ಲೀಲಾವತಿ ಕುಟುಂಬದ ಬಗ್ಗೆ ರಹಸ್ಯಗಳನ್ನು ಬಿಚ್ಚಿಟ್ಟ ಬ್ರಹ್ಮಾಂಡ ಗುರೂಜಿ! ಇವ್ರು ಹೇಳೋದು ಏನು ಗೊತ್ತಾ?
ನಮ್ಮ ಸ್ಯಾಂಡಲ್ ವುಡ್ ಗೆ ಕಳೆದ ವಾರ ಆಗಿದ್ದ ದೊಡ್ಡ ನಷ್ಟದ ಬಗ್ಗೆ ನಿಮಗೆ ತಿಳಿದೇ ಇದೇ. ಇನ್ನೂ ನಮ್ಮ ಸ್ಯಾಂಡಲ್ ವುಡ್ ನ ಮೇಲೆ ಬಿದ್ದಿರುವ ಕರಿ ನೆರಳು ಮಾಸಲಿಕ್ಕೆ ಅದೆಷ್ಟು ವಸಂತಗಳನ್ನು ಕಾಯಬೇಕು ತಿಳಿದಿಲ್ಲ. ಕರೋನ ಸಂಧರ್ಭದಲ್ಲಿ ಸ್ಥಗಿತ ವಾಗಿದ್ದ ಈ ಬಣ್ಣದ ರಂಗ ಈ ಸಮಸ್ಯೆ ಎಲ್ಲವನ್ನೂ ಕಳೆದ ಬಳಿಕ ಎಲ್ಲವು ಮೊದಲಿನಂತೆ ಆಗಲಿದೆ ಎನ್ನುವ ನಿರೀಕ್ಷೆಯಲ್ಲಿ ಇದ್ದ ಪ್ರೇಕ್ಷಕರ ವರ್ಗಕ್ಕೆ ಕಲಾವಿದರ ಅನಿರೀಕ್ಷಿತ ಮರಣ ದೊಡ್ಡ ಹೊಡೆತವನ್ನು ಬೀಳಿಸುತ್ತ ಬರುತ್ತಿದೆ. ಪುನೀತ್ ಅವರಿಂದ ಶುರುವಾದ ಈ ಘಟನೆಗಳು ಇನ್ನೂ ಕಳೆದವಾರ ವಯೋ ವೃದ್ದರ ಕಾಯಿಲೆಗೆ ಬಲಿಯಾದ ಹಿರಿಯ ನಟಿ ಲೀಲಾವತಿ ಅವರ ವರೆಗೂ ಆಗಿದೆ.
ಆದರೆ ಸಿನಿಮಾ ರಂಗದಲ್ಲಿ ಎಷ್ಟೊಂದು ಹೆಸರು ಮಾಡಿರುವ ಈ ನಟಿ ತಮ್ಮ ವೈಯುಕ್ತಿಕ ಜೀವನದಲ್ಲಿ ಸಾಕಷ್ಟು ಗೊಂದಲವನ್ನು ಸೃಷ್ಟಿ ಮಾಡಿಕೊಂಡಿದ್ದಾರೆ. ಇವರ ವೈಯುಕ್ತಿಕ ಜೀವನ ಅದೆಷ್ಟೇ ವರ್ಷಗಳು ಕಳೆಯಿತ್ತಿದ್ದರು ಕೊಡ ಯಾವ ಒಂದು ಪ್ರಶ್ನೆಗೂ ಕೊಡ ಉತ್ತರ ತಿಳಿದಿಲ್ಲ. ಇನ್ನೂ ಇವರ ಸಾವಿನ ಬಳಿಕ ಇಂಟರ್ವ್ಯೂ ನಲ್ಲಿ ಭಾಗಿ ಆಗಿದ್ದ ಬ್ರಹ್ಮಾಂಡ ಗುರೂಜಿ ಅವರು ಲೀಲಾವತಿ ಹಾಗೂ ಇವರ ಸ್ನೇಹದ ಬಗ್ಗೆ ತಿಳಿಸಿದ್ದಾರೆ. ಇನ್ನೂ ಇವರ ನಾಗಮಂಗಲ ಅಲ್ಲಿ ಇರುವ ಹೊಸ ಮನೆಗೆ ಒಮ್ಮೆ ಭೇಟಿ ನೀಡಿದ್ದಾಗ ಅವರ ಕೋಣೆಯಲ್ಲಿ ಲೀಲಾವತಿ ಅವರು ರಾಜ್ ಕುಮಾರ್ ಅವರಿಗೆ ಊಟ ಮಾಡಿಸುತ್ತಿದ್ದ ಫೋಟೋ ನೋಡಿ ಎಷ್ಟರ ಮಟ್ಟಿಗೆ ಪ್ರೀತಿ ಮಾಡುತ್ತಿದ್ದರು ಎಂದು ನಾನು ತಿಳಿದುಕೊಂಡೆ ಎಂದು ಹೇಳಿದ್ದಾರೆ.
ಲೀಲಾವತಿ ಅವರು ಸ್ವಲ್ಪ ಮೃದು ಸ್ವಭಾವದ ವ್ಯಕ್ತಿ ಆದರೆ ತಾನು ಹಾಗೂ ತನ್ನದು ಎಂಬ ವಿಚಾರಕ್ಕೆ ಬಂದರೆ ಈಕೆ ಗಟ್ಟಿಗಿತ್ತಿ ಅದಕ್ಕಾಗಿ ತಮ್ಮ ಮಗನನ್ನು ತನ್ನ ಬಳಿಯೇ ಇಟ್ಟುಕೊಂಡು ಬಿಟ್ಟರು. ಅವರನ್ನು ಬಿಕಾಂ ಓದಿಸಿದ್ದರು ಕೊಡ ಅವನಿಗೆ ಪ್ರಪಂಚ ಜ್ಞಾನ ಅಷ್ಟಾಗಿ ಇಲ್ಲ ಎಂದು ಹೇಳಿದರು. ಇವರು ಎಲ್ಲರನ್ನೂ ಪ್ರೀತಿಸಿ ಎಲ್ಲಾರ ಪ್ರೀತಿಗೆ ಪಾತ್ರರಾಗುವ ಸ್ವಭಾವವನ್ನು ಇವರು ಹೊಂದಿದ್ದಾರೆ. ಆದರೆ ತಮ್ಮ ಬಡತನದಿಂದ ಇವರು ಬಂದ ಹಾದಿಯನ್ನು ಎಂದಿಗೂ ಮರೆಯದೆ ಇಂದಿಗೂ ಎಷ್ಟೇ ಆಸ್ತಿ ಬಂದರು ಕೊಡ ತಮ್ಮ ತನವನ್ನು ಬಿಟ್ಟುಕೊಡದೆ ಆಡಂಬರದ ಜೀವನ ಇಲ್ಲದೆ ಬದುಕುವ ಜೀವಗಳು ಎಂದರೆ ಇವರಿಬ್ಬರೂ. ಇನ್ನೂ ಮುಂದೆ ಅಮ್ಮನ ಆಸರೆ ಇಲ್ಲದೆ ಹೇಗೆ ಬದುಕುತ್ತಾರೆ ಎಂಬುದು ದೊಡ್ಡ ಪ್ರಶ್ನೆ ಎಂದು ತಿಳಿಸಿದ್ದಾರೆ.