ಬಿಗ್ ಬಾಸ್ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ ಬಿಗ್ ಬಾಸ್ ನ ಮಾಜಿ ಸ್ಪರ್ಧಿ! ಯಾರು ಹಾಗೂ ಯಾಕೆ ಗೊತ್ತಾ?
ಕಿರುತೆರೆಯ ಅತಿ ದೊಡ್ದ ರಿಯಾಲಿಟಿ ಶೋ ಎಂದ್ರೆ ಅದು ಬಿಗ್ ಬಾಸ್ ಎಂದ್ರೆ ತಪ್ಪಾಗಲಾರದು. ಇನ್ನೂ ಈ ಬಿಗ್ ಬಾಸ್ ಹಿಂದಿಯ ಅವತರಣಿಕೆಯಲ್ಲಿ ಮೂಡಿ ಬರುತ್ತಿದ್ದರು ಕೊಡ ಈಗ ಎಲ್ಲಾ ಭಾಷೆಯಲ್ಲಿಯೂ ತನ್ನದೇ ಆದ ಛಾಪು ಮೂಡಿಸಿ ವಿಜಯವನ್ನು ಸಾಧಿಸಿದೆ ಎಂದು ಹೇಳಬಹುದು. ಇನ್ನೂ ಈಗ ಎಲ್ಲಾ ಭಾಷೆಯಲ್ಲಿ ಕೊಡ ಎರಡಂಕಿ ಸೀಸನ್ ಮುಗಿದಿದೆ. ಈ ಸೀಸನ್ ನಲ್ಲಿ ಎಲ್ಲಾ ಸೀಸನ್ ಕೊಡ ಉತ್ತಮ ಎಂದು ಹೆಸರು ಕೊಡ ಪಡೆದುಕೊಂಡಿದೆ ಎಂದು ಹೇಳಬಹುದು. ಈಗ ನಮ್ಮ ಕನ್ನಡ ಬಿಗ್ ಬಾಸ್ ನ ಸರದಿ. ಈ ಬಾರಿ ಕನ್ನಡ ಬಿಗ್ ಬಾಸ್ ನಲ್ಲಿ ದಶಕದ ಸಂಬ್ರಮ ಆಗಿರುವ ಕಾರಣ ಹ್ಯಾಪಿ ಬಿಗ್ ಬಾಸ್ ಎಂದು ಘೋಷಣೆ ಮಾಡಲಾಗಿತ್ತು.
ಆದ್ರೆ ಮನೆಯ ಸ್ಪರ್ಧಿಗಳ ನಡವಳಿಕೆಯಿಂದ ಈ ವರೆಗೂ ಬೆರಳೆಣಿಕೆಯ ಹ್ಯಾಪಿ ಕ್ಷಣಗಳು ಇದೆ ಎಂದು ಹೇಳಬಹುದು. ಇನ್ನೂ ಈ ಬಿಗ್ ಬಾಸ್ ನಲ್ಲಿ ಬಂದು ಹೋದ ಮೇಲೆ ಸಾಕಷ್ಟು ಸ್ಪರ್ಧಿಗಳ ಜೀವನದಲ್ಲಿ ಬದಲಾವಣೆಯನ್ನು ಕಂಡಿರುವುದು ನಮಗೆಲ್ಲರಿಗೂ ಗೊತ್ತಿರುವ ವಿಚಾರ. ಇನ್ನೂ ಕೆಲವರು ಯತ ಪ್ರಕಾರ ಜೀವನ ಸಾಗಿಸುತ್ತಾರೆ. ಈ ವರೆಗೂ ಯಾರು ಕೊಡ ನಾನು ಬಿಗ್ ಬಾಸ್ ಹೋಗಿ ತಪ್ಪು ಮಾಡಿದೆ ಎಂದು ಹೇಳಿದಂತೆ ಒಂದು ಸಣ್ಣ ಉದಾಹರಣೆ ಕೊಡ ಇಲ್ಲ. ಆದರೆ ಇಲ್ಲೊಬ್ಬ ಸ್ಪರ್ಧಿ ನಾನು ಬಿಗ್ ಬಾಸ್ ಹೋಗಿ ತಪ್ಪು ಮಾಡಿದೆ ಎಂದು ಹೇಳಿದ್ದಾರೆ. ಆ ಸ್ಪರ್ಧಿ ಯಾರು ಹಾಗೂ ಯಾಕೆ ಈ ರೀತಿ ಹೇಳಿದ್ದಾರೆ ಎಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.
ಇನ್ನೂ ಸೀಸನ್ 6ರ ಸ್ಪರ್ಧಿ ಅಕ್ಷತಾ ಪಾಂಡವಪುರ ಬಹಿರಂಗವಾಗಿ ಮಾದ್ಯಮದ ಇಂಟರ್ವ್ಯೂ ನಲ್ಲಿ ಹೇಳಿಕೊಂಡಿದ್ದಾರೆ.
ಈಕೆ ರಂಗ ಕಲಾವಿದೆ ಆಗಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ಆ ನಂತರ ಕೆಲವು ಸಿನಿಮಾಗಳಲ್ಲಿ ಸಹ ಕಲಾವಿದೆಯಾಗಿ ನಟಿಸಿದ್ದಾರೆ. ಇನ್ನೂ ಈಗ ತಮ್ಮ ವಯಕ್ತಿಕ ಜೀವನದಲ್ಲಿ ತಮ್ಮ ಗಂಡ ಹಾಗೂ ಮಗಳಿಗೆ ಸಮಯ ನೀಡುತ್ತಾ ತಮ್ಮದೇ ಆದ ಯುಟ್ಯೂಬ್ ಚಾನಲ್, ಕುಕ್ಕಿಂಗ್ ಟುಟೂರಿಯಲ್ ಹಾಗೂ ನಟನೆಯ ರಂಗದಲ್ಲಿ ಬ್ಯುಸಿ ಆಗಿದ್ದಾರೆ. ಹೀಗೆ ಕೆಲ ಇಂಟರ್ವ್ಯೂ ನಲ್ಲಿ ಭಾಗಿ ಆಗಿದ್ದ ಅಕ್ಷತಾ ಅವರು ನನಗೆ ಬಿಗ್ ಬಾಸ್ ಇಂದ ಜನಪ್ರಿಯತೆ ಹಾಗೂ ಫೇಮ್ ನೇಮ್ ಹೆಚ್ಚಾಗಿಲ್ಲ. ನಾನು ಮೊದಲೇ ಗುರುತಿಸಿಕೊಂಡಿದ್ದ ಕಾರಣಕ್ಕೆ ಸ್ಪರ್ಧಿ ಆಗಿದ್ದು ಎಂದು ನೇರವಾಗಿ ತಿಳಿಸಿದ್ದಾರೆ. ಇನ್ನೂ ಇವರು ತಮ್ಮ ಮನೆಯಲ್ಲಿ ಟಿವಿ ಇಲ್ಲದ ಕಾರಣ ಬಿಗ್ ಬಾಸ್ ಸೀಸನ್ ಹತ್ತು ನೋಡುತ್ತಿಲ್ಲ ಎಂದಿದ್ದಾರೆ. ( video credit : Kannadanadu Tv )