ಹೋದ್ಯಾ ಪಿಶಾಚಿ ಅಂದ್ರೆ ಬಂದ್ಯಾ ಗವಾಕ್ಷಿ ಎಂಬಂತೆ ಮತ್ತೆ ರಾಜ್ಯದಲ್ಲಿ ಕೋವಿಡ್ ಎಂಟ್ರಿ..! ಬೆಂಗಳೂರಿನಲ್ಲಿ ಕೋವಿಡ್ ಹೈ ಅಲರ್ಟ್

ಹೋದ್ಯಾ ಪಿಶಾಚಿ ಅಂದ್ರೆ ಬಂದ್ಯಾ ಗವಾಕ್ಷಿ ಎಂಬಂತೆ ಮತ್ತೆ ರಾಜ್ಯದಲ್ಲಿ ಕೋವಿಡ್ ಎಂಟ್ರಿ..! ಬೆಂಗಳೂರಿನಲ್ಲಿ ಕೋವಿಡ್ ಹೈ ಅಲರ್ಟ್

ಸ್ನೇಹಿತರೆ ಈಗಾಗಲೇ ನಿಮಗೆ ಗೊತ್ತಿರುವಂತೆ ಕಳೆದ ಎರಡು ವರ್ಷಗಳ ಹಿಂದೆ ಕರೋನ ವೈರಸ್ ಎನ್ನುವ ದೊಡ್ಡ ಕಾಯಿಲೆ ಇಡೀ ಜಗತ್ತಿಗೆ ಹೆಚ್ಚು ಬಂದೊದಗಿತ್ತು.  ಅದರಿಂದ ಸಾಕಷ್ಟು ಸಾವು ನೋವು ಸಂಭವಿಸಿದವು.. ಹಾಗೆ ನಮ್ಮ ಕರ್ನಾಟಕದಲ್ಲಿ ಕೂಡ ಕೋರೊನಾ ವೈರಸ್ ಹರಡಿತ್ತು. ಅದರ ಮೂಲಕವೇ ಸಾಕಷ್ಟು ಜನರು ಕೂಡ ತಮ್ಮ ಪ್ರಾಣವನ್ನು ಕಳೆದುಕೊಂಡರು. ಆಸ್ಪತ್ರೆಗಳಲ್ಲಿ ಅದರ ಕುರಿತಾದ ಚಿಕಿತ್ಸೆ ನೀಡಿದರೂ ಹಾಗೆ ಆಕ್ಸಿಜನ್ ಸಿಗದೇ ಅದೆಷ್ಟು ಜನರ ಸಾವು ಆಯ್ತೆಂದು ನೀವೂ ನೋಡಿದಿರಿ. ಆ ಸಾವು ನೋವು ಎಷ್ಟರ ಮಟ್ಟಿಗೆ ಎಲ್ಲರನ್ನ ಇಂಪ್ಯಾಕ್ಟ್ ಮಾಡಿದ್ದವು ಎಲ್ಲವೂ ಕೂಡ ನಿಮಗೆ ಗೊತ್ತೇ ಇದೆ. 

ಸರ್ಕಾರ ಅದಕ್ಕಾಗಿ ಕೆಲವೊಂದಿಷ್ಟು ನಿರ್ಬಂಧನೆಗಳನ್ನು ಆಗ ಹೇಳಿದ್ದು ಎಲ್ಲರೂ ಕೈಗೊಳ್ಳುವ ನಿಯಮವನ್ನು ಪಾಲಿಸಲು ಹೇಳಿದ್ದರು.. ಅದರಂತೆ ಇದೀಗ ಮತ್ತೆ ಅದೇ ಮಹಾಮಾರಿ ಕೋವಿಡ್ ಆಗಮನ ಆಗಿದೆ ಎಂದು ಕೇಳಿ ಬಂದಿದೆ ಸ್ನೇಹಿತರೆ. ಹೌದು, ಕೇರಳದಲ್ಲಿ ಈಗ ಕರೋನ ಮಹಾಮಾರಿ ಮತ್ತೆ ಕಂಡುಬಂದಿದ್ದು ಜನರಲ್ಲಿ ಆತಂಕ ಮೂಡಿಸಿದೆ.. ಇದರ ಕುರಿತಾಗಿ ಬೆಂಗಳೂರಲ್ಲೂ ಕೂಡ ಕೋವಿಡ್ ಹೈ ಅಲರ್ಟ್ ಸೂಚನೆ ನೀಡಲಾಗಿದೆಯಂತೆ. ಆಸ್ಪತ್ರೆಗೆ ಬರುವ ಎಲ್ಲಾ ರೋಗಿಗಳನ್ನು ಕೋವಿಡ್ ಟೆಸ್ಟ್ ಮಾಡುವಂತೆ ಬಿಬಿಎಂಪಿ ಆರೋಗ್ಯ ಸಮಿತಿ ಅವರು ಮಾಹಿತಿಯನ್ನು ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.

ಕೋವಿಡ್ ಇದೀಗ ಮತ್ತೆ ಆಗಮಿಸಿದ್ದು ರಾಜ್ಯದಲ್ಲಿ ಜನರಿಗೆ ಆತಂಕ ಸೃಷ್ಟಿ ಮಾಡಿದೆ.. ಇದಕ್ಕಾಗಿ ಇನ್ನು ಮುಂದಿನ ದಿನಗಳಲ್ಲಿ ಏನೆಲ್ಲ ಆಗಬಹುದು ಕಾದು ನೋಡಬೇಕು. ಈಗ ಕೇಳಿ ಬಂದಿರುವ ಮಾಹಿತಿ ಪ್ರಕಾರ ಕೋವಿಡ್ ಟೆಸ್ಟ್ ಮಾಡಬೇಕು ಅಂದರೂ ಅಸಲಿಗೆ ಯಾರಿಗೆಲ್ಲ ಈ ಕೋವಿಡ್ ಟೆಸ್ಟ್ ಮಾಡುತ್ತೀರಾ ಎನ್ನುವ ಪ್ರಶ್ನೆ ಕೂಡ ಎದ್ದಿದೆ. ಇಲ್ಲಿದೆ ನೋಡಿ ವಿಡಿಯೋ. ಪೂರ್ತಿ ಮಾಹಿತಿಯನ್ನು ತಿಳಿದುಕೊಂಡು ಕೋವಿಡ್ ಕುರಿತಾದ ನಿಮ್ಮ ಅನಿಸಿಕೆಯನ್ನು ಕೂಡ ಕಮೆಂಟ್ ಮಾಡಿ..ಜೊತೆಗೆ ಮತ್ತೆ ಈ ಮಹಾಮಾರಿ ಬಂದಿದ್ದೆ ಆದರೆ ಎಲ್ಲರೂ ಕೂಡ ಮತ್ತೊಮ್ಮೆ ಹೆಚ್ಚು ಸಂಕಷ್ಟಕ್ಕೆ ಸಿಲುಕುವುದು ಖಚಿತ ಆದಂತೆ ಎಂದು ಹೇಳಬಹುದು, ಧನ್ಯವಾದಗಳು..