ನಾಚಿಗೆ ಪಡುವಂತಹ ಘಟನೆ, ತನ್ನ ತಂಗಿಯನ್ನೇ ಮದುವೆಯಾದ ಅಣ್ಣ ಎಂಥ ಕಾಲ ಬಂತು ಎಂದು ಕಣ್ಣೀರಿಟ್ಟ ಜನ
![ನಾಚಿಗೆ ಪಡುವಂತಹ ಘಟನೆ, ತನ್ನ ತಂಗಿಯನ್ನೇ ಮದುವೆಯಾದ ಅಣ್ಣ ಎಂಥ ಕಾಲ ಬಂತು ಎಂದು ಕಣ್ಣೀರಿಟ್ಟ ಜನ ನಾಚಿಗೆ ಪಡುವಂತಹ ಘಟನೆ, ತನ್ನ ತಂಗಿಯನ್ನೇ ಮದುವೆಯಾದ ಅಣ್ಣ ಎಂಥ ಕಾಲ ಬಂತು ಎಂದು ಕಣ್ಣೀರಿಟ್ಟ ಜನ](/news_images/2023/06/sis-bro1686975577.jpg)
ರಾಜ್ಯ ಸರ್ಕಾರದಿಂದ ಪ್ರೋತ್ಸಾಹ ಧನ ಪಡೆಯುವುದಕ್ಕಾಗಿ ವ್ಯಕ್ತಿಯೊಬ್ಬ ತನ್ನ ತಂಗಿಯನ್ನೇ ಮದುವೆಯಾಗಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.ಫಿರೋಜ್‌ಬಾದ್ ಜಿಲ್ಲೆಯ ತುಂಡ್ಲಾ ಪ್ರದೇಶದಲ್ಲಿ ಇತ್ತೀಚೆಗೆ ರಾಜ್ಯ ಸರ್ಕಾರವು ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಿತ್ತು.
ಅದರಲ್ಲಿ ಹಸೆಮಣೆ ಏರಿದ ಜೋಡಿಗಳಿಗೆ 35 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗಿದೆ. ಸರ್ಕಾರ ತಿಳಿಸಿರುವ ಪ್ರಕಾರ, 20 ಸಾವಿರ ರೂ.ಗಳನ್ನು ವಧುವಿನ ಬ್ಯಾಂಕ್ ಖಾತೆಗೆ ಹಾಕಲಾಗಿದ್ದರೆ, 10 ಸಾವಿರ ಮೌಲ್ಯದ ಉಡುಗೊರೆಯನ್ನು ನವ ದಂಪತಿಗೆ ನೀಡಲಾಗಿದೆ.
ಈ ಹಣದ ಆಸೆಗಾಗಿ ವ್ಯಕ್ತಿಯೊಬ್ಬ ತಂಗಿಯನ್ನೇ ವರಿಸಿದ್ದಾನೆ. ವಧು-ವರರ ದಾಖಲಾತಿ ಪರಿಶೀಲನೆ ವೇಳೆ ಈ ವಿಚಾರ ಬಯಲಿಗೆ ಬಂದಿದ್ದು, ತಪ್ಪಿತಸ್ಥನ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಲಾಗಿದೆ.