ದರ್ಶನ್ ಸ್ನೇಹಿತನ ಮಗಳು ಈಗ ಮಹಾನಟಿ ವಿನ್ನರ್ ! ಯಾರಿದು ಪ್ರಿಯಾಂಕ ಆಚಾರ್?

ದರ್ಶನ್ ಸ್ನೇಹಿತನ ಮಗಳು ಈಗ ಮಹಾನಟಿ ವಿನ್ನರ್ ! ಯಾರಿದು ಪ್ರಿಯಾಂಕ ಆಚಾರ್?

ಜಿ ಕನ್ನಡ  ಭಾರತದ ಅವರ ಮಾಲೀಕತ್ವದ ಕನ್ನಡ ಭಾಷೆಯ ಚಾನೆಲ್ ಆಗಿದೆ. 2006ರಲ್ಲಿ ಪ್ರಾರಂಭಗೊಂಡ ಈ ವಾಹಿನಿ, ವಿವಿಧ ಪ್ರಕಾರದ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ, ಜೆನರಲ್ ಎಂಟರ್ಟೈನ್ಮೆಂಟ್ ಶೋಗಳು, ಧಾರಾವಾಹಿಗಳು, ರಿಯಾಲಿಟಿ ಶೋಗಳು, ಮತ್ತು ಸಿನಿಮಾಗಳನ್ನು ಒಳಗೊಂಡಂತೆ. Zee Kannada, ಕನ್ನಡಿಗರ ಮನರಂಜನೆಗಾಗಿ ಬಹುಭಾಗದಲ್ಲಿ ಜನಪ್ರಿಯವಾಗಿದೆ. ಇತ್ತೀಚೆಗೆ ಶುರುವಾಗಿದ್ದ ಮಹಾನಟಿ ಕೊಡ ನೆನ್ನೆ ಗ್ರ್ಯಾಂಡ್ ಫಿನಾಲೇ ಪ್ರಸಾರವಾಗಿ ಮುಕ್ತಯಾ ಗೊಂಡಿದೆ.

ಇನ್ನು ಮಹಾನಟಿ ಶುರುವಾಗಿ ಮೂರು ತಿಂಗಳು ಕಳೆದಿದ್ದು ಈ ಶೋ ನ ಉದ್ದೇಶ ನಮ್ಮ ಭಾರತದಲ್ಲಿ ನಟಿಯಾಗ  ಬೇಕು ಎಂಬ ಹಂಬಲ ಇರುವ ಹೆಣ್ಣು ಮಕ್ಕಳಿಗೆ ವಿದೇಕೆಯನು ಸೃಷ್ಟಿ ಮಾಡಿಕೊಡಬೇಕು ಎಂದು ಇತ್ತು. ಆದ್ದರಿಂದ ಭಾರತಾದ್ಯಂತ ಮಹಾನಟಿಯರಿಗಾಗಿ ಆಡಿಶನ್ ನಡೆಸಲಾಗಿತ್ತು. ಇನ್ನು ಆಡಿಶನ್ ಮೂಲಕ ಸಾಕಷ್ಟು ಸುತ್ತಿಗಳನ್ನು ಮಾಡಿ 15 ಮಹಾನಟಿಯರನ್ನು ಆಯ್ಕೆ ಮಾಡಲಾಗಿತ್ತು. ಇನ್ನು ಈ ಶೋ ನ ಸಾರಥಿಯಾಗಿ ಅನುಶ್ರೀ ಅವರ ನೇತೃತ್ವದಲ್ಲಿ ತರುಣ್ ಸುಧೀರ್ , ನಿಶ್ವಿಕ ನಾಯ್ದು, ಹಾಗೂ ಪ್ರೇಮಾ ಅವರ ಜಡ್ಕಮೆಂಟ್ ನಲ್ಲಿ ಹಾಗೆಯೇ ಮಹಾಗುರಗಳಾದ ರಮೇಶ್ ಅರವಿಂದ್ ಅಡಿಯಲ್ಲಿ ಈ ಶೋ ನೆನ್ನೆ ಯಶಸ್ವಿಯಾಗಿ ಮುಗಿಯಿತು ಎಂದ್ರೆ ತಪ್ಪಾಗಲಾರದು.

ನೆನ್ನೆ ನಡೆದ ಗ್ರ್ಯಾಂಡ್ ಫೀನಾಲೆಯಲ್ಲಿ ಮೈಸೂರಿನ ಮೂಲದ ಪ್ರಿಯಾಂಕ ಆವರಿಗೆ 15 ಲಕ್ಷ ಮೌಲ್ಯದ ಚಿನ್ನದ ಕಿರೀಟ ಬಹುಮಾನವಾಗಿ ನೀಡಲಾಯಿತು. ಹಾಗೂ ಎರಡನೇ ಸ್ಥಾನ ಪಡೆದ ಧನ್ಯಶ್ರೀಗೆ 10 ಲಕ್ಷ, ಮೂರನೇ ಸ್ಥಾನ ಪಡೆದ ಚಿತ್ರದುರ್ಗದ ಗಗನ ಹಾಗೂ  ನಾಲ್ಕನೇ ಸ್ಥಾನ ಪಡೆದ ಆರಾಧನಾ ಭಟ್‌, ಐದನೇ ಸ್ಥಾನ ಶ್ವೇತಾ ಭಟ್‌ಗೆ ತಲಾ ಒಂದು ಲಕ್ಷ ಬಹುಮಾನ ನೀಡಲಾಗಿದೆ. ಇಲ್ಲಿ ಅಚ್ಚರಿ ಪಡುವ ಸಂಗತಿ ಎಂದರೆ ವಿಜೇತರಾದ ಪ್ರಿಯಾಂಕಾ ಅವರು ದರ್ಶನ್ ಕ್ಲಾಸ್ ಮೇಟ್ ಆಗಿದ್ದವರ ಮಗಳು ಎಂದು ಹೇಳಲಾಗುತ್ತದೆ. ಇವರು ಈ ಹಿಂದೆ ತಾವು ಸೆಲೆಕ್ಟ್ ಆಗಿರುವ ವಿಚಾರ ತಿಳಿದು ದರ್ಶನ್ ಸರ್ ನನಗೆ ಕರೆ ಮಾಡಿ ಅಲ್ಲಿ ಹೇಳಿಕೊಡುವುದನ್ನು ಚೆನ್ನಾಗಿ ಕಲಿ ಅಲ್ ದ ಬೆಸ್ಟ್ ಎಂದು ತಿಳಿಸಿದ್ದರು ಎಂದು ತಿಳಿಸಿದ್ದರು.