ಪವಿತ್ರಾ ಗೌಡ ದರ್ಶನ್ ಪರಿಚಯ ಆಗಿದ್ದು ಹೇಗೆ ಗೊತ್ತಾ? ಇಲ್ಲಿದೆ ಫುಲ್ ಸ್ಟೋರಿ!

ಪವಿತ್ರಾ ಗೌಡ ದರ್ಶನ್ ಪರಿಚಯ ಆಗಿದ್ದು ಹೇಗೆ ಗೊತ್ತಾ? ಇಲ್ಲಿದೆ ಫುಲ್ ಸ್ಟೋರಿ!

ಇನ್ನೂ ನಮ್ಮ ಸ್ಯಾಂಡಲ್ ವುಡ್ ಮೇಲೆ ಯಾರ ಕಣ್ಣೂ ಬಿತ್ತೋ ತಿಳಿದಿಲ್ಲ ಎಂದು ಹೇಳಬಹುದು. ಕಳೆದ ಐದು ವರ್ಷಗಳಿಂದ ಕೇವಲ ಕಹಿ ಘಟನೆಯನ್ನು ಮಾತ್ರ ಎದುರಿಸಿಕೊಂಡು ಬರುತ್ತಿದ್ದೇವೆ ಎಂದು ಹೇಳಬಹುದು. ಮೊದಲೆಲ್ಲಾ ನಮ್ಮ ಕಲಾವಿದರ ಅಗಲಿಕೆಯನ್ನ ಎದುರಿದ್ದರೆೇ ಈಗ ಬಹಳ ಮೆಚ್ಚುಗೆ ಗಳಿಸಿದ್ದ ಜೋಡಿಗಳ ಡೈವರ್ಸ್ ಪ್ರಸಂಗಗಳನ್ನು ಎದುರಿಸಿಕೊಂಡು ಬರುತ್ತಿದ್ದು. ಇದೀಗ ಕನಸು ಮನಸಿನಲಿಯು ಕೊಡ ಯೋಚಿಸದ ಘಟನೆಯಿಂದೊ ನಮ್ಮ ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲಿ ನಡೆದಿದೆ ಎಂದು ಹೇಳಬಹುದು. ಅದುವೇ ದರ್ಶನ್ ಅವರ ಕೊಲೆಯ ಕೇಸ್. ಈಗ ಈ ಸುದ್ದಿ ಎಲ್ಲೆಡೆ ವೈರಲ್ ಆಗಿದ್ದು ಎಲ್ಲರ ಗಮನ ಸ್ಯಾಂಡಲ್ ವುಡ್ ನತ್ತಾ ಮಾಡಿದೆ ಎಂದು ಹೇಳಬಹುದು.

ಇನ್ನೂ ಕೊಲೆಯ ಆರೋಪದ ಕೇಸ್ ಮೇಲೆ ಪೊಲೀಸರ ಬಂಧನದಲ್ಲಿ ಇರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅವ್ರ ಎರಡನೇ ಪತ್ನಿ ಪವಿತ್ರಾ ಗೌಡ ಅವರು ಒಂದು ವಾರಗಳ ಕಾಲ ಕಸ್ಟಡಿಯಲ್ಲಿ ಇರಬೇಕು ಎಂದು ಆದೇಶ ಹೊರಡಿಸಿದೆ. ಇನ್ನೂ ಪವಿತ್ರ ಗೌಡ ಅವರು ಯಾರು ಈಕೆ ಯಾವಾಗ ದರ್ಶನ್ ಅವರನ್ನು ಮದುವೆಯಾದಳು ಎಂದು ಕೆಲವರಲ್ಲಿ ಇನ್ನಷ್ಟು ಗೊಂದಲಗಳು ಇರಲಿದೆ. ಆ ಗೊಂದಲಗಳನ್ನು ಬಗೆ ಹರಿಸಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ. ಇಂದು ಸ್ಯಾಂಡಲ್ ವುಡ್ ನಲ್ಲಿ ನಟಿ ಹಾಗೂ ಫ್ಯಾಷನ್ ಡಿಸೈನರ್ ಎಂದು ಗುರುತಿಸಿಕೊಂಡಿರುವ ಪವಿತ್ರ ಗೌಡ ಅವರು ಅಸಲಿಗೆ ಚಾಮರಾಜಪೇಟೆ ಅವರು. ಸಣ್ಣ ಬಾಡಿಗೆ ಮನೆಯಲ್ಲಿ ಮೀಡಲ್ ಕ್ಲಾಸ್ ಜೀವನ ಸಾಗಿಸುತ್ತಾ ಇದ್ದವರು ಬಣ್ಣದ ರಂಗಕ್ಕೆ ಹೇಗೆ ಎಂಟ್ರಿ ಕೊಟ್ಟರೂ ಎಂದರೆ ತನ್ನ ಸ್ನೇಹಿತೆಯ ಸಹಾಯದಿಂದ.  
 
ಚಾಮರಾಜಪೇಟೆಯಲ್ಲಿ ಇದ್ದ ಬಾಡಿಗೆಯ ಮನೆಯ ಎದುರು ಒಂದು ಸಣ್ಣ ಕಿರಾಣಿ ಅಂಗಡಿ ಇತ್ತು. ಅಲ್ಲಿ ಸಂಜಯ್ ಸಿಂಗ್ ಜೊತೆ ಪ್ರೀತಿಯಾಗಿ ಕೇವಲ ಹದಿನೆಂಟು ವರ್ಷಕ್ಕೆ ಮದುವೆ ಕೊಡ ಆದರೂ. ಮಗು ಆದ ಬಳಿಕ ದಪ್ಪ ಆಗಿದ್ದ ಬ್ಯೂಟಿ ಮೇಲೆ ಒಲವು ಹೆಚ್ಚಿದ್ದರಿಂದ ಏರೋಬಿಕ್ಸ್ ಕ್ಲಾಸ್ ಗೆ ಸೇರುತ್ತಾರೆ. ಆಗ ಅಲ್ಲಿ ಒಬ್ಬ ನಟಿಯ ಪರಿಚಯ ಆಗುತ್ತೆ. ಆ ಪರಿಚಯ ಅವರನ್ನು ಹೊರಗಿನ ಬೇರೆ ಮೋಜು ಮಸ್ತಿಯ ಪ್ರಪಂಚಕ್ಕೆ ಪರಿಚಯ ಮಾಡುತ್ತೆ. ದಿನದಿಂದ ಶೋಕಿಯಲ್ಲಿ ಬಿದ್ದ ಪವಿತ್ರ ನಟಿಯಾಗಬೇಕೆಂದು ಮನೆಯಲ್ಲಿ ಗಲಾಟೆ ಮಾಡಿಕೊಂಡು ತನ್ನ ಗಂಡನಿಂದ ಡೈವರ್ಸ್ ಪಡೆದುಕೊಂಡು ಸಿನಿಮಾ ರಂಗದತ್ತ ಮುಖ ಮಾಡುತ್ತಾರೆ. ಹೇಳಿಕೊಳ್ಳುವ ಸಿನಿಮಾಗಳನ್ನು ಮಾಡದ ಇವರು ಸಾಕಷ್ಟು ಮಂದಿಯನ್ನು ಪರಿಚಯ ಮಾಡಿಕೊಳ್ಳುತ್ತಾರೆ. ಅದ್ರಲ್ಲಿ ದರ್ಶನ್ ಕೊಡ ಒಬ್ಬರು. ಇದೀಗ ಈ ಪರಿಚಯ ಇಂದು ದರ್ಶನ್ ಅವರನ್ನು ಸೆರೆವಾಸ ಮಾಡುವಂತೆ ಮಾಡಿದೆ.