ಬ್ರೇಕಿಂಗ್ ನ್ಯೂಸ್ : ವರ್ತೂರು ಸಂತೋಷ್ ಅರೆಸ್ಟ್ ಬೆನ್ನಲ್ಲೇ ದರ್ಶನ್ ಸಹ ಅರೆಸ್ಟ್ ಆಗ್ತಾರಾ..? ಹಳೆಯ ಫೋಟೋ ವೈರಲ್
![ಬ್ರೇಕಿಂಗ್ ನ್ಯೂಸ್ : ವರ್ತೂರು ಸಂತೋಷ್ ಅರೆಸ್ಟ್ ಬೆನ್ನಲ್ಲೇ ದರ್ಶನ್ ಸಹ ಅರೆಸ್ಟ್ ಆಗ್ತಾರಾ..? ಹಳೆಯ ಫೋಟೋ ವೈರಲ್ ಬ್ರೇಕಿಂಗ್ ನ್ಯೂಸ್ : ವರ್ತೂರು ಸಂತೋಷ್ ಅರೆಸ್ಟ್ ಬೆನ್ನಲ್ಲೇ ದರ್ಶನ್ ಸಹ ಅರೆಸ್ಟ್ ಆಗ್ತಾರಾ..? ಹಳೆಯ ಫೋಟೋ ವೈರಲ್](/news_images/2023/10/darshan1698072815.jpg)
ಬಿಗ್ ಬಾಸ್ ಇತಿಹಾಸದಲ್ಲಿ ಇದೇ ಮೊಟ್ಟಮೊದಲ ಬಾರಿಗೆ ಬಿಗ್ ಬಾಸ್ ಮನೆಯೊಳಗೆ ಪೊಲೀಸರು ಬಂದಿದ್ದು, ವರ್ತೂರು ಸಂತೋಷ್ ಅವರನ್ನು ಅರೆಸ್ಟ್ ಮಾಡಿಕೊಂಡು ಹೋಗಿದ್ದಾರೆ..ಕಾರಣ ಸಂತೋಷ್ ಅವರು ಕೊರಳಲ್ಲಿ ಹುಲಿಯ ಉಗುರಿನ ಪೆಂಡೆಂಟ್ ಹಾಕಿಕೊಂಡಿರುವ ಕುರಿತಾಗಿ ಎನ್ನಲಾಗಿದೆ. 1972ರ ವೈಲ್ಡ್ ಲೈಫ್ ಪ್ರೊಟೆಕ್ಷನ್ ಅಡಿಯ ನಿಯಮವನ್ನು ಉಲ್ಲಂಘನೆ ಮಾಡಿದ ಕಾರಣಕ್ಕಾಗಿ ಸಂತೋಷ್ ಅವರನ್ನು ನ್ಯಾಯಾಂಗಕ್ಕೆ ಸಲ್ಲಿಸಿದ್ದು ಈಗಾಗಲೇ 14 ದಿನ ಅವರಿಗೆ ನ್ಯಾಯಾಂಗ ಬಂಧನದಲ್ಲಿ ಇರುವಂತೆ ಆದೇಶ ಕೂಡ ಕೋರ್ಟ್ ಇಂದ ಹೊರ ಬಂದಿದೆ ಎಂದು ತಿಳಿದುಬಂದಿದೆ.
ಹೌದು ಇದರ ಬೆನ್ನಲ್ಲೇ ನಟ ದರ್ಶನ್ ಅವರ ಒಂದು ಹಳೆಯ ಫೋಟೋ ಕೂಡ ವೈರಲಾಗುತ್ತಿದ್ದು, ಅವರು ಕೂಡ ಕೊರಳಲ್ಲಿ ಹುಲಿಯ ಉಗುರಿನ ಪೆಂಡೆಂಟ್ ಹಾಕಿ ಕೊಂಡಿದ್ದಾರೆ ಎನ್ನಲಾದ ಫೋಟೋ ಅದಾಗಿದೆ. ಆ ಲಾಕೆಟನ್ನು ಹಾಕಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಹಲವು ಕಾರ್ಯಕ್ರಮದಲ್ಲಿ, ಪೂಜೆ ಪುನಸ್ಕಾರಗಳಲ್ಲಿ ಕಾಣಿಸಿರುವ ದರ್ಶನ್ ಅವರ ಕೊರಳಲ್ಲಿಯೂ ಕೂಡ ಹುಲಿಯ ಉಗುರಿನ ರೀತಿ ಪೆಂಡೆಂಟ್ ಒಂದು ಕಂಡು ಬಂದಿದೆ.. ಇದರ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಸಂತೋಷ್ ಅವರಿಗೊಂದು ನ್ಯಾಯನ..? ನಟ ದರ್ಶನ್ ಅವರಿಗೊಂದು ನ್ಯಾಯಾನ ಸಂತೋಷ್ ಅವರನ್ನು ಈಗಾಗಲೇ ಬಂಧಿಸಿದ್ದಾರೆ,
ಅದೇ ರೀತಿ ದರ್ಶನ್ ಅವರನ್ನು ಕೂಡ ಬಂಧಿಸುತ್ತಾರ ಎಂದು ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ.
ಜೊತೆಗೆ ಈ ಹಿಂದೆ ಅರಣ್ಯ ಇಲಾಖೆಯ ರಾಯಭಾರಿ ಆಗಿ ದರ್ಶನ್ ನವರು ಇದ್ದು ಎಲ್ಲಾ ಕಾನೂನು ವ್ಯವಸ್ಥೆ ಗೊತ್ತಿದ್ದರೂ ಆ ರೀತಿ ಕೊರಳಲ್ಲಿ ಹುಲಿಯ ಉಗುರನ್ನು ಹಾಕಿಕೊಂಡಿರುವುದು ಸರಿನಾ ಎಂದು ಇನ್ನೂ ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಅವರು ಕೂಡ ಅರೆಸ್ಟ್ ಆಗುತ್ತಾರ ಎಂದು ಚರ್ಚೆ ನಡೆಯುತ್ತಿದೆ.. ಜೊತೆಗೆ ದರ್ಶನ್ ಅವರ ಹುಲಿಯ ಉಗುರಿನ ಪೆಂಡೆಂಟ್ ಎನ್ನಲಾಗಿರುವ ಅದು ಅಸಲಿಗೆ ನಕಲಿನ ಅಥವಾ ಹುಲಿಯ ಉಗುರೆನಾ ಎಂದು ತನಿಖೆ ನಡೆಯಬೇಕಾಗಿದೆ. ಒಂದು ವೇಳೆ ತನಿಖೆ ಶುರುವಾದರೆ ಅಧಿಕಾರಿಗಳು, ನಟ ದರ್ಶನ್ ಅವರು ತಪ್ಪು ಮಾಡಿದ್ದೆ ಆದಲ್ಲಿ ಶಿಕ್ಷೆ ಕೊಡಿಸುತ್ತಾರೆ ಎಂದು ಇನ್ನೂ ಕೆಲವರು ಕೇಳುತ್ತಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ. ಹೆಚ್ಚಿನ ಮಾಹಿತಿಗಾಗಿ ಒಮ್ಮೆ ನೋಡಿ, ಮತ್ತು ನಿಮ್ಮ ಅಭಿಪ್ರಾಯ ಅನಿಸಿಕೆಗಳ ನಮ್ಮ ಕಮೆಂಟ್ ಸೆಕ್ಷನಲ್ಲಿ ತಿಳಿಸಿ ಧನ್ಯವಾದಗಳು. ( video credit : btv )
<