗೆ ಏನು ಹೇಳುತ್ತೀರಿ, ನಮಗೆ ಈಗ ಕಾಮೆಂಟ್ ಮಾಡಿ ತಿಳಿಸಿ, ಧನ್ಯವಾದಗಳು...