ಮೋಸ ಮಾಡಿದವರೇ ಚೆನ್ನಾಗಿರುತ್ತಾರೆ, ದೇವ್ರು ಎಲ್ಲಿದ್ದಾನೆ ಎನ್ನುವವರು ಒಮ್ಮೆ ನೋಡಿ! ಅದೇನು ಗೊತ್ತಾ?

ಮೋಸ ಮಾಡಿದವರೇ ಚೆನ್ನಾಗಿರುತ್ತಾರೆ, ದೇವ್ರು ಎಲ್ಲಿದ್ದಾನೆ ಎನ್ನುವವರು ಒಮ್ಮೆ ನೋಡಿ! ಅದೇನು ಗೊತ್ತಾ?

ಈಗಿನ ಕಾಲದಲ್ಲಿ ಎಲ್ಲರ ತಲೆಯಲ್ಲಿ ಇರುವುದು ಒಂದೇ ಮಾತು ಅದುವೇ ನಿಯತ್ತಿದ್ದರೆ ಬದುಕಲು ಸಾಧ್ಯವಿಲ್ಲ. ಅದನ್ನು ಎಲ್ಲರೂ ತನ್ನ ತಲೆಯಲ್ಲಿ ತುಂಬಿಕೊಂಡು ಮೋಸ ಮಾಡಿದರೆ ಬದುಕಬಹುದು ಹಾಗಾಗಿ ನಾನು ಕೊಡ ಕೆಟ್ಟವನಾಗಿ ಬದುಕೋಣ ಎಂಬ ಆಲೋಚನೆ ಮಾಡುತ್ತಾರೆ. ಅದಕ್ಕೆ ದೊಡ್ಡವರು ಹೇಳೋದು ಯಾರೊಬ್ಬರೂ ಕೊಡ ಹುಟ್ಟುತ್ತಾ ಕೆಟ್ಟವರಾಗಿ ಹುಟ್ಟುವುದಿಲ್ಲ ಅವರು ಬೆಳೆಯುವ ವಾತಾವರಣ ಹಾಗೂ ಸಮಯ ಅವರನ್ನು ಕೆಟ್ಟವರನ್ನಾಗಿ ಮಾಡುತ್ತದೆ ಎಂಬ ಮಾತು ಅಕ್ಷರ ಸಹ ಸತ್ಯ ಎಂದು ಹೇಳಬಹುದು. ಈ "ಮೊಸ ಮಾಡಿದವರಿಗೆ ಕಾಲ" ಎಂಬ ಗಾದೆ ಪ್ರಾಚೀನ ಕನ್ನಡ ಸಂಪ್ರದಾಯದ ಒಂದು ಪ್ರಮುಖ ಭಾಗವಾಗಿದೆ. 

ಈಗ ಅದು ಕಾಲ ಬದಲಾದಂತೆ ಕರ್ಮದ ಫಲ ಎಂಬ ಮಾತಿಗೆ ತಿರುಗಿದೆ. ಈ  ಕರ್ಮ ಎನ್ನುವುದು ವ್ಯಕ್ತಿಯ ಪಾಪ ಅಥವಾ ಪುಣ್ಯದ ಪರಿಣಾಮಗಳನ್ನು ತೋರಿಸುತ್ತದೆ. ವಂಚನೆ ಮಾಡಿದವರು ತಮ್ಮ ತಪ್ಪಿಗೆ ಕೊನೆಗೊಮ್ಮೆ ಪಾಡು ಅನುಭವಿಸುತ್ತಾರೆ. ಅನ್ಯಾಯ ಮಾಡುವುದು ಹೇಗೆ ತಪ್ಪು ಎಂದು ಸಮಾಜದ ಅರಿವು ಮೂಡಿಸುತ್ತಿದೆ. ಈ ಗಾದೆ ನಮ್ಮ ಜೀವನದ ಸತ್ಯಗಳನ್ನೆಲ್ಲ ಸೇರಿಸಿಕೊಂಡು, ನ್ಯಾಯ ಮತ್ತು ನೈತಿಕತೆಯ ಮಹತ್ವವನ್ನು ಸಾರುತ್ತದೆ. ಇದು ನಮ್ಮ ನೈತಿಕ ಬೋಧನೆ ಮತ್ತು ಕರ್ಮ ಸಿದ್ಧಾಂತದ ಒಂದು ಮುಖ್ಯ ಅಂಶವಾಗಿದೆ.

ಇನ್ನು ಕೆಲವೊಮ್ಮೆ ತಮ್ಮ ಒಳ್ಳೆತನದಿಂದ ಅವರಿಗೆ ಬರುವ ಸಂಕಷ್ಟಗಳನ್ನು ನೆನೆದು ಬಹಳ ನೋವುಂಟು ಮಾಡಿಕೊಂಡು ತಮಗೆ ಇರುವ ಜೀವನ ಹಾಗೂ ಸಮಯವನ್ನು ಹಾಳಿಮಾಡಿಕೊಳ್ಳುತ್ತಾರೇ. ಅಂತವರಿಗೆ ಹೇಳುವ ಕಿವಿ ಮಾತು ಏನು ಗೊತ್ತಾ. ಇಂದು ನಿಮ್ಮ  ಒಳ್ಳೆಯ ತನದಿಂದ ಯಾರದ್ದೋ ಕುತಂತ್ರಕ್ಕೆ ಬಲಿಯಾಗಿ ನೋವನ್ನು ಅನುಭವಿಸುತ್ತಿರುತ್ತಿರಾ ಹಾಗೆಂದು ಅದನ್ನೇ ನೆನೆದು ಇರುವ ಸಮಯವನ್ನು ಹಾಳು ಮಾಡಿಕೊಳ್ಳಬೇಡಿ. ಅದನ್ನು ಸರಿ ಮಾಡಿಕೊಳ್ಳುವ ಬಗ್ಗೆ ಯೋಚಿಸಿ ಅದನ್ನು ಬಿಟ್ಟು ಹೀಗೆ ಆಯಿತಲ್ಲ ಎಂದು ಚಿಂತಿಸುತ್ತಾ ನಿಮಗೆ ನೀವೇ ಶಿಕ್ಷೆ ನೀಡಿಕೊಂಡು ಬದುಕಬೇಡಿ. ಕೆಟ್ಟವರಿಗೆ ಅವ್ರ ಪಾಪದ ಪ್ರತಿಫಲವನ್ನು ಆ ದೇವ್ರೇ ನೀಡುತ್ತಾನೆ ಇಂದು ಅಲ್ಲದಿದ್ದರೂ ಕೊಡ ಮುಂದೊಂದು ದಿನ ಅವರು ತಮ್ಮ ಪಾಪದ ಫಲವನ್ನು ಇಲ್ಲಿಯೇ ನಿಮ್ಮ ಕಣ್ಣುಮುಂದೆಯೇ ಅನುಭವಿಸಿ ಹೋಗುತ್ತಾರೇ.  ( video credit ; Allu Mahender  703 )

ವಿಡಿಯೋ ನೋಡಲು   WATCH ON YOU TUBE   ಮೇಲೆ ಕ್ಲಿಕ್ ಮಾಡಿ