ಸ್ಪಂದನ ಅಂತಿಮ ದರ್ಶನಕ್ಕೆ ಬರಲಾಗಲಿಲ್ಲ ಎಂದು ವಿಜಯ್ ಮನೆಗೆ ಭೇಟಿ ನೀಡಿದ ಡಿ ಬಾಸ್..! ಹೇಳಿದ್ದೇನು
![ಸ್ಪಂದನ ಅಂತಿಮ ದರ್ಶನಕ್ಕೆ ಬರಲಾಗಲಿಲ್ಲ ಎಂದು ವಿಜಯ್ ಮನೆಗೆ ಭೇಟಿ ನೀಡಿದ ಡಿ ಬಾಸ್..! ಹೇಳಿದ್ದೇನು ಸ್ಪಂದನ ಅಂತಿಮ ದರ್ಶನಕ್ಕೆ ಬರಲಾಗಲಿಲ್ಲ ಎಂದು ವಿಜಯ್ ಮನೆಗೆ ಭೇಟಿ ನೀಡಿದ ಡಿ ಬಾಸ್..! ಹೇಳಿದ್ದೇನು](/news_images/2023/08/vijay1692331404.jpg)
ವಿಜಯ್ ರಾಘವೇಂದ್ರ ಅವರ ಪ್ರೀತಿಯ ಮಡದಿ ಸ್ಪಂದನ ಅವರು ಇದೀಗ ಹೃದಯಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ.. ಹೌದು, ಇವರ ಕುಟುಂಬಸ್ಥರು ಸ್ಪಂದನ ಅವರ ಧಿಡೀರ್ ಸಾವಿನ ಸುದ್ದಿ ಕೇಳಿ ಕಣ್ಣೀರು ಸುರಿಸಿದರು. ವಿಜಯ ರಾಘವೇಂದ್ರ ಅವರಿಗೆ ನಿಜಕ್ಕೂ ಆಕಾಶವೇ ತಲೆ ಮೇಲೆ ಬಿದ್ದ ಹಾಗೆ ಆಗಿದೆ. ಪ್ರೀತಿಯ ಮಡದಿಯ ಅಗಲಿಕೆಯಿಂದ ತುಂಬಾ ನೋವಿಗೆ ಈಗ ಒಳಗಾಗಿದ್ದಾರೆ. ಕಣ್ಣೀರು ಸುರಿಸುತ್ತಾ ನೋವಿನಲ್ಲಿ ತಮ್ಮ ಪ್ರೀತಿಯ ಮಡದಿಯನ್ನು ನೆನೆಯುತ್ತಾ ಮಗನ ಮುಖ ನೋಡಿಕೊಂಡು ಕಾಲ ಕಳೆಯುತ್ತಿದ್ದಾರೆ ಎಂದು ಹೇಳಬುದಾಗಿದೆ.
ನಿಜಕ್ಕೂ ವಿಜಯ ರಾಘವೇಂದ್ರರು ಅಂದುಕೊಂಡೇ ಇರಲಿಲ್ಲ, ಸದಾ ನಗು ಮುಖದಿಂದ ಎಲ್ಲರೂಟ್ಟಿಗೆ ಸ್ನೇಹದಿಂದ ಇರುತ್ತಿದ್ದರು. ಆದ್ರೆ ಅವರ ಮುಖದಲ್ಲಿ ಇದೀಗ ಆ ನಗು ಮಾಯವಾಗಿದೆ. ದೇವರು ವಿಜಯ ರಾಘವೇಂದ್ರ ಸ್ಪಂದನ ಅವರ ಜೋಡಿಯನ್ನು ಬೇರೆ ಬೇರೆ ಮಾಡಿಬಿಟ್ಟ. ಸ್ಪಂದನ ಅವರನ್ನೇ ತಮ್ಮ ಜೀವ ಎಂದುಕೊಂಡಿದ್ದ ರಾಘು ಅವರು ಇದೀಗ ಕಣ್ಣೀರು ಸುರಿಸುವಂತಾಗಿದೆ. ನಿಜಕ್ಕೂ ಇವರು ತುಂಬಾನೇ ಸರಳ ಸ್ವಾಭಾವಿಕ ವ್ಯಕ್ತಿತ್ವದವರು.. ಆ ದೇವರು ಸದಾ ಒಳ್ಳೆಯವರಿಗೆ ಕಷ್ಟದ ದಿನಗಳನ್ನು ಕೊಡುತ್ತಾನೆ ಎಂಬುದು ಮತ್ತೆ ಸಾಬೀದಾಗಿದೆ. ಹೌದು ವಿಧಿ ಬರಹ ಏನು ಮಾಡಲು ಆಗುವುದಿಲ್ಲ.
ಸ್ಪಂದನ ಅವರ ಅಂತಿಮ ದರ್ಶನಕ್ಕೆ ಅಂದು ಎಲ್ಲರೂ ಕುಟುಂಬಸ್ಥರು ಬಂದು ಹೋಗಿದ್ದರು. ಹಾಗೆ ಸಿನಿಮಾ ರಂಗದ ಕೆಲ ಕಲಾವಿದರು ಬಂದು ಹೋಗಿದ್ದರು. ಆದರೆ ಅಂದು ಡಿ ಬಾಸ್ ಅವರು ಬಂದಿರಲಿಲ್ಲ..ಅದಕ್ಕೆ ಬೇರೆ ಕಾರಣವೇ ಇತ್ತು..ಆದ್ರೆ ಇದೀಗ ಸ್ಪಂದನ ಅವರ ಪುಣ್ಯತಿಥಿ ಕಾರ್ಯ ಮುಗಿಯುತ್ತಿದ್ದಂತೆ ದರ್ಶನ್ ಅವರು ನಟ ವಿಜಯ ರಾಘವೇಂದ್ರ ಅವರ ಮನೆಗೆ ಭೇಟಿ ಕೊಟ್ಟಿದ್ದಾರೆ ಎಂದು ಅವರ ಆಪ್ತ ವಲಯದಲ್ಲಿ ಕೇಳಿ ಬಂದಿದೆ.
ಹೌದು ನಟ ದರ್ಶನ್ ಅವರು ಕಾರಿನಲ್ಲಿ ವಿಜಯ ರಾಘವೇಂದ್ರ ಅವರ ಮನೆಗೆ ಬಂದು ಅವರಿಗೆ ಮತ್ತು ಅವರ ಕುಟುಂಬಸ್ಥರಿಗೆ ಜೊತೆಗೆ ಶ್ರೀ ಮುರುಳಿಗೆ ಸಾಂತ್ವನ ಹೇಳಿ, ಸ್ಪಂದನ ಅವರ ದಿಡೀರ್ ಅಗಲಿಕೆ ಬಗ್ಗೆ ಮಾತನಾಡಿ ನೋವ ವ್ಯಕ್ತಪಡಿಸಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದಿದೆ..ಹೌದು ಇಲ್ಲಿದೆ ನೋಡಿ ಆ ವಿಡಿಯೋ...ಈ ವಿಡಿಯೋದಲ್ಲಿ ತೋರಿಸಿರುವ ಆ ಮಾಹಿತಿಯನ್ನೇ ನಾವು ನಿಮಗೆ ಇಲ್ಲಿ ವಿಸ್ತರಿಸಿದ್ದೇವೆ. ವಿಡಿಯೋ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಜೊತೆಗೆ ಸ್ಪಂದನ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ನೀವು ಕೂಡ ಪ್ರಾರ್ಥಿಸಿ ಧನ್ಯವಾದಗಳು..