ಪೋಷಕರು ಮಕ್ಕಳನ್ನು ಡಿ ಕೇರ್ ಸೆಂಟರ್ಗೆ ಸೇರಿಸುವ ಮೊದಲು ಈ ವಿಡಿಯೋ ನೋಡಬೇಕು ; ಪಾಪ ಆ ಮಗುವಿನ ಗತಿ ಏನಾಗಬೇಕು ?
![ಪೋಷಕರು ಮಕ್ಕಳನ್ನು ಡಿ ಕೇರ್ ಸೆಂಟರ್ಗೆ ಸೇರಿಸುವ ಮೊದಲು ಈ ವಿಡಿಯೋ ನೋಡಬೇಕು ; ಪಾಪ ಆ ಮಗುವಿನ ಗತಿ ಏನಾಗಬೇಕು ? ಪೋಷಕರು ಮಕ್ಕಳನ್ನು ಡಿ ಕೇರ್ ಸೆಂಟರ್ಗೆ ಸೇರಿಸುವ ಮೊದಲು ಈ ವಿಡಿಯೋ ನೋಡಬೇಕು ; ಪಾಪ ಆ ಮಗುವಿನ ಗತಿ ಏನಾಗಬೇಕು ?](/news_images/2023/06/child-hitting-other-child1687515046.jpg)
ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.
ಈಗಿನ ಕಾಲದಲ್ಲಿ ಪೋಷಕರು ಮಕ್ಕಳನ್ನು ಡಿ ಕೇರ್ ಸೆಂಟರ್ಗೆ ಸೇರಿಸುವ ಅಭ್ಯಾಸ ಮಾಡಿ ಕೊಂಡಿದ್ದಾರೆ . ಯಾಕೆಂದ್ರೆ ಅವರಿಗೆ ಪಾಪ ಮಕ್ಕಳನ್ನು ನೋಡಿ ಕೊಳ್ಳುವಷ್ಟು ಸಮಯ ಇರುವುದಿಲ್ಲ . ಆದರೆ ಇದರಿಂದ ಎಂತಹ ಅನಾಹುತ ಆಗುತ್ತೆ ಅಂತ ಈ ವಿಡಿಯೋ ಒಮ್ಮೆ ನೋಡಿ
ಮಕ್ಕಳನ್ನು ಡಿ ಕೇರ್ ಸೆಂಟರ್ಗೆ ಸೇರಿಸುವ ಮೊದಲು ಪೋಷಕರು ಈ ವಿಡಿಯೋ ನೋಡಬೇಕು ಈ ವಿಡಿಯೋ ಎಲ್ಲಾ ಪೋಷಕರಿಗೂ ಎಚ್ಚರಿಕೆಯ ಪಾಠವಾಗಿದೆ ಡಿ ಕೇರ್ ಸೆಂಟ್ರನಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಯಾರು ಇಲ್ಲದಿದ್ದರೆ ಏನಾಗುವುದು ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ ಬೆಂಗಳೂರಿನ ಸುಬ್ರಮಣ್ಯಪುರದಲ್ಲಿರುವ ಪ್ಲೇಸ್ಕೋಲ್ ನಲ್ಲಿ ನಡೆದಿರುವ ಘಟನೆ ಪೋಷಕರನ್ನು ಬೆಚ್ಚಿ ಬೆಳಿಸುತ್ತಿದೆ ಮಗುವೊಂದು ಇನ್ನೊಂದು ಮಗುವಿಗೆ ಹೊಡೆಯುತ್ತಿರುವ ವಿಡಿಯೋ ಸಿಸಿ ಟಿವಿಯಲ್ಲಿ ಸರಿಯಾಗಿದೇ ಇದನ್ನು ನೋಡಿದ ಪೋಷಕರು ಅಳುತ್ತಿದ್ದಾರೆ ಡಿ ಕೇರ್ ಸೆಂಟರ್ಗೆ ತಮ್ಮ ಮಕ್ಕಳನ್ನು ಸೇರಿಸಲು ಎದುರುತ್ತಿದ್ದಾರೆ
ಕೆಲಸ ಕೆಲಸ ಅಂತ ಹೇಳಿ ಮಕ್ಕಳಿಗೆ ಎಲ್ಲಿ ಬೇಕಾದರೂ ಬಿಟ್ಟು ಹೋಗುವ ತಂದೆ ತಾಯಿಯರಿಗೆ ಆಗಿರುವ ಈ ಘಟನೆಯನ್ನು ನೋಡಿಯಾದರೂ ಬುದ್ದಿ ಬರಲಿ ಅವಶ್ಯಕತೆಗಳಿಗೆ ತಕ್ಕ ಹಾಗೆ ಸಂಪಾದಿಸಿ ಹಾಗೂ ಸಾಕಷ್ಟು ಸಮಯ ಮಕ್ಕಳಿಗೆ ನೀಡಿ ಇಲ್ಲ ಅಂದ್ರೆ ಮಕ್ಕಳನ್ನು ಕಳ್ಕೊಂಡು ಜೀವಿತಾವಧಿ ಪೂರಾ ದುಃಖಿಸಬೇಕಾಗುವುದು. ಇಂಥ ಘಟನೆ ಮತ್ತೆ ಸಂಭವಿಸಬಾರದು ಮಕ್ಕಳಿಗೆ ರಕ್ಷಣೆ ಬೇಕು ಅನ್ನೋ ದೃಷ್ಟಿಯಿಂದ ಡೇ ಕೇರ್ ಮ್ಯಾನೇಜ್ಮೆಂಟ್ ವಿರುದ್ಧ ದೂರು ದಾಖಲಿಸುವುದು ಒಳಿತು.