ಸಿಗ್ನಲನಲ್ಲಿ ಪೊಲೀಸ್ ಇಲ್ಲ ಅಂತ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದರೆ ಕೂಡ್ಲೆ ಬರುತ್ತೆ ಫೈನ್ ಸ್ಲಿಪ್! ನಿಮ್ಮ ಮೊಬೈಲ್ಗೆ ಇದು ಹೇಗೆ ಗೊತ್ತಾ ?

ಸಿಗ್ನಲನಲ್ಲಿ ಪೊಲೀಸ್ ಇಲ್ಲ ಅಂತ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದರೆ ಕೂಡ್ಲೆ ಬರುತ್ತೆ ಫೈನ್ ಸ್ಲಿಪ್! ನಿಮ್ಮ ಮೊಬೈಲ್ಗೆ ಇದು ಹೇಗೆ ಗೊತ್ತಾ ?


ಪೊಲೀಸ್ನವರು ಎಷ್ಟೇ ಶಿಸ್ತು ಕ್ರಮ ತೆಗೆದು ಕೊಂಡರು ಸಾರ್ವಜನಿಕರು ಮಾತ್ರ ಟ್ರಾಫಿಕ್ ರೂಲ್ಸ್ ಬ್ರೇಕ್  ಮಾಡುತ್ತಾನೆ ಇರುತ್ತಾರೆ . ಈಗ ಪೊಲೀಸ್ನವರು ಇದಕೊಂದ್ದು ಬ್ರೇಕ್ ಹಾಕಲು ಮುಂದಾಗಿದ್ದಾರೆ  


ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ನಿಯಮ ಉಲ್ಲಂಘನೆಗಳನ್ನು ನಿಯಂತ್ರಿಸಲು ನಗರ ಸಂಚಾರಿ ಪೊಲೀಸರು ಪ್ರಮುಖ 50 ಜಂಕ್ಷನ್​ಗಳಲ್ಲಿ ಅತ್ಯಾಧುನಿ ಕ್ಯಾಮೆರಾಗಳನ್ನು ಅಳವಡಿಸಲಿದ್ದಾರೆ.ನಗರ ಸಂಚಾರ ವ್ಯವಸ್ಥೆಯಲ್ಲಿ ತಂತ್ರಜ್ಞಾನವನ್ನು ಹತೋಟಿಯಲ್ಲಿಟ್ಟುಕೊಂಡು, ಬೆಂಗಳೂರು ಟ್ರಾಫಿಕ್ ಪೊಲೀಸ್ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಪರಿಚಯಿಸುತ್ತಿದೆ,

ಇದರಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಕ್ಯಾಮೆರಾಗಳು ಏಳು ರೀತಿಯ ಸಂಚಾರ ಉಲ್ಲಂಘನೆಗಳನ್ನು ಪತ್ತೆ ಮಾಡುತ್ತದೆ ಮತ್ತು ವಾಹನ ಮಾಲೀಕರಿಗೆ ಚಲನ್‌ಗಳನ್ನು ಕಳುಹಿಸುತ್ತದೆ.
ಅತಿವೇಗ, ಕೆಂಪು ದೀಪ ಉಲ್ಲಂಘನೆ, ಸ್ಟಾಪ್ ಲೇನ್ ಉಲ್ಲಂಘನೆ, ಹೆಲ್ಮೆಟ್ ಉಲ್ಲಂಘನೆ, ತ್ರಿಬಲ್ ರೈಡಿಂಗ್, ಚಾಲನೆ ವೇಳೆ ಮೊಬೈಲ್ ಬಳಕೆ ಮತ್ತು ಸೀಟ್ ಬೆಲ್ಟ್ ಇಲ್ಲದೆ ವಾಹನ ಚಲಾಯಿಸುವುದು ಮುಂತಾದ ಅನೇಕ ಸಂಚಾರ ಉಲ್ಲಂಘನೆಗಳನ್ನು ಐಟಿಎಂಎಸ್ ಪತ್ತೆ ಮಾಡಲಿದೆ. ಆದರೆ ಈ ಕ್ರಮವನ್ನು ವಾಹನ ಸವಾರರಿಂದ ದಂಡ ವಸೂಲಿ ಮಾಡಲು ಅಳವಡಿಸಲಾಗುತ್ತಿಲ್ಲ. ನಗರದಲ್ಲಿ ಸಂಚಾರ ಶಿಸ್ತು ಹೆಚ್ಚಿಸುವ ಉದ್ದೇಶದಿಂದ ಈ ಕ್ರಮ ಅಳವಡಿಸಲಾಗುತ್ತಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಐಟಿಎಂಎಸ್ ವ್ಯವಸ್ಥೆಯನ್ನು 50 ಜಂಕ್ಷನ್​ಗಳಲ್ಲಿ ಶೀಘ್ರದಲ್ಲೇ ಪ್ರಾರಂಭಿಸಲಾಗುವುದು. ಯಾವುದೇ ಸಂಚಾರ ನಿಯಮಗಳನ್ನು ಉಲ್ಲಂಘಿಸಬೇಡಿ. ಉದ್ದೇಶವು ದಂಡವನ್ನು ಸಂಗ್ರಹಿಸುವುದು ಅಲ್ಲ. ಇದು ಸಂಪರ್ಕರಹಿತವಾಗಿದೆ, ವಾರದ 7 ದಿನವೂ ಈ ವ್ಯವಸ್ಥೆ ಸಕ್ರಿಯವಾಗಿರಲಿದೆ.

ಸಾರ್ವಜನಿಕರು ಇನ್ನು ಮುಂದಾದರು ಟ್ರಾಫಿಕ್ ರೂಲ್ಸ್ ಅನ್ನು ಪಾಲಿಸುತ್ತಾರೆ ಎಂದು ಬಯೋಸಣ . ಇಲ್ಲದ್ದಿದ್ದರೆ ಅನಾವಶ್ಯಕವಾಗಿ ದಂಡ ತೇರ ಬೇಕಾಗುತ್ತೆ