ಮದುವೆ ನಂತರ ಗಂಡನ ಮುಂದೆ ಬಿಂದಾಸ್ ಆಗಿ ಗುಟ್ಕಾ ಸೇವನೆ ವಿಡಿಯೋ ವೈರಲ್

ಮದುವೆ ನಂತರ ಗಂಡನ ಮುಂದೆ ಬಿಂದಾಸ್ ಆಗಿ ಗುಟ್ಕಾ ಸೇವನೆ  ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.

ಈಗಿನ ಕಾಲದಲ್ಲಿ ಹುಡುಗಿಯರು ಹುಡುಗರಗಿಂತ ಯಾವುದರಲ್ಲೂ ಕಮ್ಮಿ ಇಲ್ಲ . ಅದು ಪಬ್ಲಿಕ್ ಜಾಗ ಅಂತಾನೂ ನೋಡದೆ ಆಗ ತಾನೇ ಮದುವೆ ಮಾಡಿಕೊಂಡು ಊರಿಗೆ ಹೋರಾಡುತ್ತಿದಾಗ ಎಂತ ಕೆಲಸ ಮಾಡಿದ್ದಾಳೆ ಇಲ್ಲಿ ನೋಡಿ .ದುಶ್ಚಟಗಳಿಗೆ ಒಮ್ಮೆ ದಾಸರಾದರೆ ಅವು ನಮ್ಮನ್ನು ನಿಯಂತ್ರಿಸಲು ಶುರು ಮಾಡುತ್ತವೆ. ಗುಟ್ಕಾ(Gutka), ಬೀಡಿ (Beedi) ಮದ್ಯಪಾನದಂತಹ ದುಶ್ಚಟಗಳಿಂದ ಅನೇಕರ ಬದುಕು ಬರ್ಬಾದ್ ಆಗಿದೆ. ಆದರೂ ಜನ ಬುದ್ದಿ ಕಲಿಯುತ್ತಿಲ್ಲ. 

ಗುಟ್ಕಾ ಸೇವನೆಯಿಂದ ಗಂಟಲು ಬಾಯಿಯ ಕ್ಯಾನ್ಸರ್‌ಗೆ ತುತ್ತಾಗಿ ಅನೇಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅದೇ ರೀತಿ ಇಲ್ಲೊಂದು ಕಡೆ ವಧು ನಾನ್ಯಾರಿಗೂ ಕಡಿಮೆ ಇಲ್ಲ ಎಂಬಂತೆ ಮದ್ವೆ ಧಿರಿಸಿನಲ್ಲೇ ಗುಟ್ಕಾ ಸೇವಿಸಿದ ಘಟನೆ ನಡೆದಿದೆ. 

ವೀಡಿಯೋದಲ್ಲಿ ಕಾಣಿಸುವಂತೆ ವಧು ಹಾಗೂ ವರ ತಮ್ಮ ಮದುವೆ ಧಿರಿಸಿನಲ್ಲೇ ರಸ್ತೆಯಲ್ಲಿ ನಿಂತಿದ್ದಾರೆ. ಇವರ ಅಕ್ಕಪಕ್ಕದಲ್ಲೇ ಹಲವು ವಾಹನಗಳು ಹಾದು ಹೋಗುತ್ತಿದ್ದು, ವರ ಫೋನ್‌ನಲ್ಲಿ ಮಾತನಾಡುತ್ತಾ ನಿಂತಿದ್ದರೆ, ವಧು ತನ್ನ ಕೈಯಲ್ಲಿದ್ದ ಗುಟ್ಕಾ ಪ್ಯಾಕೇಟ್ ಅನ್ನು ತೆರೆದು ಅದನ್ನು ಅಂಗೈಗೆ ಹಾಕಿಕೊಳ್ಳುತ್ತಾಳೆ.  ನಂತರ ಗುಟ್ಕಾ ತಿನ್ನುವವರ ಹವ್ಯಾಸದಂತೆ ಅದನ್ನು  ಕೈಗಳಿಂದ ಉಜ್ಜಿ ಬಾಯಿಗೆ ಹಾಕಿಕೊಳ್ಳುತ್ತಾಳೆ. ಅತ್ತ ವರ ಫೋನ್‌ನಲ್ಲಿ ಬ್ಯುಸಿಯಾಗಿದ್ದು, 12 ಸೆಕೆಂಡ್‌ಗಳ ಈ ವೀಡಿಯೋ ಇಂಟರ್‌ನೆಟ್‌ನಲ್ಲಿ ಸಂಚಲನ ಮೂಡಿಸಿದೆ. 

ರಾಜಸ್ಥಾನದ ಬರನ್‌ ಪ್ರದೇಶದಲ್ಲಿ ನಡೆದ ಘಟನೆ ಎಂದು ಹೇಳಲಾಗುತ್ತಿದ್ದು, ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮದ್ವೆಯಾದ ಜೋಡಿ ಮದ್ವೆ ಮುಗಿಸಿ ಊರಿಗೆ ಹೊರಟಿದ್ದರು. ಅಷ್ಟರಲ್ಲಿ ವರನ ಫೋನ್ ರಿಂಗ್ ಆಗಿದ್ದು, ಆತ ಮಾತನಾಡುತ್ತಾ ನಿಂತಿದ್ದರೆ, ಈಕೆ ಸಿಕ್ಕಿದ್ದೇ ಚಾನ್ಸ್ ಅಂತ ಜರ್ದಾ ತಿನ್ನುವುದರಲ್ಲಿ ಬ್ಯುಸಿಯಾಗಿದ್ದಾಳೆ.