150 ಕೋಟಿ ರೂಪಾಯಿ ಮನೆ ಕಟ್ಟಿಸೋಕೆ ಈ ಪವರ್ಫುಲ್ ದೇವಸ್ತಾನ ಕಾರಣ ಎಂದ ಧನುಷ್..! ಹೆಂಡ್ತಿಗೆ ಮಾಡಿದ್ದ ಚಾಲೆಂಜ್ ಏನು ನೋಡಿ

150 ಕೋಟಿ ರೂಪಾಯಿ ಮನೆ ಕಟ್ಟಿಸೋಕೆ ಈ ಪವರ್ಫುಲ್ ದೇವಸ್ತಾನ ಕಾರಣ ಎಂದ ಧನುಷ್..! ಹೆಂಡ್ತಿಗೆ ಮಾಡಿದ್ದ ಚಾಲೆಂಜ್ ಏನು ನೋಡಿ

ತಮಿಳುನಾಡಿನ ಸೂಪರ್ ಸ್ಟಾರ್ ನಟರಲ್ಲಿ ನಟ ಧನುಷ್ ಕೂಡ ಒಬ್ಬರು. ಹೌದು ಇವರ ದಾಂಪತ್ಯ ಜೀವನ ಇದೀಗ ಅಷ್ಟು ಸುಲಭವಾಗಿ ಇಲ್ಲ, ಇಬ್ಬರು ಬೇರೆ ಬೇರೆ ಆಗಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ. ನಟ ರಜನಿಕಾಂತ್ ಅವರ ಪುತ್ರಿ ಐಶ್ವರ್ಯ, ನಟ ಧನುಷ್ ತಮಗಿಂತ ಚಿಕ್ಕ ವಯಸ್ಸಿನವರಾದರೂ ಕೂಡ ಪ್ರೀತಿಸಿ ಮದುವೆ ಆಗುತ್ತಾರೆ..ಅವರು ಒಬ್ಬ ಮಧ್ಯಂತರ ವರ್ಗದ ಹುಡುಗನು ಎಂಬುದಾಗಿ ಮೊದಲೇ ಗೊತ್ತಿದ್ದರೂ ಕೂಡ ಆತನ ಪ್ರೀತಿಸಿ ಮದುವೆ ಆಗುತ್ತಾರೆ ಐಶ್ವರ್ಯ. ಇವರಿಬ್ಬರ ಕೌಟುಂಬಿಕ ಜೀವನ ಹೇಳಿಕೊಳ್ಳುವ ಹಾಗಿಲ್ಲ ಎಂದು ಕೆಲ ದಿನಗಳ ಹಿಂದೆ ಸುದ್ದಿ ಆಗಿತ್ತು. ನಂತರ ಡೈವೋರ್ಸ್ ಕೂಡ ಆಗಿದೆ ಎಂದು ತಿಳಿದುಬಂದಿತು.

ಹೌದು ಇದೀಗ ರಜನಿಕಾಂತ್ ಅವರ ಮನೆಯ ಪಕ್ಕ ಪೋಯಸ್ ಗಾರ್ಡನ್ನಲ್ಲಿ ತಮಿಳು ಸ್ಟಾರ್ ನಟ ಧನುಷ್  150 ಕೋಟಿ ಖರ್ಚು ಮಾಡಿ ಒಂದು ಮನೆ ಕಟ್ಟಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಕಾರಣವೇನು.? ಅಂದು ಮನೆಯ ಗೃಹಪ್ರವೇಶದ ದಿನ ವೇದಿಕೆ ಮೇಲೆ ಧನುಷ್ ಅವರು ಆ ದೇವರ ಬಗ್ಗೆ ಆಡಿದ ಮಾತುಗಳು ಯಾವವು.? ಮನೆ ಕಟ್ಟುವುದಕ್ಕೆ ಕಾರಣ ಏನು ಎಂಬುದಾಗಿ ತಿಳಿಸಿದ್ದಾರೆ. ರಜನಿಕಾಂತ್ ಅವರ ಪುತ್ರಿ ಐಶ್ವರ್ಯ ಅವರು ಧನುಷ್ ಅವರ ಹೆಂಡತಿ ಆದರೂ ಕೂಡ ಕೊಂಚವೂ ಕೂಡ ಕಷ್ಟ ಏನು ಎಂಬುದು ಅವರಿಗೆ ಗೊತ್ತೇ ಇರಲಿಲ್ಲವಂತೆ.

ಕಾರಣ ರಜನಿಕಾಂತವರು ಆಗಾಗಲೇ ದೊಡ್ಡ ಮಟ್ಟಕ್ಕೆ ಮಗಳು ಹುಟ್ಟುವ ವೇಳೆಗೆ ಬೆಳದಿದ್ರು. ಹಾಗಾಗಿ ಆ ಕಷ್ಟಗಳು ಏನು ಎಂದು ಮಗಳಿಗೆ ಗೊತ್ತಿರಲಿಲ್ಲ. ನಟ ಧನುಷ್ ಅವರ ಮನೆಯ ಪೂಜೆ ಪುನಸ್ಕಾರಗಳಿಗೆ ಹೆಚ್ಚು ಐಶ್ವರ್ಯ ಬರುತ್ತಿರಲಿಲ್ಲವಂತೆ. ಅದನ್ನು ಧನುಷ್ ಅವರೇ ಹೇಳಿಕೊಂಡಿದ್ದು, ನಿಮ್ಮ ಅಂತಸ್ತಿನ ತಕ್ಕ ಹಾಗೆ ನಾವು ಇಲ್ಲವಲ್ಲ ಎಂದು ನೀನು ನಮಗೆ ಅವಮಾನ ಮಾಡುತ್ತೀಯ, ನೀನೇ ಇಷ್ಟ ಪಟ್ಟು ಮನೆಯವರ ವಿರೋಧದ ನಡುವೆ ನನ್ನ ಮದುವೆ ಆದೆ. ಕೇವಲ ನೀನು ಹಣಕ್ಕೆ ಬೆಲೆ ಕೊಡುವುದಾದರೆ, ಅಂತಸ್ತಿಗೆ ಬೆಲೆ ಕೊಡುವುದಾದ್ರೆ, ನಮ್ಮ ಮನೆಯ ಕಾರ್ಯಕ್ರಮಗಳಿಗೆ ನೀನು ಬರದೆ ಹೋದರೆ, ನಮ್ಮ ತಂದೆ ತಾಯಿಗಳಿಗೆ ಎಷ್ಟು ನೋವಾಗಬಹುದು ಎನ್ನುವ ಸಣ್ಣ ಅರಿವು ಕೂಡ ನಿನಗೆ ಇಲ್ಲ ಎಂದು ಹೇಳಿದ್ದರು.  

ನಿಮ್ಮ ಅಂತಸ್ತಿನಗಿಂತ ಎರಡು ಪಟ್ಟು ಪೋಯಾಸ್ ಗಾರ್ಡನ್ನಲ್ಲಿ ನಿಮ್ಮ ತಂದೆಯ ಮನೆಯ ಪಕ್ಕವೇ ನಾನು ಕೂಡ ಮನೆ ಕಟ್ಟಿಸುತ್ತೇನೆ ಎಂದು ಹೆಂಡತಿಗೆ ಚಾಲೆಂಜ್ ಮಾಡಿದ್ದರಂತೆ ಧನುಷ್. ಅದರಂತೆಯೆ ಇದೀಗ 150 ಕೋಟಿ ಖರ್ಚು ಮಾಡಿ ಮನೆ ಕಟ್ಟಿಸಿದ್ದಾರೆ..ಅದಕ್ಕೆ ಪಾತಾಳ ಮುರುಗನ್ ಎನ್ನುವ ದೇವರೇ ಕಾರಣ ಎಂದು ಹೇಳಿಕೊಂಡಿರುವ ಧನುಷ್, ಆ ದೇವರ ವಿಚಾರ ಎಲ್ಲವನ್ನ ಬಿಚ್ಚಿಟ್ಟಿದ್ದಾರೆ. ಆ ದೇವರ ಬಗ್ಗೆ ನಿಮಗೆಷ್ಟು ಗೊತ್ತು.? ಇಲ್ಲಿದೆ ನೋಡಿ ವಿಡಿಯೋ. ಆ ದೇವರು ಎಲ್ಲಿದೆ.? ದೇವಸ್ಥಾನ ಹೇಗಿದೆ.? ಎಲ್ಲವನ್ನು ತಿಳಿಯಲು ಈ ವಿಡಿಯೋ ನೋಡಿ, ನಿಜಕ್ಕೂ ಇಲ್ಲಿಗೆ ಎಲ್ಲರೂ ಕೂಡ ಬಂದು ಹೋಗುತ್ತಾರೆ ಕಾರಣ ಅವರು ಅಂದುಕೊಂಡ ಎಲ್ಲಾ ಕೆಲಸಗಳು ಇಲ್ಲಿಗೆ ಹೋಗಿ ಬಂದರೆ ಪೂಜೆ ಸಲ್ಲಿಸಿ ಹರಕೆ ಕಟ್ಟಿಕೊಂಡರೆ ನೆರವೇರುತ್ತವೆ ಎನ್ನುವ ನಂಬಿಕೆ ಇದೆ ಎಂದು ಈ ವಿಡಿಯೋದಲ್ಲಿ ತಿಳಿಸಲಾಗಿದೆ.. ( video credit :kannada tech for you )