ಯಾರು ಊಹಿಸಿರದ ಇಬ್ಬರು ಸ್ಪರ್ಧಿಗಳು ಈ ವಾರ ಔಟ್..! ಡಬಲ್ ಎಲಿಮಿನೇಷನ್ ಟ್ವಿಸ್ಟ್ ಕೊಟ್ಟ ಕಿಚ್ಚ

ಯಾರು ಊಹಿಸಿರದ ಇಬ್ಬರು ಸ್ಪರ್ಧಿಗಳು ಈ ವಾರ ಔಟ್..! ಡಬಲ್ ಎಲಿಮಿನೇಷನ್ ಟ್ವಿಸ್ಟ್ ಕೊಟ್ಟ ಕಿಚ್ಚ

ಕನ್ನಡದಲ್ಲಿ ದೊಡ್ಡ ರಿಯಾಲಿಟಿ ಶೋ ಆಗಿ ಇದೀಗ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ದಿನದಿಂದ ದಿನಕ್ಕೆ ಹೆಚ್ಚು ವೀಕ್ಷಕರನ್ನ ಮಾಡಿಕೊಳ್ಳುತ್ತಿದೆ. ಈ ಬಾರಿ ಪುಟ್ಟಕ್ಕನ ಮಕ್ಕಳು ನಂಬರ್ ಒಂದನೇ ಸ್ಥಾನದಲ್ಲಿ ಇತ್ತು. ಅದಕ್ಕೂ ಕೂಡ ಟಕ್ಕರ್ ಕೊಟ್ಟಿದ್ದು ಟಿ ಆರ್ಪೀ ಯಲ್ಲಿ ಇದೆ ಬಿಗ್ಬಾಸ್ ಶೋ ಮುಂದಿದೆ. ಹೌದು ಈಗಾಗಲೇ ಬಿಗ್ ಬಾಸ್ ಆರಂಭವಾಗಿದ್ದು ಹತ್ತನೇ ಸೀಸನ್ ನ ಹತ್ತನೇ ವಾರಕ್ಕೆ ಕಾಲಿಟ್ಟಿದೆ. ಸ್ಪರ್ಧಿಗಳ ಆಟ ಆಟದ ಕೌತುಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಒಂದು ಕಡೆ ಯಾರು ಬಿಗ್ ಬಾಸ್ ಮನೆಯಲ್ಲಿ ಪ್ರತಿ ವಾರ ನಾಮಿನೇಟ್ ಆಗಿ ಎಲಿಮಿನೇಷನ್ ಆಗಿ ಹೊರ ಹೋಗುತ್ತಾರೋ ಎಂದು, ಇನ್ನೊಂದು ಕಡೆ ಟಾಸ್ಕ್ ಆಟ, ಮತ್ತೊಂದು ಕಡೆ ಸ್ಟ್ರಾಟಜಿ ಮತ್ತೊಂದು ಕಡೆ ಗೆಲ್ಲಬೇಕು ಎನ್ನುವ ಆಸೆ ಎಲ್ಲರಲ್ಲಿಯೂ ಇದೆ.

ಬಿಗ್ ಬಾಸ್ ವಾರಂತ್ಯಕ್ಕೆ ಎಲ್ಲರೂ ಕೂಡ ಕಾಯುವುದು ಕಿಚ್ಚನ ಮಾತು ಕೇಳಲು. ಬಿಗ್ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳ ಕೆಲವು ಆಟದ ವೈಖರಿಗಳನ್ನು ಗಮನಿಸಿ ಯಾರಿಗೆಲ್ಲ ಕ್ಲಾಸ್ ತೆಗೆದುಕೊಳ್ಳುತ್ತಾರೆ ಕಿಚ್ಚ, ಹಾಗೇನೇ  ಯಾರಿಗೆಲ್ಲ ಬುದ್ಧಿವಾದ ಹೇಳುತ್ತಾರೆ, ಸರಿಯಾದ ಆಟ ಆಡುವುದು ಹೇಗೆ ಎನ್ನುವ ಮಾತುಗಳನ್ನು ಕೇಳುವ ತವಕದಲ್ಲಿ ಬಿಗ್ ಬಾಸ್ ವಿಕ್ಷಕರು ಕೂಡ ಪ್ರತಿವಾರ ಕಾಯುತ್ತಾರೆ. ಕೆಲವೊಮ್ಮೆ ಸುದೀಪ್ ಅವರ ಕೆಲವು ಮಾತುಗಳು, ಅವರು ಹೇಳುವ ವೀಕೆಂಡ್ ಕುರಿತಾದ ಮಾತುಗಳು ಕೆಲವು ಚೆನ್ನಾಗಿಯೇ ಇರುತ್ತವೆ.    

ಒಮ್ಮೊಮ್ಮೆ ಬೇಸರಕ್ಕೂ ಕೂಡ ಕಾರಣವಾಗುತ್ತವೆ. ಈ ವಾರದ ನಾಮಿನೇಟ್ ಪ್ರಕ್ರಿಯೆ ಕೂಡ ಕೆಲವರಿಗೆ ಇಷ್ಟ ಆಗಲಿಲ್ಲ. ಕೊನೆಯಲ್ಲಿ ಉಳಿದ ತುಕಾಲಿ ಸಂತೋಷ ತುಕಾಲಿ ಆಟವನ್ನೇ ಆಡಿದರು ಎಂದು ಕೆಲವರು ಹೇಳುತ್ತಿದ್ದಾರೆ. ಇದರಲ್ಲಿ ಮೋಸ ಆಯ್ತೆಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆ ಈ ವಾರ ಇಬ್ಬರು ಬಿಗ್ ಮನೆಯಿಂದ ಔಟ್ ಆಗಿದ್ದು ಡಬಲ್ ಎಲಿಮಿನೇಷನ್ ಮೂಲಕ ಹೊರ ಬಂದಿದ್ದಾರೆ ಎಂದು ಕೇಳಿ ಬಂದಿದೆ. ಈ ವಾರದಲ್ಲಿ ಸೇವ್ ಆದ ಮೊದಲ ಸ್ಪರ್ಧಿ ಪ್ರತಾಪ್, ಜೊತೆಗೆ ಎರಡನೇ ಸ್ಪರ್ಧಿ ಸಂಗೀತ , ಮೂರನೇ ಸ್ಪರ್ಧಿ ವಿನಯ್ ಎನ್ನಲಾಗಿದ್ದು ಕೊನೆಯಲ್ಲಿ ಮೈಕಲ್ ಸೇವ್ ಆಗಿದ್ದಾರಂತೆ. ಪವಿ ಅವರು ಈ ವಾರ ಮನೆಯಿಂದ ಹೊರ ಬಂದಿದ್ದು ಸಿರಿಯವರು ಕೂಡ ವಾರದ ಮಧ್ಯದಲ್ಲಿ ಹೊರ ಬರುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಕಿಚ್ಚ ಕೊಡುತ್ತಿರುವ ಈ ವಾರದ ಡಬಲ್ ಎಲಿಮಿನೇಷನ್  ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ, ಮತ್ತು ಮುಂದಿನ ವಾರ ನಿಮ್ಮ ಪ್ರಕಾರ ಯಾರು ಮನೆಯಿಂದ ಹೊರ ಬರಬೇಕು ಎಂದು ಕಾಮೆಂಟ್ ಮಾಡಿ, ಧನ್ಯವಾದಗಳು...

( video credit : deep Locus Kannada )