ಸೀಸನ್ ಹತ್ತರ ಫೈನಲ್ ಪಟ್ಟಿ ಬಿಡುಗಡೆ ಮಾಡಿದ ಕಲರ್ಸ್ ಕನ್ನಡ! ಆ ಸ್ಪರ್ಧಿಗಳು ಯಾರು ಗೊತ್ತಾ?

ಸೀಸನ್ ಹತ್ತರ ಫೈನಲ್ ಪಟ್ಟಿ ಬಿಡುಗಡೆ ಮಾಡಿದ ಕಲರ್ಸ್ ಕನ್ನಡ! ಆ ಸ್ಪರ್ಧಿಗಳು ಯಾರು ಗೊತ್ತಾ?

ಈಗ ಕಿರುತೆರೆಯಲ್ಲಿ ಮತ್ತೆ ನೂರು ದಿನಗಳ ಹಬ್ಬ ಶುರುವಾಗಿದೆ. ಹೌದು ಸ್ನೇಹಿತರೇ ಕಿರುತೆರೆಯಲ್ಲಿ ಮರಂಜನೆಗೆಂದು ಸಾಕಷ್ಟು ಕಾರ್ಯಕ್ರಮಗಳು ಹಾಗೂ ಧಾರಾವಾಹಿಗಳು ಇವೆ. ವಾರ ಪೂರ್ತಿ ಧಾರಾವಾಹಿಗಳ ಮೂಲಕ ಮನೋರಂಜನೆ ಸಿಕ್ಕರೆ ವಾರದ ಅಂತ್ಯದಲ್ಲಿ ರಿಯಾಲಿಟಿ ಶೋಗಳು ಮನೋರಂಜನೆ ನೀಡುತ್ತವೆ. ಇನ್ನೂ ರಿಯಾಲಿಟಿ ಶೋಗಳ ಪೈಕಿ ದೊಡ್ಡ ಹಿಟ್ ಪಡೆದುಕೊಂಡಿರುವ ಶೋ ಎಂದರೆ ಅದು "ಬಿಗ್ ಬಾಸ್ ಕನ್ನಡ". ಇನ್ನೂ ಬಿಗ್ ಬಾಸ್ ಹಿಂದಿಯ ಅವತರಣಿಕೆ ಆಗಿದ್ದರು ಕೂಡ ಈ ರಿಯಾಲಿಟಿ ಶೋ ಎಲ್ಲಾ ಭಾಷೆಯ ಕಿರುತೆರೆಯಲ್ಲಿ ಕೂಡ ದೊಡ್ಡ ಹಿಟ್ ಪಡೆದುಕೊಂಡು ಮುನ್ನುಗುತ್ತಿರುವ ಶೋ ಎಂದರೆ ತಪ್ಪಾಗಲಾರದು. ಇನ್ನೂ ನಮ್ಮ ಕನ್ನಡದಲ್ಲಿ ಕೂಡ 9 ಟಿವಿ ಸೀಸನ್ ಹಾಗೂ ಒಂದು ಓಟಿಟಿ ಸೀಸನ್ ಯಶಸ್ವಿಯಾಗಿ ಮುಗಿದಿದೆ. 

ಹಾಗೆಯೇ ಈ ಬಾರಿ ಎಂದಿನಂತೆ ಅಕ್ಟೋಬರ್ ತಿಂಗಳಲ್ಲಿ ಬಿಗ್ ಬಾಸ್ ಸೀಸನ್ 10ರ ಪ್ರೋಮೋ ಭರ್ಜರಿ ಸದ್ದು ಮಾಡುತ್ತಿದೆ. ಈಗಿರುವಾಗ ಕೆಲ ದಿನಗಳಿಂದ ಬಿಗ್ ಬಾಸ್ ಸ್ಪರ್ಧಿಗಳ ಅಂದಾಜಿನ ಲೆಕ್ಕಾಚಾರ ನಡೆಯುತ್ತಲೇ ಇದೆ. ಈ ಅಂದಾಜಿನ ಲೆಕ್ಕಾಚಾರಕ್ಕೆ ಕಲರ್ಸ್ ಕನ್ನಡ ಒಂದು ಬ್ರೇಕ್ ನೀಡಿದ್ದು ಈಗ ಇವರು ನೀಡಿರುವ ಹಿಂಟ್ ಪ್ರಕಾರ ಹತ್ತನೇ ಸೀಸನ್ ಗೆ ಬರುವ ಹತ್ತು ಸ್ಪರ್ಧಿಗಳು ಯಾರೆಂದು ಅನಾವರಣ ಮಾಡಲಾಗಿದೆ. ಆ ಹತ್ತು ಸ್ಪರ್ಧಿಗಳು ಯಾರೆಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ. ಈ ಬಾರಿ ದಶಕದ ಸೀಸನ್ ಆಗಿರುವ ಕಾರಣ ಈ ಸಿಸನ್ ನಲ್ಲಿ ಸಾಕಷ್ಟು ವಿಭಿನ್ನತೆಯನ್ನು ಕೊಡ ಹೊಂದಿದ್ದು ಮನೋರಂಜನೆ ದುಪ್ಪಟ್ಟು ಇರಲಿದೆ ಎಂದು ಎಲ್ಲರೂ ಕೊಡ ಅಭಿಪ್ರಾಯ ಪಟ್ಟಿದ್ದಾರೆ. ಹೀಗಿರುವ ನಮಗೆ ಮನೋರಂಜನೆ ನೀಡುವ ಸ್ಪರ್ಧಿಗಳು ಯಾರೆಂದು ತಿಳಿಯಲು ಮುಂದೆ ಓದಿ. 

ಇನ್ನೂ "ಅನುಭಂದ ಅವಾರ್ಡ್ಸ್" ನಲ್ಲಿ ಈಗಾಗಲೇ ಬಿಗ್ ಬಾಸ್ ಸೀಸನ್ 10ರ ಮೊದಲ ಸ್ಪರ್ಧಿ ಯಾರೆಂದು ರೀವಿಲ್ ಮಾಡಲಾಗಿದೆ. ನಮ್ಮ ಹೆಮ್ಮೆಯ "ರಕ್ಷಿತ್ ಶೆಟ್ಟಿ" ಅವರ ನಿರ್ದೇಶನದ "ಚಾರ್ಲಿ" ಸಿನಿಮಾದ ಚಾರ್ಲಿ ನಮ್ಮ ಬಿಗ್ ಬಾಸ್ ಕನ್ನಡದ ಸೀಸನ್ ಹತ್ತರ ಮೊದಲ ಸ್ಪರ್ಧಿ. "ನಾಗಿಣಿ 2" ನಲ್ಲಿ ನಾಯಕ ಹಾಗೂ ನಾಯಕಿ ಆಗಿ ಮಿಂಚಿದ್ದ "ನಿನಾದ್ ಹಾಗೂ ನಮ್ರತಾ ಗೌಡ". "ಅಗ್ನಿಸಾಕ್ಷಿ ಹಾಗೂ ಲಕ್ಷ್ಮಿ" ಧಾರಾವಾಹಿಯಲ್ಲಿ ಮಿಂಚಿರುವ "ಸುಕೃತ ನಾಗ್". "ಗೀತಾ" ಸೀರಿಯಲ್ ನಟಿ "ಭವ್ಯ ಗೌಡ". ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಪ್ರಸಿದ್ದಿ ಪಡೆದಿರುವ ಕಡೆ ನೋಡಿದರೆ ನಮ್ಮ "ಬುಲೆಟ್ ಪ್ರಕಾಶ್" ಅವರ ಮಗ "ರಕ್ಷಕ್ ಬುಲೆಟ್" ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹೈಪ್ ನಲ್ಲಿ ಇದ್ದಾರೆ ಅವರು ಈ ಬಾರಿ ಸ್ಪರ್ಧಿಯಾಗಿ ಬರಲಿದ್ದಾರೆ. ಇನ್ನೂ ರೀಲ್ ಮಾಡುತ್ತಾ ಪ್ರಸಿದ್ದಿ ಪಡೆದಿರುವ "ಭೂಮಿಕಾ ಬಸವರಾಜು, ವರ್ಷ ಕಾವೇರಿ ಹಾಗೂ ವರುಣ್" ಕೂಡ ಈ ಸೀಸನ್ 10ರ ಸ್ಪರ್ಧಿಗಳು ಎಂದು ತಿಳಿಸಲಾಗಿದೆ. ಆದರೆ ಈ ಸೀಸನ್ ಓಪನಿಂಗ್ ದಿನವೇ ನಮ್ಮ ಎಲ್ಲಾ ಪ್ರಶ್ನೆಗೆ ಉತ್ತರ ಸಿಗಲಿದೆ.

( video credit : Saksha Media )