ಕೇವಲ 29 ರೂಪಾಯಿಗೆ ಸಿಗಲಿದೆ ಕೆಂದ್ರ ಸರಕಾರದ ಭಾರತ್ ಅಕ್ಕಿ..! ಬೆಂಗಳೂರಿನಲ್ಲಿ ಯಾವೆಲ್ಲ ನಗರದಲ್ಲಿ ಸಿಗಲಿದೆ ನೋಡಿ

ಕೇವಲ 29 ರೂಪಾಯಿಗೆ ಸಿಗಲಿದೆ ಕೆಂದ್ರ ಸರಕಾರದ ಭಾರತ್ ಅಕ್ಕಿ..! ಬೆಂಗಳೂರಿನಲ್ಲಿ ಯಾವೆಲ್ಲ ನಗರದಲ್ಲಿ ಸಿಗಲಿದೆ ನೋಡಿ

ಜನಸಾಮಾನ್ಯರು ಈಗಾಗಲೇ ಕೆಲವು ಪದಾರ್ಥಗಳ ಹಾಗೂ ಕೆಲವು ಆಹಾರ ವಸ್ತುಗಳ ಮೇಲಿನ ಬೆಲೆಗೆ ಹಾಗೂ ಬೆಲೆ ಏರಿಕೆಗೆ ತತ್ತರಿಸಿ ಹೋಗಿದ್ದಾರೆ. ಹಳ್ಳಿಗಳಲ್ಲಿ ಒಂದು ರೇಟು ಇದ್ದರೆ ಸಿಟಿಗಳಲ್ಲಿ ಕೂಡ ಒಂದು ರೇಟು ಇರುತ್ತದೆ.. ಈ ಅಕ್ಕಿ, ಗೋಧಿ, ಬೇಳೆ, ಕಡಲೆಬೇಳೆ ಹೀಗೆ ಪ್ರತಿಯೊಂದುಕ್ಕೂ ಕೂಡ ಅಧಿಕ ಬೆಲೆ ಇದ್ದು ದೇಶದಲ್ಲಿ ಕೆಲವರು ಇದರಿಂದ ತತ್ತರಿಸಿ ಹೋಗಿದ್ದಾರೆ ಎನ್ನಲಾಗಿದೆ. ಅಕ್ಕಿ ರೇಟ್ ಸಹ ತುಂಬಾನೇ ಹೆಚ್ಚಾಗುತ್ತಿದೆ. ಜೀರ ರೈಸ್ ನ ಅಕ್ಕಿಗೆ ಒಂದು ಕೆಜಿಗೆ 60 ರೂಪಾಯಿ ದರ ನಿಗದಿ ಮಾಡಲಾಗಿದೆ. ಹಾಗಾಗಿ ಕೇಂದ್ರ ಸರ್ಕಾರ ಜನರ ಈ ಸಂಕಷ್ಟ ನೋಡಿ ಕೇವಲ 29 ರೂಪಾಯಿಗೆ ಒಂದು ಕೆಜಿ ಅಕ್ಕಿಯನ್ನು ನೀಡಲು ಸಿದ್ದವಾಗಿದ್ದು ಇದು ಖುಷಿಯ ವಿಚಾರ.

ಈ ಯೋಜನೆಯು ಬೆಂಗಳೂರಿನಲ್ಲಿ ನಡೆಯಲಿದ್ದು ನಾಳೆಯಿಂದ ಇದಕ್ಕೆ ಚಾಲನೆ ಸಿಗಲಿದೆ ಎಂದು ಇದೀಗ ತಿಳಿದುಬಂದಿದೆ. ಹೌದು ಎನ್‌ಸಿಸಿಎಫ್ ಅವರ ಮೂಲಕ ಈ ಅಕ್ಕಿಯನ್ನು ಪ್ರತಿ ಮನೆ ಮನೆಗೂ ವ್ಯಾನ್ ಮೂಲಕ ವಿತರಣೆ ಮಾಡಲಾಗುತ್ತದೆ. ಪ್ರತಿ ಕೆಜಿಗೆ 29 ನೀಡಿ ಈ ಅಕ್ಕಿಯನ್ನು ಕೊಂಡುಕೊಳ್ಳಬೇಕು..ಹೌದು ಎನ್‌ಸಿಸಿಎಫ್ ಅವರು ಹೇಳಿರುವ ಪ್ರಕಾರ ಈ ಮುಂಚೆ ಗೋಧಿ ಹಿಟ್ಟನ್ನು ಇದೆ ಎನ್ ಸಿಸಿ ಎಫ್ ಮೂಲಕ ಮಾರಾಟ ಮಾಡಲಾಗುತ್ತಿದ್ದು ಕೇಜಿಗೆ 27.5 ರೂಪಾಯಿ ಪ್ರತಿ ಕೆಜಿಗೆ ನಿಗದಿ ಮಾಡಲಾಗಿತ್ತಂತೆ. ಜೊತೆಗೆ ಕಡಲೆ ಬೆಳೆಗೆ 60 ರೂಪಾಯಿ ಒಂದು ಕೆಜಿಗೆ ನಿಗದಿ ಮಾಡಲಾಗಿತ್ತು. 

ಇದೀಗ ಭಾರತ್ ಅಕ್ಕಿಯನ್ನು ಸಹ ಮಾರಾಟ ಮಾಡಲು ಮುಂದಾಗಿದ್ದು ಕೇವಲ ಪ್ರತಿ ಕೆಜಿಗೆ 29 ರೂಪಾಯಿ ದರ ನಿಗದಿ ಮಾಡಿದ್ದಾರೆ..ನಾಳೆ ಬೆಂಗಳೂರಿನಲ್ಲಿ ಇದು ಚಾಲನೆಗೆ ಬರಲಿದ್ದು, ಯಶವಂತಪುರದಲ್ಲಿ ಇದರ ಮುಖ್ಯ ಬ್ರಾಂಚ್ ತೆರೆಯಲಾಗಿದೆ. ಈ ಅಕ್ಕಿಯ ಹೆಸರು ಭಾರತ್ ಅಕ್ಕಿ..ಭಾರತೀಯ ರಾಷ್ಟ್ರೀಯ ಗ್ರಾಹಕರ ಸಹಕಾರ ಮಹಾ ಸಂಘ ನಿಯಮಿತ ಬೆಂಗಳೂರು ಶಾಖೆ
ಮೂಲಕ ಇದು ಬೆಂಗಳೂರಿನಲ್ಲಿ ಸಿಗಲಿದೆ. 

ಹಾಗೆ ಬಸವೇಶ್ವರ ನಗರ, ಮಹಾಲಕ್ಷ್ಮೀ ಲೆಯೌಟ್, ದಿಪಾಂಜಲಿ ನಗರ, ಯಶವಂತಪುರ ಇದರ ಮೇನ್ ಬ್ರಾಂಚ್ ಆಗಿದ್ದು, ಗಾಯತ್ರಿ ನಗರ, ಹಾಗೆ ನಾಗಸಂದ್ರ, ಅಬ್ಬಿಗೇರಿ, ಚಿಕ್ಕ ಬಾಣಾವರ, ಮಾಗಡಿ ರೋಡ್,  ಕೊಡಿಗೇಹಳ್ಳಿ, ತನಿಸಂದ್ರ, ಹೆಸರಘಟ್ಟ , ಯಲಹಂಕ ಶೇಷಾದ್ರಿಪುರಂ, ಜಕ್ಕೂರು, ಸಂಜಯ ನಗರ, ಹಾಗೂ ಬನಶಂಕರಿ ಸೇರಿದಂತೆ ಬೆಂಗಳೂರಿನ ಒಟ್ಟು 50 ಏರಿಯಾಗಳಲ್ಲಿ ಈ ಭಾರತ್ ಅಕ್ಕಿ ತರಬೇಕು ಎಂದು ಕೇಂದ್ರ ಸರಕಾರ ಚಿಂತನೆ ಮಾಡಿದ್ಡು ನಾಳೆಯಿಂದ ಇದು ಲಭಿಸಲಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಧನ್ಯವಾದ...