ಪೊಲೀಸರೇದುರೆ ಉಂಗುರು ನುಂಗಿ ಆತ್ಮಹತ್ಯೆಗೆ ಪ್ರಯತ್ನಿಸಿದ ಚೈತ್ರಾ..! ಇಲ್ನೋಡಿ ವಿಡಿಯೋ

ಪೊಲೀಸರೇದುರೆ ಉಂಗುರು ನುಂಗಿ ಆತ್ಮಹತ್ಯೆಗೆ ಪ್ರಯತ್ನಿಸಿದ ಚೈತ್ರಾ..! ಇಲ್ನೋಡಿ ವಿಡಿಯೋ

ಹೌದು, ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ಸಮಾಜಮುಖಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳುತ್ತ ಧರ್ಮದ ಕುರಿತು ಭಾಷಣ ಮಾಡುತ್ತಿದ್ದ ಚೈತ್ರ ಕುಂದಾಪುರ ಅವರು ಇದೀಗ ಪೊಲೀಸರ ಅತಿಥಿ ಆಗಿದ್ದಾರೆ. ಧರ್ಮದ ವಿಚಾರದಲ್ಲಿ ಹೆಚ್ಚು ಭಾಷಣ ಮಾಡುತ್ತಾ ಅಪಾರವಾದ ಅಭಿಮಾನಿ ಬಳಗವನ್ನು ಕೂಡ ಚೈತ್ರ ಕುಂದಾಪುರ ಅವರು ಗಿಟ್ಟಿಸಿಕೊಂಡಿದ್ದರು. ಧರ್ಮ ಮತ್ತು ದೇವರ ಹೆಸರಿನಲ್ಲಿ ವಂಚನೆ ಮಾಡಿದರೆ ಅದಕ್ಕಿಂತ ದೊಡ್ಡ ಮಹಾ ಮೋಸ ಇನ್ನೊಂದಿಲ್ಲ ಎಂದು ಇದೀಗ ಕೆಲವು ಕಡೆ ಮಾತುಗಳು ಕೇಳಿ ಬರುತ್ತಿದೆ.. ಕಾರಣ ಚೈತ್ರ ಕುಂದಾಪುರ ಅವರು ಮಾಡಿರುವ ಈ ಒಂದು ದೊಡ್ಡ ನಾಟಕದ ಮಹಾ ಮೋಸದಿಂದ..

ಬೈಂದೂರು ಬಿಜೆಪಿ ಎಂಎಲ್ಎ ಟಿಕೆಟ್ ಕೊಡಿಸುವೆ ಎಂದು ಹೇಳಿ ಉಡುಪಿಯ ಗೋವಿಂದ ಬಾಬು ಪೂಜಾರಿ ಎನ್ನುವ ಉದ್ಯಮಿಗೆ ದೊಡ್ಡದಾದ ನಾಮ ಹಾಕಿದ್ದಾರೆ ಚೈತ್ರ ಎಂದು ಕೇಳಿ ಬಂದಿದೆ. ಅದು ಬರೋಬ್ಬರಿ 7 ಕೋಟಿಯಂತೆ. ಚೈತ್ರ ಕುಂದಾಪುರ ಒಬ್ಬರೇ ಈ ಕೆಲಸ ಮಾಡಿಲ್ಲ, ಜೊತೆಗೆ ಗಗನ್ ಕಡೂರು ಅವರ ಸಹಾಯ ಪಡೆದುಕೊಂಡು, ಜೊತೆಗೆ ಪ್ರಸಾದ್ ಎಂಬ ವ್ಯಕ್ತಿಯ ಸಹಾಯ ಪಡೆದು ಎಲ್ಲರಿಗೂ ದುಡ್ಡು ಕೊಟ್ಟು ಈ ಕೆಲಸ ಮಾಡಿದ್ದಾರೆ ಎಂದು ಕೆಲವು ಕಡೆ ಕೇಳಿ ಬರುತ್ತಿದೆ.. ಹೌದು ಚೈತ್ರ ಕುಂದಾಪುರ ಅವರು ನನಗೆ ಆರ್ ಎಸ್ ಎಸ್ ಅವರು ಗೊತ್ತು, ಕೇಂದ್ರ ಸರ್ಕಾರದ ಕೆಲ ಮಂತ್ರಿಗಳು ಗೊತ್ತು, ನಿಮಗೆ ಬಿಜೆಪಿ ಎಂಎಲ್ಎ ಟಿಕೆಟ್ ಕೊಡಿಸುತ್ತೇನೆ ಎಂದು ಕಬಾಬ್ ಮಾಡುವವರನ್ನು, ರೋಡ್ ಸೈಡ್ ಎಗ್ ರೈಸ್ ಮಾಡುವವರನ್ನು ಕರೆದುಕೊಂಡು ಅವರೇ ಆರ್ ಎಸ್ ಎಸ್ ಕಾರ್ಯಕರ್ತರು ಎಂದು ಬಿಂಬಿಸಿ, ಅವರಿಗೆ ವೇಷಗಳ ಹಾಕಿಸಿ ಈ ಗೋವಿಂದ ಬಾಬು ಅವರನ್ನು ಮೊದಲು ನಂಬಿಸಿದ್ದಾರೆ. 

ನಂತರ ಗೋವಿಂದ ಬಾಬು ಪೂಜಾರಿ ಅವರು ಕೂಡ ಇವರ ಮಾತನ್ನು ನಂಬಿ ಸುಮಾರು ಏಳು ಕೋಟಿ ಹಣವನ್ನು ನೀಡಿದ್ದಾರಂತೆ. ಆಮೇಲೆ ಇವರೆಲ್ಲ ನಾಟಕ ಮಾಡಿದ್ದಾರೆ. ಇವರು ನನಗೆ ಮೋಸ ಮಾಡಿದರು ಎಂದು ತಿಳಿದ ಗೋವಿಂದ ಬಾಬು ಪೂಜಾರಿ ಅವರು ಚೈತ್ರ ಕುಂದಾಪುರ ಅವರಿಗೆ ದುಡ್ಡು ಕೇಳಿದ್ದಾರೆ. ಆದರೆ ನನ್ನನ್ನು ದುಡ್ಡು ಕೇಳಿದರೆ ನಾನು ಸತ್ತು ಹೋಗುತ್ತೇನೆ ಎಂಬುದಾಗಿ ಬೆದರಿಕೆ ಕೂಡ ಹಾಕಿದ್ದರಂತೆ ಚೈತ್ರ. ನಂತರ ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಗೋವಿಂದ ಬಾಬು ಪೂಜಾರಿ. ಕೇಸು ಕೊಟ್ಟ ಬಳಿಕ ನಿನ್ನೆಯಷ್ಟೇ ಚೈತ್ರ ಕುಂದಾಪುರ ಅವರನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದು ವಿಚಾರಣೆ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ... ಹೌದು ಇದೆಲ್ಲದರ ನಡುವೆ ಅವರು ಇಷ್ಟು ದಿವಸ ಧರ್ಮದ ಹೆಸರಿನಲ್ಲಿ ಮುಸ್ಲಿಂ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು, ಮುಸ್ಲಿಮರನ್ನು ನಂಬಬೇಡಿ, ಅವರನ್ನ ಎಂದಿಗೂ ಕೂಡ ಹತ್ತಿರ ಬಿಟ್ಟುಕೊಳ್ಳಬೇಡಿ ಎನ್ನುತ್ತಿದ್ದರು. ಅದೇ ಚೈತ್ರ ಕುಂದಾಪುರ, ನಿನ್ನೆ ಅವರ ಮುಸ್ಲಿಂ ಗೆಳತಿ ಒಬ್ಬರ ಮನೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. 

ಪೊಲೀಸರು ಚೈತ್ರ ಅವ್ರನ್ನ ವಶಪಡಿಸಿಕೊಂಡು ಬರುವ ವೇಳೆ ನೀವು ನನ್ನನ್ನು ಅರೆಸ್ಟ್ ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಉಂಗರ ನುಂಗಲು ಸಹ ಪ್ರಯತ್ನ ಪಟ್ಟರಂತೆ ಚೈತ್ರಾ. ಆದ್ರೆ ನಮ್ಮ ಪೊಲೀಸ್ ಅಧಿಕಾರಿಗಳು ಇಂತಹವನಲ್ಲ ಎಷ್ಟು ನೋಡಿರುವುದಿಲ್ಲ ಅಲ್ಲವೇ. ಅದಕ್ಕೆ ಅವರು ಅವಕಾಶ ಮಾಡಿಕೊಟ್ಟಿಲ್ಲ. ಅಸಲಿಗೆ ಮುಂದೇನಾಯಿತು ಗೊತ್ತಾ..? ಇಲ್ಲಿದೆ ನೋಡಿ ವಿಡಿಯೋ. ಹಾಗೆ ಧರ್ಮದ ಹೆಸರಿನಲ್ಲಿ ಹೆಚ್ಚು ಹೆಚ್ಚು ಭಾಷಣ ಮಾಡುತ್ತಾ ಜನರನ್ನು ಮೋಸ ಮಾಡುವ ಇಂತಹ ವ್ಯಕ್ತಿಗಳನ್ನ ಎಂದಿಗೂ ನಂಬಲೇ ಬೇಡಿ. ಈಕೆ ಮಾಡಿರುವ ಈ ಕೆಲಸದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಮತ್ತು ವಿಡಿಯೋ ಕೊನೆಯವರೆಗೂ ನೋಡಿ ಧನ್ಯವಾದಗಳು...

VIDEO CREDIT : THIRD EYE