ಬಿಗ್ ಬಾಸ್ ಸೀಸನ್ 11ರ ಕಾಂಟೆಸ್ಟಂಟ್ಸ್ ಪಟ್ಟಿ ಬಿಡುಗಡೆ : ಯಾರೆಲ್ಲ ಇದ್ದಾರೆ ನೋಡಿ ?
ಇದೇ ಸೆ.29ಕ್ಕೆ ಬಿಗ್ ಬಾಸ್ ಸೀಸನ್ 11ಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಈ ಹೊಸ ಸೀಸನ್‌ನಲ್ಲಿ ಯಾರೆಲ್ಲಾ ದೊಡ್ಮನೆಗೆ ಬರಬಹುದು ಎಂದು ಒಂದಿಷ್ಟು ಹೆಸರುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಪ್ರೇಮಾ
‘ಬಿಗ್ ಬಾಸ್’ ಮನೆಯಲ್ಲಿ ಸೀನಿಯರ್ ಕಲಾವಿದರೂ ಸ್ಪರ್ಧಿಸೋದು ಕಾಮನ್. ಒಂದ್ಕಾಲದಲ್ಲಿ ಕನ್ನಡ ಚಿತ್ರರಂಗವನ್ನ ಆಳಿದ ಬ್ಯೂಟಿ ಪ್ರೇಮಾ ‘ಬಿಗ್ ಬಾಸ್’ ಮನೆಗೆ ಬಂದರೆ ಚೆನ್ನ ಅನ್ನೋದು ವೀಕ್ಷಕರ ಹೆಬ್ಬಯಕೆ. ‘ಮಹಾನಟಿ’ ಮೂಲಕ ಪ್ರೇಮಾ ಹೇಗಿದ್ರೂ ಕಿರುತೆರೆ ಲೋಕಕ್ಕೆ ಕಾಲಿಟ್ಟಾಗಿದೆ. ‘ಬಿಗ್ ಬಾಸ್’ ಕಡೆ ಪ್ರೇಮಾ ತಿರುಗಿನೋಡ್ತಾರಾ?
ದೀಪಕ್ ಗೌಡ
‘ನಮ್ಮನೆ ಯುವರಾಣಿ’ ಸೀರಿಯಲ್ ಖ್ಯಾತಿಯ ದೀಪಕ್ ಗೌಡ ಈ ಬಾರಿ ‘ಬಿಗ್ ಬಾಸ್’ ಮನೆಗೆ ಬರಬಹುದು ಎನ್ನಲಾಗಿದೆ.‘ಗಿಚ್ಚಿ ಗಿಲಿಗಿಲಿ 3’ ವಿನ್ನರ್ ಆದ ಹುಲಿ ಕಾರ್ತಿಕ್ ಹೆಸರು ಸದ್ದು ಮಾಡುತ್ತಿದೆ. ದೊಡ್ಮನೆಗೆ ಕಾಲಿಡಲಿದ್ದಾರೆ ಎನ್ನಲಾಗ್ತಿದೆ.
‘ಬೃಂದಾವನ’ ಸೀರಿಯಲ್ ನಟಿ ಅಮೂಲ್ಯ ಭಾರದ್ವಾಜ್ ನಟನೆ ಮೂಲಕ ಮನಗೆದ್ದಿದ್ದಾರೆ. ಅವರು ಬೋಲ್ಡ್ ಫೋಟೋಶೂಟ್‌ಗಳ ಮೂಲಕ ಪಡ್ಡೆಹುಡುಗರ ನಿದ್ದೆಕದ್ದಿದ್ದಾರೆ. ಅವರು ಬಿಗ್ ಬಾಸ್ ಶೋಗೆ ಬರಲಿದ್ದಾರೆ ಎನ್ನಲಾಗಿದೆ.
ಇನ್ನೂ ಕನ್ನಡದ ಸಾಕಷ್ಟು ಸಿನಿಮಾಗಳಿಗೆ ಹಾಡಿ ಸೈ ಎನಿಸಿಕೊಂಡಿರುವ ಗಾಯಕಿ ಐಶ್ವರ್ಯಾ ರಂಗರಾಜನ್ ಬರಲಿದ್ದಾರೆ ಎನ್ನಲಾಗಿದೆ. ಗೌರವ್ ಶೆಟ್ಟಿ, ದೀಪಕ್ ಗೌಡ, ತುಕಾಲಿ ಮಾನಸ, ವರುಣ್ ಆರಾಧ್ಯ ಸೇರಿದಂತೆ ಅನೇಕರ ಹೆಸರು ಚಾಲ್ತಿಯಲ್ಲಿದೆ. ಆದರೆ ಎಲ್ಲದಕ್ಕೂ ಶೋ ಶುರುವಾಗುವವರೆಗೂ ಕಾದುನೋಡಬೇಕಿದೆ
ಹರೀಶ್ ನಾಗರಾಜ್
ಪತ್ರಕರ್ತರ ವಲಯದಿಂದ ನ್ಯೂಸ್ ಆಂಕರ್ ಹರೀಶ್ ನಾಗರಾಜ್ ಹೆಸರು ಕೇಳಿಬರುತ್ತಿದೆ.
ಲೇಖಿ ಗೋಸ್ವಾಮಿ
ಲೇಖಿ ರೈಡರ್ ಎಂಬ ಯೂಟ್ಯೂಬ್ ಚಾನೆಲ್ ಹೊಂದಿರುವ ಲೇಖಿ ಗೋಸ್ವಾಮಿ ಈ ಬಾರಿ ‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ.
ಇತರೆ ಹೆಸರುಗಳು
ಸಂಭಾವ್ಯ ಪಟ್ಟಿಯಲ್ಲಿ ರೀಲ್ಸ್ ರೇಷ್ಮಾ, ಚಂದ್ರಪ್ರಭ, ರಾಘವೇಂದ್ರ, ‘ಸವಿ ರುಚಿ’ ಜಾಹ್ನವಿ, ‘ಗೀತಾ’ ಖ್ಯಾತಿಯ ಶರ್ಮಿತಾ ಗೌಡ, ‘ಪದ್ಮಾವತಿ’ ನಟ ತ್ರಿವಿಕ್ರಮ್, ನಟಿ ಸುಕೃತಾ ನಾಗ್, ‘ಸತ್ಯ’ ನಟಿ ಗೌತಮಿ ಜಾಧವ್, ‘ಚಿಕ್ಕಜಮಾನಿ’ ಖ್ಯಾತಿಯ ಶರತ್ ಕುಮಾರ್ ಹೆಸರುಗಳೂ ಇವೆ. ಈ ಪೈಕಿ ಯಾರೆಲ್ಲಾ ‘ಬಿಗ್ ಬಾಸ್’ ಮನೆಗೆ ಬರ್ತಾರೋ ಕಾದುನೋಡಬೇಕಿದೆ.
( video credit : sandalwood Kannada )