ಅಣ್ಣನಿಗೆ ಹುಡುಗಿ ನೋಡಲು ಜೊತೆಗೆ ಹೋಗಿದ್ದ ತಮ್ಮ..! ಅತ್ತಿಗೆ ಆಗಬೇಕಾದವಳ ಜೊತೆ ತಮ್ಮ ಮಾಡಿದ್ದೆ ಬೇರೆ..!

ಅಣ್ಣನಿಗೆ ಹುಡುಗಿ ನೋಡಲು ಜೊತೆಗೆ ಹೋಗಿದ್ದ ತಮ್ಮ..! ಅತ್ತಿಗೆ ಆಗಬೇಕಾದವಳ ಜೊತೆ ತಮ್ಮ ಮಾಡಿದ್ದೆ ಬೇರೆ..!

ಸಾಮಾನ್ಯವಾಗಿ ಎಲ್ರೂ, ಬಹುತೇಕರು ಬಣ್ಣಗಳನ್ನು ಹೆಚ್ಚಾಗಿ ತೂಕ ಮಾಡುತ್ತಾರೆ. ಮನುಷ್ಯರಲ್ಲಿ ಕಪ್ಪು ಬಣ್ಣ ಹೊಂದಿರುವವರು ಒಳ್ಳೆಯವರು ಅಲ್ಲ, ತುಂಬಾನೇ ಕಟು ಸ್ವಭಾವದವರು, ಅವರು ಅಷ್ಟು ಸುಲಭವಾಗಿ ಯಾರಿಗೂ ಕೂಡ ಇಷ್ಟ ಆಗುವುದಿಲ್ಲ, ಎಂದು ಕೆಲವು ಜನರು ಹೇಳುತ್ತಾರೆ..ಇನ್ನೂ ಕೆಲವರು ಇದ್ದಾರೆ, ಬೆಳ್ಳಗೆ ತೆಳ್ಳಗೆ ಇರುವ ಜನರು, ನೋಡಲು ತುಂಬಾ ಮುದ್ದಾಗಿ ಕಾಣಿಸುತ್ತಾರೆ, ಅವರು ತುಂಬಾ ಒಳ್ಳೆಯವರು ಎಂದು ಕೆಲವರು ನಂಬಿ ಬಿಡುತ್ತಾರೆ..ಅದು ಶುದ್ಧ ಸುಳ್ಳು. ಹೌದು ಇಂದಿನ ಈ ಲೇಖನ ಕಪ್ಪು, ಬಿಳಿಪು ಬಣ್ಣದ ಕುರಿತಾಗಿ ಅಲ್ಲದಿದ್ದರೂ ಎಲ್ಲರೊಳಗಿರುವ ಒಂದು ಶುದ್ಧ ಮನಸಿನ ಬಗ್ಗೆ ಅರಿವು ಮೂಡಿಸುವ ಒಂದು ಸಣ್ಣ ಸಂಕಲ್ಪ ಆಗಿರುತ್ತದೆ. ಈ ಲೇಖನವನ್ನು ಕೊನೆಯವರೆಗೂ ಓದಿ.

ಹೌದು ಹೀಗೊಮ್ಮೆ ತಮಿಳುನಾಡಿನ ಕಟ್ಟು ಮಾವಡಿ ಎನ್ನುವ ಊರಿನಲ್ಲಿ ಈ ಘಟನೆ ನಡೆದಿರುವುದಾಗಿ ಇತ್ತೀಚಿಗೆ ತಿಳಿದು ಬಂದಿದೆ. ಕಟ್ಟು ಮಾವಡಿ ಊರಿನ ಒಂದು ಹೆಣ್ಣನ್ನು ದೂರದ ಊರಿನ ಗೌತಮ್ ಮತ್ತು ಅವರ ತಂದೆ ತಾಯಿ ಹುಡುಗಿ ನೋಡುವ ಶಾಸ್ತ್ರಕ್ಕೆ ಬರುತ್ತಿರುತ್ತಾರೆ..ಗೌತಮ್ ಅವರ ತಾಯಿಯ ಅಣ್ಣನ ಮಗಳೇ ಈ ಹುಡುಗಿ ಗೌರಿ..ಈಕೆಯನ್ನು ನೋಡುವ ಹುಡುಗಿ ನೋಡುವ ಶಾಸ್ತ್ರಕ್ಕಾಗಿ ಇವರೆಲ್ಲರೂ ಆ ಊರಿಗೆ ಆಗಮಿಸುತ್ತಾರೆ. ಹುಡುಗಿ ನೋಡಲು ಸ್ವಲ್ಪ ಕಪ್ಪು ಇರುತ್ತಾಳೆ. ಗೌತಮ್ ಮೊದಲ ಬಾರಿ ಈಕೆಯನ್ನು ನೋಡಿ ತಾನು ಬೇರೆ ದೇಶದಲ್ಲಿ ಕೆಲಸ ಮಾಡುತ್ತಿರುವ ಹುಡುಗ ಆಗಿದ್ದು, ಈಕೆಯನ್ನು ಹೇಗೆ ನಾನು ಮದುವೆ ಮಾಡಿಕೊಳ್ಳಬೇಕು, ಇಷ್ಟು ಕಪ್ಪು ಇದ್ದಾಳೆ ಎಂದು ತಮ್ಮನ ಜೊತೆ ರಾತ್ರಿ ಇಡೀ ಈ ವಿಷಯದ ಕುರಿತು ಮಾತನಾಡಿ ಕಣ್ಣೀರು ಹಾಕುತ್ತಲೇ ಇರುತ್ತಾನೆ. 

ಈಕೆಯನ್ನು ನಾನು ಮದುವೆ ಆಗುವುದಿಲ್ಲ ಎಂದು ಗೌತಮ್ ಪ್ರೀತಮ್ ಬಳಿ ಹಂಚಿಕೊಂಡಿದ್ದನಂತೆ.. ಮಾರನೇ ದಿನ ಬೆಳಗ್ಗೆ ಹುಡುಗಿ ನೋಡುವ ಶಾಸ್ತ್ರದಲ್ಲಿ ನನ್ನ ತಂದೆ ತಾಯಿಗೆ ಈಗಲೇ ಎಲ್ಲವ ಹೇಳಿಬಿಡಬೇಕು ಎಂದು ಗೌತಮ್ ತೀರ್ಮಾನ ಮಾಡಿದ್ದು, ನನಗೆ ಈ ಕಪ್ಪು ಹುಡಿಗಿ ಇಷ್ಟ ಇಲ್ಲ ಎಂದು ಹೇಳುವ ತವಕದಲ್ಲಿ ಇದ್ದರು. ಅಷ್ಟೋತ್ತರಲ್ಲಿಯೇ ನಾನು ಈ ಮದುವೆ ಮಾಡಿಕೊಳ್ಳುವುದಿಲ್ಲ, ನನಗೆ ಅವರು ಇಷ್ಟ ಇಲ್ಲ ಎಂಬುದಾಗಿ ಹುಡುಗಿಯೇ ತನ್ನ ತಂದೆ-ತಾಯಿ ಎದುರು ಹೇಳಿಬಿಡುತ್ತಾಳಂತೆ. ಆಗ ಯಾಕೆ ಎಂದು ಕೇಳಿ ಗೌರಿಯ  ತಂದೆ ತಾಯಿಯ ಹೊಡಿಯಲು ಕೂಡ ಮುಂದಾಗಿದ್ದು, ಅತ್ತ ಗೌರಿ ನಾನು ಇಷ್ಟು ಕಪ್ಪು ಇದ್ದೇನೆ, ಗೌತಮ್ ಮಾವ ಅವರು ತುಂಬಾನೇ ಬೆಳ್ಳಗಿದ್ದಾರೆ. ಫಾರಿನ್ ನಲ್ಲಿ ಕೆಲಸ ಮಾಡುತ್ತಾರೆ. ಅವರಿಗೆ ನಾನು ಸೆಟ್ಟಾಗುವುದಿಲ್ಲ ಹಾಗಾಗಿ ಬೇಡ ಎಂದು, ಹಿಂದಿನ ದಿವಸ ಇದೆ ಅಣ್ಣ ತಮ್ಮ ಮಾತನಾಡಿದ್ದ ಮಾತುಗಳನ್ನು ಕೇಳಿಸಿಕೊಂಡು ಗೌರಿಯೇ ಈ ನಿರ್ಧಾರವನ್ನು ತಿಳಿಸಿ ಬಿಡುತ್ತಾಳೆ.

ನಂತರ ಎಲ್ಲರೂ ಸರಿಯೆಂದು ಸುಮ್ಮನೆ ಹೊರಟರು. ಆಗ ಗೌತಮ್ ತಮ್ಮ ಪ್ರೀತಂ ಮನೆಯಲ್ಲಿ ಮೊಬೈಲ್ ಬಿಟ್ಟು ಬಂದಿದ್ದೇನೆ ಎಂದು ಮತ್ತೆ ಮರಳಿ ಗೌರಿ ಅವರ ಮನೆಗೆ ಬಂದಿದ್ದಾನೆ. ನಡು ಮನೆಯಲ್ಲಿ ಕುಳಿತು ಗೌರಿ ಒಂದೇ ಸಮನೆ ಬಿಕ್ಕಿ ಬಿಕ್ಕಿ ಅಳುತ್ತಿರುತ್ತಾಳೆ. ಅದನ್ನು ಗಮನಿಸಿದ ಗೌತಮ್ ತಮ್ಮ ಪ್ರೀತಮ್ ಗೌರಿ ನಾನು ನಿನ್ನನ್ನು ಮದುವೆಯಾಗುತ್ತೇನೆ, ನಾನು ನನ್ನ ಅಣ್ಣ ಮಾತನಾಡಿದ್ದನ್ನು ಕೇಳಿಸಿಕೊಂಡು ಇಂತಹ ದೊಡ್ಡ ನಿರ್ಧಾರ ಕೈಗೊಂಡಿರುವೆ, ನನಗೆ ಬಣ್ಣ ಮುಖ್ಯ ಅಲ್ಲ, ಒಳಗಿನ ನಿನ್ನ ಮನಸ್ಸು ತುಂಬಾ ಶುದ್ಧವಾಗಿದೆ..ನಾನು ನಿನ್ನ ಮದುವೆ ಆಗುತ್ತೇನೆ ನನ್ನ ಮದುವೆ ಮಾಡ್ಕೊತಿಯ ಎಂದು ಪ್ರೀತಮ್ ಕೇಳಿ ಬಿಡುತ್ತಾನೆ.

ನಂತರ ಅಲ್ಲಿಂದ ಎದ್ದು ಗೌರಿ ಸೀದಾ ರೂಮಿನ ಒಳಗೆ ಹೋಗಿ ಬಾಗಿಲು ಹಾಕಿಕೊಂಡು ಬಿಕ್ಕಿ ಬಿಕ್ಕಿ ಅಳುತ್ತಲೇ  ಇರುತಾಳಂತೆ..ಅದನ್ನ ನೋಡಿ ಪ್ರೀತಮ್ ಎರಡು ಮೂರು ಸಾರಿ ಆಕೆಯನ್ನು ಹೊರ ಬರಲು ಹಾಗೆ ತನ್ನ ನಿರ್ಧಾರ ತಿಳಿಸು ಎಂದು ಕರೆದರೂ ಸಹ ಆಕೆ ಹೊರ ಬರದಿದ್ದದ್ದನ್ನು ನೋಡಿ ಪ್ರೀತಮ್ ಮೋಸ್ಟ್ಲಿ ನನ್ನ ಮನಸ್ಸು ಸಹ ಈಕೆಗೆ ಇಷ್ಟ ಆಗಲಿಲ್ಲ ಎಂದೆನಿಸುತ್ತದೆ ಎಂದು ಅಲ್ಲಿಂದ ಹೊರಡಲು ಶುರು ಮಾಡುತ್ತಾನೆ. ಆಗ ಹೊರಗಡೆ ಓಡಿ ಬಂದ ಗೌರಿ ಯಾವಾಗ ನನ್ನ ಜೊತೆ ಮದುವೆ ಮಾಡಿಕೊಳ್ಳುತ್ತೀರಾ ಸಣ್ಣ ಮಾವ ಎಂದು ಹುಡುಗಿ ಹೇಳಿ ಬಿಡುತ್ತಾಳಂತೆ..ನಂತರ ಇಬ್ಬರೂ ಸಹ ಬೇರೆ ಹುಡುಗಿ ಜೊತೆ ಗೌತಮ್ ಮದುವೆ ಮಾಡಿಕೊಂಡ ಮೇಲೆ ಇವರು ಮದುವೆ ಆಗಿದ್ದಾರೆ. ಗೌತಮ್ ತಮ್ಮ ಪ್ರೀತಮ್ ಮದುವೆಯಾಗಿದ್ದು ಇದೀಗ ಮೂವರು ಮಕ್ಕಳಿದ್ದಾರೆ. ಅತ್ತ ಗೌತಮ್ ಗೂ ಸಹ ಮದುವೆಯಾಗಿ ಒಂದು ಮಗುವಿದೆಯಂತೆ.. ಅಸಲಿಗೆ ಇವರೆಲ್ಲರೂ ಮತ್ತೆ ಇನ್ನೊಂದು ಕಾರ್ಯಕ್ರಮದಲ್ಲಿ ಒಟ್ಟಿಗೆ ಸೇರಿದಾಗ ಗೌರಿಯ ಕೆಲ ಗುಣಗಳನ್ನು ನೋಡಿದ ಗೌತಮ್ ತನ್ನ ಹೆಂಡತಿಯ ಗುಣಗಳನ್ನು ನೋಡಿ ಶಾಕ್ ಆಗಿದ್ದನು, ಅದು ಏಕೆ ಗೊತ್ತಾ..? ಇಲ್ನೋಡಿ ವಿಡಿಯೋ. ನಿಜಕ್ಕೂ ಜೀವನದಲ್ಲಿ ಕಪ್ಪು ಬಿಳಿ ಮುಖ್ಯ ಅಲ್ಲ ಮನಸ್ಸು ಮುಖ್ಯ ಎಂದು ಆಗ ಗೌತಮ್ ಗೆ ಮನವರಿಕೆ ಆಗಿದೆ. ರಿಯಲ್ ಸ್ಟೋರಿ ಕೂಡ ಇದಾಗಿದ್ದು, ವಿಡಿಯೋ ಕೊನೆವರೆಗೂ ನೋಡಿ, ವಿಡಿಯೋ ಶೇರ್ ಮಾಡಿ, ಧನ್ಯವಾದಗಳು...( video credit : sandalwood reviews )