ರೇಣುಕಾ ಸ್ವಾಮಿ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ಅರೆಸ್ಟ್! ದರ್ಶನ್ ಹೇಳಿದ್ದೇನು ಗೊತ್ತಾ?

ರೇಣುಕಾ ಸ್ವಾಮಿ  ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ಅರೆಸ್ಟ್!  ದರ್ಶನ್ ಹೇಳಿದ್ದೇನು ಗೊತ್ತಾ?

ನಮ್ಮ ಸ್ಯಾಂಡಲ್ ವುಡ್ ನಲ್ಲಿ ಬಾಕ್ಸ್ ಆಫೀಸ್ ಸುಲ್ತಾನ್ ಎಂದ ಕೂಡಲೇ ನೆನಪಾಗುವ ಹೆಸರು ಎಂದರೆ ಅದು ದರ್ಶನ್ ಎಂದು ಹೇಳಬಹುದು. ಇನ್ನೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ದರ್ಶನ್ ತುಗುದೀಪಾ  ಎಂದು ಸಿನಿಮಾ ರಂಗದಲ್ಲಿ ಜನಪ್ರಿಯರಾಗಿದ್ದಾರೆ. ಈತ ಕನ್ನಡ ಚಿತ್ರರಂಗದ ಪ್ರಮುಖ ನಟರಲ್ಲಿ ಒಬ್ಬರು ಹಾಗೂ ನೇರ ನುಡಿಯ ಸ್ವಭಾವ ಹೊಂದಿರುವವರು ಎಂದರೆ ತಪ್ಪಾಗಲಾರದು.  ದರ್ಶನ್ 16 ಫೆಬ್ರವರಿ 1977ರಂದು ಜನಿಸಿದರು. ಅವರ ತಂದೆ ತುಗುದೀಪಾ ಶ್ರೀನಿವಾಸ್, ಪೌರಾಣಿಕ ಮತ್ತು ಪೌರಾಣಿಕ ಚಲನಚಿತ್ರಗಳಲ್ಲಿ ಕಾಣಿಸಿಕೊಂಡ ಖ್ಯಾತ ನಟ ಎಂದೇ ಹೇಳಬಹುದು. ಸಿನಿಮಾ ಹಿನ್ನಲೆ ಇದ್ದರೂ ಕೊಡ ಸ್ಕ್ರಾಚ್ ಮೂಲಕವೇ ಆರಂಭ ಮಾಡಿದ ದರ್ಶನ್  ತಮ್ಮ ವೃತ್ತಿಜೀವನವನ್ನು ಸಣ್ಣ ಪಾತ್ರಗಳಿಂದ ಪ್ರಾರಂಭಿಸಿದರು.

ಸಾಕಷ್ಟು ವರ್ಷಗಳು ಕಳೆದ ಬಳಿಕ "ಮಜೇಸ್ಟಿಕ್" (2001) ಚಿತ್ರದ ಮೂಲಕ ನಾಯಕ ನಟರಾಗಿ ಭಾರಿ ಯಶಸ್ಸು ಕಂಡರು. ಇದಾದ ನಂತರ, "ಕಳಸಿಪಾಲ್ಯ" (2004), "ಸಂತು ಸ್ಮಾರ್ಟ್‌ ಅಳ್ಳಿ" (2003), "ಅಂಜನೀಪುತ್ರ" (2017), "ಕ್ರಾಂತಿ" (2022) ಮುಂತಾದ ಯಶಸ್ವಿ ಚಿತ್ರಗಳಲ್ಲಿ ನಟಿಸಿದರು. ಅವರನ್ನು ಅಭಿಮಾನಿಗಳು "ಚಾಲೆಂಜಿಂಗ್ ಸ್ಟಾರ್" ಎಂದು ಕರೆಯುತ್ತಾರೆ. ಈ ಖ್ಯಾತಿಯನ್ನು ಅವರು ತಮ್ಮ ಬಹುಮುಖ ನಟನೆಯ ಮತ್ತು ನಿರಂತರ ಯಶಸ್ಸಿನ ಮೂಲಕ ಸಂಪಾದಿಸಿದ್ದಾರೆ. ದರ್ಶನ್ ಅವರ ಹಿನ್ನಲೆಯು ಕಠಿಣ ಪರಿಶ್ರಮ ಮತ್ತು ಪ್ರತಿಭೆಯಿಂದ ಕೂಡಿದೆ, ಮತ್ತು ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಸ್ಥಾನವನ್ನು ಹೊಂದಿದ್ದಾರೆ.    

ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೊಲೆಯ ವಿಚಾರದಲ್ಲಿ ಅರೆಸ್ಟ್ ಆಗಿದ್ದಾರೆ ಎಂಬ ಮಾಹಿತಿ ಹೋರ ಬರುತ್ತಿದೆ. ಹೌದು ಪವಿತ್ರ ಲೋಕೇಶ್ ಹಾಗೂ ದರ್ಶನ್ ಅವರಿಗೆ ಆಪ್ತರಾಗಿದ್ದ ರೇಣುಕಾ ಸ್ವಾಮಿ ಅವರು ಜೂನ್ 8ರಂದು ಮೈಸೂರಿನ ಕಾಮಾಕ್ಷಿ ಪಾಳ್ಯದ ಶೆಡ್ ಒಂದರಲ್ಲಿ ಮೃತ ದೇಹ ಪತ್ತೆ ಆಗಿತ್ತು. ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಪರಿಗಣಿಸಿದ್ದ ಪೊಲೀಸರಿಗೆ ತನಿಖೆಯ ನಂತರ ಕೊಲೆ ಎಂದು ಸಾಭೀತು ಆಗಿದೆ. ಈಗ ದರ್ಶನ್ ಮೇಲೆ ಆರೋಪ ಬಂದಿದ್ದು ಮೈಸಿರಿನಲ್ಲಿಯೇ ಫಾರ್ಮ್ ಹೌಸ್ ನಲ್ಲಿ ಇದ್ದ ದರ್ಶನ್ ಹಾಗೂ ಅವರೊಟ್ಟಿಗೆ ಇದ್ದ ಹತ್ತು ಜನರನ್ನು ಅರೆಸ್ಟ್ ಮಾಡಿ ಬೆಂಗಳೂರಿಗೆ ಕರೆತರಲಾಗುತ್ತಿದೆ ಎಂದು ವರದಿ ಹೋರ ಬಿದ್ದಿದೆ.ಪೊಲೀಸರ ವಿಚಾರಣೆಯಲ್ಲಿ ದರ್ಶನ ಅವರು ನಾನು ಕೊಲೆ ಮಾಡು ಅಂತ ಹೇಳಿಲ್ಲ ಅಂತ ಹೇಳಿದ್ದಾರೆ ಎಂದು ತಿಳಿದು ಬಂದಿದೆ