ಟಿಕೆಟ್ ಟು ಫಿನಾಲೆ ವೀಕ್ ನಲ್ಲಿ ಟಿಕೆಟ್ ಪಡೆದು ಎಲ್ಲರ ಉಬ್ಬೇರಿಸಿದ ಸ್ಪರ್ಧಿ! ಆ ಸ್ಪರ್ಧಿ ಯಾರು ಗೊತ್ತಾ?
ಕನ್ನಡ ಕಿರುತೆರೆಯ ಅತಿ ದೊಡ್ಡ ಮನೋರಂಜನೆ ಎಂದೇ ಹೆಸರು ಮಾಡಿರುವ ಬಿಗ್ ಬಾಸ್ ಸೀಸನ್ ಹತ್ತು ಈಗ ಕೊನೆಯ ಹಂತ ತಲುಪಿದೆ. ಇನ್ನೂ ಈ ಹ್ಯಾಪಿ ಬಿಗ್ ಬಾಸ್ ಹ್ಯಾಪಿ ಆಗಿ ಇರದೆ ಇದ್ದರೂ ಕೊಡ ಕಾಂಪಿಟೇಶನ್ ವಿಚಾರದಲ್ಲಿ ಹೆಚ್ಚಿನ ಸುದ್ದಿ ಮಾಡಿದೆ. ಇನ್ನೂ ಇಷ್ಟೆಲ್ಲ ದಿನಗಳು ಉರುಳಿದರೂ ಕೊಡ ನಾವು ಯಾವ ಸ್ಪರ್ಧಿ ವಿಜೇತ್ ಆಗಬಹುದು ಎನ್ನುವ ಊಹೆ ಕೊಡ ಮಾಡಲಾಗದೆ ಇರುವಂತೆ ಕೊನೆಯ ಹಂತದಲ್ಲಿ ತಲುಪಿರುವ ಎಲ್ಲಾ ಸ್ಪರ್ಧಿಗಳು ಯಾವ ಮಟ್ಟಿಗೆ ಕಾಂಪಿಟೇಶನ್ ನೀಡುತ್ತಾ ಬಂದಿರಬಹುದು ಎಂದು. ಈಗ ಸದ್ಯದಲ್ಲಿ ಈ ವಾರ ಎಲ್ಲರಿಗೂ ಕೊಡ ಮುಖ್ಯವಾಗಿದ್ದು ಈ ವಾರ ಎಲಿಮಿನೇಟ್ ಆಗುವ ಸ್ಪರ್ಧಿ ನಿಜಕ್ಕೂ ಅನ್ ಲಕ್ಕಿ ಎಂದು ಹೇಳಬಹುದು.
ಇನ್ನೂ ಈ ವಾರ ಬಿಗ್ ಬಾಸ್ ನಲ್ಲಿ ಟಿಕೆಟ್ ಟು ಫೈನಲ್ ಎಂದು ಘೋಷಣೆ ಮಾಡಿದ್ದು ಸ್ಪರ್ಧಿಗಳಿಗೆ ಕಾಲ ಕ್ರಮೇಣ ನೀಡುವ ಟಾಸ್ಕ್ ಮೂಲಕ ಈ ಟಾಸ್ಕ್ ನಲ್ಲಿ ವಿಜೇತ್ ಆಗುವ ಸ್ಪರ್ಧಿಗಳು ನೇರವಾಗಿ ಫಿನಾಲೆ ಗೆ ಟಿಕೆಟ್ ಪಡೆದುಕೊಳ್ಳಲಿದ್ದಾರೆ ಎಂದು ಘೋಷಣೆ ಮಾಡಿದೆ. ಹಾಗಾಗಿ ಈಗ ಎಲ್ಲಾ ಸ್ಪರ್ಧಿಗಳು ಕೊಡ ಹೆಚ್ಚಿನ ಚುರುಕು ವಹಿಸಿ ಬಹಳ ಚಾನಾಕ್ಷರಾಗಿ ಆಟವಾಡುತ್ತಾ ಇದ್ದಾರೆ. ಈಗ ನೆನ್ನೇವರೆಗು ನಡೆದ ಹಂತದಲ್ಲಿ ಸಂಗೀತ ಅವರು ಎಲ್ಲರಿಗಿಂತ ಹೆಚ್ಚಿನ ಅಂಕ ಪಡೆದು ಲೀಡ್ ನಲ್ಲಿ ಇದ್ದಾರೆ. ಆದ್ರೆ ಇಂದು ಹೇಳಿರುವ ಪ್ರೋಮೋ ಪ್ರಕಾರ ಸಂಗೀತ ಅವರ ಹಿಂದೆ ಇದ್ದ ಸ್ಪರ್ಧಿ ಆಗಿದ್ದ ಪ್ರತಾಪ್ ಅವರಿಗೆ ಸಿಕ್ಕ ಪವರ್ ಇಂದ ಸಂಗೀತ ಅವರನ್ನು ಆಟದಿಂದ ಹೋರ ಹಾಕುತ್ತಾರೆ.
ಆದ್ರೆ ಮತ್ತೆ ಸಿಕ್ಕ ಅವಕಾಶದಿಂದ ವಿಜೇತರಾಗಿ ಫಿನಾಲೆ ಟಿಕೆಟ್ ಪಡೆದುಕೊಂಡಿದ್ದಾರೆ. ಇನ್ನೂ ಸಂಗೀತ ಅವರ ಧೈರ್ಯಕ್ಕೆ ಈಗಾಗಲೇ ಹೆಚ್ಚಿನ ಅಭಿಮಾನಿಗಳ ಸಂಖ್ಯೆ ಇದೆ. ಇವರ ಪ್ರೋತ್ಸಾಹ ಕೊಡ ಅಷ್ಟೇ ಅಚ್ಚುಕಟ್ಟಾಗಿ ನಡೆಯುತ್ತಿದೆ. ಈಗ ಇವರಿಗೆ ಇರುವ ಅಭಿಮಾನಿಗಳ ಪ್ರಕಾರ ಈ ಬಾರಿ ಒಬ್ಬ ಮಹಿಳಾ ಸ್ಪರ್ಧಿ ವಿಜೇತ ಆಗುವುದಾದರೆ ಅದು ಸಂಗೀತ ಅವರೇ ಆಗುತ್ತಾರೆ ಎಂದು ಎಲ್ಲರೂ ಅಭಿಪ್ರಾಯ ಹೊರಹಾಕುತ್ತಿದ್ದಾರೆ. ಇನ್ನೂ ಈ ವಾರ ಉತ್ತಮ ಎಂದು ಮನೆಯಲ್ಲಿರುವ ಸ್ಪರ್ಧಿಗಳಿಗೆ ಪ್ರತಾಪ್ ಆಯ್ಕೆ ಆಗಿದ್ದರೆ ಕಳಪೆ ಆಗಿ ತುಕಾಲಿ ಸಂತೋಷ ಅವರು ಜೈಲಿಗೆ ಹೋಗಿದ್ದಾರೆ. ಈ ವಾರ ಕೊನೆಯ ಹಂತದಲ್ಲಿ ಲಕ್ ಕೈ ಕೊಟ್ಟು ಯಾರು ದೊಡ್ಡ ಮನೆಯಿಂದ ಹೊರಬರುತ್ತಾರೆ ಎಂದು ನಾವು ಕಾದು ನೋಡಬೇಕಿದೆ .