ನಿಮ್ಮ ಲವ್ ಗೆ ಹುಡುಗಿ ಪೇರೆಂಟ್ಸ್ ಒಪ್ಪುತ್ತಾ ಇಲ್ವಾ ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ..!

ನಿಮ್ಮ ಲವ್ ಗೆ ಹುಡುಗಿ ಪೇರೆಂಟ್ಸ್ ಒಪ್ಪುತ್ತಾ ಇಲ್ವಾ ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ..!

ಪ್ರೀತಿ ಪ್ರೇಮದ ವಿಚಾರಕ್ಕೆ ಬರುವುದಾದರೆ ಇಂದಿನ ದಿನಮಾನದಲ್ಲಿ ಸಾಕಷ್ಟು ನಿಜ ಪ್ರೀತಿಗಳು ಕಂಡು ಬರುತ್ತಿಲ್ಲ. ಕಾರಣ ನಿಜವಾಗಿ ಪ್ರೀತಿ ಮಾಡುವ ಹುಡುಗ ಒಂದಿಲ್ಲೊಂದು ಕ್ಷಣದಲ್ಲಿ ತನ್ನ ಇಷ್ಟದ ಹುಡುಗಿಯನ್ನು ಒಲಿಸಿಕೊಳ್ಳುವ ಯತ್ನದಲ್ಲಿ ಕೆಲ ತಪ್ಪು ಮಾಡಿರುತ್ತಾನೆ, ಕೆಲವೊಂದಿಷ್ಟು ಸುಳ್ಳುಗಳನ್ನು ಕೂಡ ಹೇಳಿರುತ್ತಾನೆ. ಕೆಲವು ಹುಡುಗರು ಇರುತ್ತಾರೆ, ನಿಜ ಪ್ರೀತಿ ಮಾಡಿದ್ದು ನಿಜವನ್ನೇ ಅವರು ಹೇಳುವುದು. ಅಂತಹವರಿಗೆ ಅವರ ಪ್ರೀತಿ ಆಗಲಿ, ಹೆಚ್ಚಿನ ಮಟ್ಟದಲ್ಲಿ ಅವರು ಇಷ್ಟ ಪಟ್ಟ ಹುಡುಗಿ ಆಗಲಿ ಸಿಗುವುದಿಲ್ಲ..ಅದಕ್ಕೆ ದುಡ್ಡು ಕೂಡ ಒಂದು ಕಡೆ ಕಾರಣ. ನಿಜ ಪ್ರೀತಿ ಮಾಡುವವರು ಕೊನೆಯಲ್ಲಿ ಕೆಲವರು ಅತೀವವಾದ ನೋವನ್ನು ಅನುಭವಿಸಬೇಕಾಗುತ್ತದೆ.. 

ಅದಕ್ಕೆ ಕೆಲವೊಂದಿಷ್ಟು ಕಾರಣಗಳಿದ್ದು, ಆ ಕಾರಣಗಳಲ್ಲಿ ಒಂದಾದ ನೀವು ಪ್ರೀತಿಸುವ ಹುಡುಗಿ ಮನೆಯಲ್ಲಿ ಮದುವೆಗೆ ಒಪ್ಪದಿರಲು ಕೂಡ ಆಗಿದೆ.. ಅದಕ್ಕೆ ಪರಿಹಾರ ಎಂಬಂತೆ ಈ ಲೇಖನದಲ್ಲಿ ನಾವು ನಿಮಗೆ ಕೆಲ ಟಿಪ್ಸ್ ಗಳನ್ನು ಕೊಡುತ್ತಿದ್ದೇವೆ..ಹೌದು ಮೊದಲಿಗೆ ನೀವು ತುಂಬಾನೇ ಇಷ್ಟಪಟ್ಟು ಒಂದು ಹುಡುಗಿಯನ್ನು ಮದುವೆ ಮಾಡಿಕೊಳ್ಳಲು ನಿರ್ಧಾರ ಮಾಡಿರುತ್ತೀರಿ ಅಂದುಕೊಳ್ಳಿ.. ಆಗ ನಿಮ್ಮ ಮನೆಯಲ್ಲಿ ಒಪ್ಪದಿರಬಹುದು, ಅವರನ್ನು ನೀವು ಹಠ ಬಿದ್ದು ನಿಜ ಪ್ರೀತಿ ಮಾಡುತ್ತಿದ್ದೇನೆ ಎಂದು ಚೆನ್ನಾಗಿ ಬಾಳುತ್ತೇನೆ ಎಂದು ಹೇಳಿ, ಅಥ್ವಾ ಹುಡುಗಿ ನನಗೆ ಇಷ್ಟ ಎಂದು ಹೇಳಿ ಒಪ್ಪಿಸಬಹುದು. 

ಆದರೆ ಹುಡುಗಿ ಮನೆಯಲ್ಲಿ ಅವರ ಪೇರೆಂಟ್ಸ್ ಅಷ್ಟು ಸಲೀಸಾಗಿ ಒಪ್ಪುವುದಿಲ್ಲ. ಅವರನ್ನ ಒಪ್ಪಿಸುವುದು ಬಹಳ ಕಷ್ಟಕರವಾದ ವಿಚಾರ ಆಗಿದೆ. ಒಂದು ವೇಳೆ ನಿಮ್ಮ ಜಾತಿಯ ಹುಡುಗಿ ಆಗಿದ್ದರೆ ಸ್ವಲ್ಪ ಕಷ್ಟ ಕಡಿಮೆ ಆಗಬಹುದು.. ಆದರೆ ಅಂತರ್ಜಾತಿ ವಿವಾಹ, ಬೇರೆ ಜಾತಿಯ ಹುಡುಗಿಯನ್ನು ನೀವು ಇಷ್ಟಪಡುತ್ತಿದ್ದರೆ ಆಕೆ ಮನೆಯವರು ನಿಮಗೆ ಒಪ್ಪಿಕೊಳ್ಳುವುದಿಲ್ಲ. ಹಾಗಿದ್ದಲ್ಲಿ ಮೊದಲು ನೀವು ಮಾಡುವ ಕೆಲಸ ಅವರ ಬಳಿ ಹೋಗಿ ನಿಮ್ಮತನವನ್ನು ಹೇಳಿ, ಸಮಾಜದಲ್ಲಿ ನಿಮಗೆ ಇರುವ ಗೌರವವನ್ನು , ನೀವು ಮಾಡುವ ಕೆಲಸವನ್ನು ಅವರ ಬಳಿ ತಿಳಿಸಿ, ಜೊತೆಗೆ ನಿಮ್ಮ ಹುಡುಗಿಯನ್ನು ನಾನು ತುಂಬಾ ಇಷ್ಟಪಟ್ಟಿದ್ದೇನೆ. ಆಕೆಯೂ ಸಹ ನನ್ನ ಪ್ರೀತಿ ಮಾಡುತ್ತಿದ್ದಾಳೆ. ಆಕೆಯನ್ನ ಚೆನ್ನಾಗಿ ನಾನು ಇಷ್ಟ ಪಟ್ಟು ನೋಡಿಕೊಳ್ಳುತ್ತೇನೆ ಎನ್ನುವ ಭರವಸೆ ಮಾತುಗಳನ್ನು ಆಡಿ.

ಆಗ ಆ ಮನೆಯವರು ನಿಮ್ಮನ್ನು ಒಪ್ಪಿಕೊಳ್ಳಬಹುದು ಒಪ್ಪಿಕೊಳ್ಳದೆ ಇರಬಹುದು, ಬೇರೆ ಜಾತಿ ಹುಡುಗ ಎಂದು ಹೊಡೆದರು ಆ ಸನ್ನಿವೇಶದಲ್ಲಿ ಹೊಡೆದರೂ ಹೊಡೆಯಬಹುದು, ನೋವು ಮಾಡಬಹುದು ಕಿರಿಕಿರಿ ಉಂಟು ಮಾಡಬಹುದು. ಅದನ್ನೆಲ್ಲ ತಡೆದುಕೊಂಡು ನೀವು ಮತ್ತೆ ಮತ್ತೆ ಮಾತನಾಡಿ. ಅದಾದ ಮೇಲೆ ನಿಮ್ಮ ತಂದೆ ತಾಯಿಯನ್ನು ಮಾತನಾಡಿಸಿ, ಆಗ ನೀವೂ ಅಲ್ಲಿ ನಾಟಕ ಆಡುವುದು ಬೇಡ.. ನಿಜ ಪ್ರೀತಿಯನ್ನು ಸ್ವಚ್ಛ ಮನಸ್ಸಿನಿಂದ ಹೇಳಿಕೊಳ್ಳಿ.. ಹುಡುಗಿ ಇಷ್ಟಪಟ್ಟಿದ್ದಾಳೆ ಎಂದು ಆ ಮನೆಯವರು ಅರ್ಥ ಮಾಡಿಕೊಳ್ಳುವ ಸಾದ್ಯತೆ ಹೆಚ್ಚಿರುತ್ತದೆ. ಹುಡುಗಿ ತಂದೆ ತಾಯಿ ಆಗಲಿ ಹುಡುಗನ ತಂದೆ ತಾಯಿ ಆಗಲಿ ಯಾರಿಗೂ ನೋವು ನೀಡಿ ಓಡಿ ಹೋಗಿ ಮದುವೆ ಆಗಬೇಡಿ, ಅವರನ್ನ ಒಪ್ಪಿಸಿ ಮದುವೆ ಆಗಿ ನೋಡಿ ಅದರಲಿ ಎಷ್ಟು ಸಂತಸ ಇರುತ್ತದೆ ಎಂದು ನಿಮಗೂ ಗೊತ್ತಾಗುತ್ತದೆ. ಹುಡುಗಿ ಮನೆಯವ್ರು ಸಹ ನಮ್ಮ ಮಗಳಿಗೆ ನೋವು ಕೊಡುವುದು ಬೇಡ ಎಂದು ಮದುವೆಗೆ ಒಪ್ಪಿಕೊಳ್ಳುವ ಸಾಧ್ಯತೆ ಇರುತ್ತದೆ ಸ್ನೇಹಿತರೆ. ಈ ವಿಡಿಯೋ ನೋಡಿ ಇನ್ನಷ್ಟು ಮಾಹಿತಿಗಾಗಿ ನಮ್ಮ ಲೇಖನವನ್ನು ಶೇರ್ ಮಾಡಿ ಧನ್ಯವಾದಗಳು...  ( video credit : Popular Kannada Tv )