ಇದು ನಮ್ಮ ದೇಶ ಅಂದ್ರೆ ನಂಬುತ್ತೀರಾ? ಇದುವೇ ಗೋವಾ

ಇದು ನಮ್ಮ ದೇಶ ಅಂದ್ರೆ ನಂಬುತ್ತೀರಾ? ಇದುವೇ ಗೋವಾ

ಬೀಚ್ ನೋಡಬೇಕು ಎಂದವರಿಗೆ ತಕ್ಷಣ ನೆನಪಾಗುವ ಹೆಸರು ಗೋವ ಎಂದು ಹೇಳಬಹುದು. ಗೋವಾ ಏಕೆ ವಿದೇಶಿ ಹಾಗೂ ದೇಶಿ ಪ್ರವಾಸಿಗರಿಗೆ ಹೆಚ್ಚು ಆಕರ್ಷಕವಾಗಿದೆ ಎಂಬುದಕ್ಕೆ ಹಲವಾರು ಕಾರಣಗಳಿವೆ. ಗೋವಾದ ಕಡಲತೀರಗಳು ತುಂಬಾ ಪ್ರಸಿದ್ಧ. ಬಾಗಾ, ಕಾಲಂಗುಟ್, ಅಂಜುನಾ, ಮತ್ತು ಪಲೋಲೆಂ ಮುಂತಾದ ಕಡಲತೀರಗಳು ಪ್ರವಾಸಿಗರಿಗೆ ಆಕರ್ಷಣೆಯ ಕೇಂದ್ರಗಳು ಎಂದು ಹೇಳಬಹುದು. ಇನ್ನೂ ಗೋವಾದಲ್ಲಿ ಪೋರ್ಚುಗೀಸ್ ಮತ್ತು ಭಾರತೀಯ ಸಂಸ್ಕೃತಿಯ ಸಂಯೋಜನೆಯು ಕಣ್ಮನ ಸೆಳೆಯುತ್ತದೆ. ಇಲ್ಲಿಯ ಚರ್ಚುಗಳು, ದೇಗುಲುಗಳು ಮತ್ತು ವಾರ್ಷಿಕ ಜಾತ್ರೆಗಳು ಗಮನಾರ್ಹ. 

ಗೋವಾದ ಆಹಾರ ವೈವಿಧ್ಯತೆ ಪ್ರವಾಸಿಗರನ್ನು ಸೆಳೆಯುತ್ತದೆ. ಸಮುದ್ರ ಆಹಾರಗಳು, ಫೆನಿ (ಸ್ಥಳೀಯ ಮದ್ಯ), ಮತ್ತು ಬಗೆಬಗೆಯ ಸ್ಥಳೀಯ ಖಾದ್ಯಗಳು ಪ್ರಸಿದ್ಧ.ಅಲ್ಲಿಯ ಗೋವಾದ ರಾತ್ರಿಯ ಜೀವನದ ಸದ್ದಿಲ್ಲದ ಸಂಜೆಯ ಅಂದ ಜೊತೆಗೆ ಬಾರ್, ಕ್ಲಬ್, ಬೀಚ್ ಪಾರ್ಟಿಗಳು ಪ್ರವಾಸಿಗರಿಗೆ ಆಕರ್ಷಕವಾಗಿರುತ್ತವೆ. ಗೋವಾದಲ್ಲಿ ಹಲವು ಪುರಾತನ ಚರ್ಚುಗಳು, ಕೋಟೆಗಳು ಮತ್ತು ಇತಿಹಾಸ ಪ್ರಸಿದ್ಧ ಸ್ಥಳಗಳಿವೆ. ಗೋಪುರಗಳು, ಶೃಂಗಾರಿಕ ವಾಸ್ತುಶಿಲ್ಪ ಪ್ರವಾಸಿಗರಿಗೆ ವಿಶಿಷ್ಟ ಅನುಭವ ನೀಡುತ್ತವೆ. ಈ ಎಲ್ಲಾ ಅಂಶಗಳು ಗೋವಾವನ್ನು ಪ್ರವಾಸಿಗರ ಸ್ವರ್ಗವನ್ನಾಗಿ ಮಾಡುತ್ತವೆ. 

ಗೋವಾ ಮತ್ತು ಕರ್ನಾಟಕದ ಪ್ರಮುಖ ಊರುಗಳ ನಡುವಿನ ದೂರವನ್ನು ನಾವು ಅಂದಾಜಿನಲ್ಲಿ ನೋಡುವುದರೆ. ಬೆಂಗಳೂರಿನಿಂದಾ ಸುಮಾರು 560 ಕಿಮೀ. ನ್ಯಾಷನಲ್ ಹೈವೇ 48 ಮೂಲಕ ಬಸ್, ಕಾರು ಅಥವಾ ರೈಲು ಪ್ರಯಾಣ. ಮೈಸೂರು ಇಂದ  ಸುಮಾರು 640 ಕಿಮೀ. ನ್ಯಾಷನಲ್ ಹೈವೇ 275 ಮೂಲಕ ಬಸ್ ಅಥವಾ ಕಾರು. ಮಂಗಳೂರು ಇಂದಾ  ಸುಮಾರು 360 ಕಿಮೀ. ನ್ಯಾಷನಲ್ ಹೈವೇ 66 ಮೂಲಕ ಬಸ್, ಕಾರು ಅಥವಾ ರೈಲು. ಹುಬ್ಬಳ್ಳಿ ಇಂದ ಸುಮಾರು 155 ಕಿಮೀ. ನ್ಯಾಷನಲ್ ಹೈವೇ 67 ಮೂಲಕ ಬಸ್, ಕಾರು ಅಥವಾ ರೈಲು.
ಬೆಳಗಾವಿ ಇಂದಸುಮಾರು 100 ಕಿಮೀ. ನ್ಯಾಷನಲ್ ಹೈವೇ 748A ಮೂಲಕ ಬಸ್ ಅಥವಾ ಕಾರು.ಧಾರವಾಡ ಸುಮಾರು 155 ಕಿಮೀ. ಬಳ್ಳಾರಿ 
ಇಂದ ಸುಮಾರು 300 ಕಿಮೀ. ಶಿವಮೊಗ್ಗ ಸುಮಾರು 320 ಕಿಮೀ. ದಾವಣಗೆರೆ ಸುಮಾರು 310 ಕಿಮೀ. ಉಡುಪಿ ಕಡೆಯಿಂದ ಸುಮಾರು 310 ಕಿಮೀ.

 ಇನ್ನೂ ಗೋವಾದಲ್ಲಿ ಬಿಚ್ ನೋಡುವುದಾದರೆ;
ಗೋವಾದ ಹತ್ತು ಪ್ರಸಿದ್ಧ ಕಡಲತೀರಗಳು ಮತ್ತು ಅವುಗಳ ವಿಶೇಷತೆಗಳನ್ನು ಕುರಿತು:

1. ಬಾಗಾ ಬೀಚ್
2.ಕಾಲಂಗುಟ್ ಬೀಚ್.
3. ಅಂಜುನಾ ಬೀಚ್.
 4. ಪಲೋಲೆಂ ಬೀಚ್.
 5. ಮೋಜಿಮ್ ಬೀಚ್.
6. ಅರವಲ್ ಬೀಚ್.
7. ವಾಗಟೋರ್ ಬೀಚ್.
 8. ಅಗೋಂಡಾ ಬೀಚ್.
 9. ಕೊಲ್ವಾ ಬೀಚ್.
 10.ಬೆನಾೂಲಿಂ ಬೀಚ್.
    
ಈ ಕಡಲತೀರಗಳು ಗೋವಾದ ಸೊಬಗು ಹಾಗೂ ವೈವಿಧ್ಯತೆಯ ಮಾದರಿಯಾಗಿವೆ, ಮತ್ತು ಪ್ರವಾಸಿಗರಿಗೆ ವಿಭಿನ್ನ ಅನುಭವಗಳನ್ನು ನೀಡುತ್ತವೆ.

( video credit :FOCUS )