ಚಂದನ್ ಶೆಟ್ಟಿ ಬಾಳಿನಲ್ಲಿ ಮುದ್ದು ರಾಕ್ಷಸಿ ಆಗಿ ಮತ್ತೆ ಒಂದಾದ ನಿವೇದಿತಾ ಗೌಡ : ಏನ್ ಆಟ ಆಡ್ತಿದೀರಾ ಎಂದ ನೆಟ್ಟಿಗರು ?

ಚಂದನ್ ಶೆಟ್ಟಿ  ಬಾಳಿನಲ್ಲಿ  ಮುದ್ದು ರಾಕ್ಷಸಿ ಆಗಿ ಮತ್ತೆ ಒಂದಾದ ನಿವೇದಿತಾ ಗೌಡ : ಏನ್ ಆಟ ಆಡ್ತಿದೀರಾ ಎಂದ ನೆಟ್ಟಿಗರು ?

ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಜನಪ್ರಿಯ ಜೋಡಿಗಳು ಇದ್ದಾರೆ ಅವರಲ್ಲಿ ಮುಂಚೂಣಿಯಲ್ಲಿ ಇರುವ ಹೆಸರು  ಎಂದರೆ ಅದು ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ. ಬಿಗ್ ಬಾಸ್ ಮೂಲಕ ಪರಿಚಯ ಆದ ಈ ಜೋಡಿ 2019ರ ಮೈಸೂರಿನ ಯುವದಸರ ಸಮಯದಲ್ಲಿ ವೇದಿಕೆಯ ಮೇಲೆ ಪ್ರೋಪಸ್ ಮಾಡಿದ್ದ ಚಂದನ್ ತಮ್ಮ ಪ್ರೇಮ ನಿವೇದನೆ ಮಾಡಿಕೊಂಡು ಗ್ರೀಂ ಸಿಗನಲ್ ಕೊಡ ಪಡೆದುಕೊಂಡರು. ಅದಾದ ಬಳಿಕ 2020ರ ಫೆಬ್ರವರಿ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇನ್ನೂ  ಇವರು ಈಗ ತಮ್ಮ ನಾಲ್ಕು ವರ್ಷದ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ್ದು ಇವರಿಬ್ಬರ ವಿಚ್ಛೇದನಕ್ಕೆ ಕಾರಣ ಏನು ಎಂಬುದು ಯಾರೊಬ್ಬರಿಗೂ ತಿಳಿದಿಲ್ಲ.

ವಿಚ್ಛೇದನದ ನಂತರ ನಿವೇದಿತಾ ಹಾಗೂ ಚಂದನ್ ತಮ್ಮ  ವಯಕ್ತಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನಿವೇದಿತಾ ಅವರು ಸಾಕಷ್ಟು ಬ್ರಾಂಡ್ ಗಳಿಗೆ ಈಗ ರಾಯಭಾರಿ ಆಗಿದ್ದು ಅದರ ಪ್ರಮೋಶನ್ ಕೆಲಸಗಳಲ್ಲಿ ಈಗ ಬ್ಯುಸಿ ಇದ್ದಾರೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕೊಡ ಹೆಚ್ಚು ಆಕ್ಟಿವ್ ಇರುತ್ತಾರೆ.  ಇತ್ತ ಚಂದನ್ ಶೆಟ್ಟಿ ಕೊಡ ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು ಸದ್ಯದಲ್ಲಿ ನಾಯಕ ನಟ, ಸಂಗೀತ ನಿರ್ದೇಶಕ ಹಾಗೂ ಹಾಡುಗಾರನಾಗಿ ಸ್ಯಾಂಡಲ್ ವುಡ್ ನಲ್ಲಿ ಮಿಂಚುತ್ತಿದ್ದಾರೆ.

 ಈಗ ಹೊಸ ಸುದ್ದಿ ಏನಂದ್ರೆ  ಇಬ್ಬರು ಬೇರೆ, ಬೇರೆ ಆದರೂ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಒಬ್ಬರನ್ನೊಬ್ಬರು ಬಿಟ್ಟು ಕೊಡಲ್ಲ. ಇದಕ್ಕೆ ಸಾಕ್ಷಿಯಾಗಿರೋದು ಹೊಸ ಸಿನಿಮಾ. ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಒಟ್ಟಿಗೆ ಒಂದು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಶ್ರೀಚೌಡೇಶ್ವರಿ ಸಿನಿ ಕಂಬೈನ್ಸ್‌ನಲ್ಲಿ ಈ ಚಿತ್ರ ಮೂಡಿ ಬರುತ್ತಾ ಇದ್ದು, ಪುನೀತ್ ಶ್ರೀನಿವಾಸ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಚಂದನ್ ಶೆಟ್ಟಿ, ನಿವೇದಿತಾ ಗೌಡ ಅಭಿನಯದ ಹೊಸ ಸಿನಿಮಾದ ಪೋಸ್ಟರ್ ಇಂದು ರಿಲೀಸ್ ಆಗಿದೆ. ವಿಚ್ಛೇದನದ ಬಳಿಕ ಚಂದನ್ ಶೆಟ್ಟಿಗೆ ಈಗ ನಿವೇದಿತಾ ಮುದ್ದು ರಾಕ್ಷಸಿ ಆಗಿದ್ದಾರೆ. ಚಂದನ್ ಶೆಟ್ಟಿ – ನಿವೇದಿತಾ ಗೌಡ ನಟನೆಯ ಸಿನಿಮಾ ಪೋಸ್ಟರ್ ರಿಲೀಸ್ ಆಗಿದೆ. ಮುದ್ದು ರಾಕ್ಷಸಿ ಸಿನಿಮಾಗೆ ಈ ಹಿಂದೆ ಕ್ಯಾಂಡಿಕ್ರಶ್ ಅಂತ ಹೆಸರಿಡಲಾಗಿತ್ತು. ಇದೀಗ ಮುದ್ದುರಾಕ್ಷಸಿ ಟೈಟಲ್ ಫೈನಲ್ ಮಾಡಲಾಗಿದೆ. ವಿಚ್ಛೇದನಕ್ಕೂ ಮುನ್ನವೇ ಈ ಸಿನಿಮಾದ ಶೂಟಿಂಗ್‌ನಲ್ಲಿ ಚಂದನ್ ಶೆಟ್ಟಿ, ನಿವೇದಿತಾ ಗೌಡ ಬ್ಯುಸಿಯಾಗಿದ್ದರು