ಬೆಂಗಳೂರಿನಲ್ಲಿ ನೀರಿನ ಪೂರೈಕೆಗೆ ಬೆಲೆ ನಿಗದಿ ಮಾಡಿದ ಸರ್ಕಾರ! ಲೀಟರ್ ಗೆ ಎಷ್ಟು ಗೊತ್ತಾ?

ಬೆಂಗಳೂರಿನಲ್ಲಿ ನೀರಿನ ಪೂರೈಕೆಗೆ ಬೆಲೆ ನಿಗದಿ ಮಾಡಿದ ಸರ್ಕಾರ! ಲೀಟರ್ ಗೆ ಎಷ್ಟು ಗೊತ್ತಾ?

ಇಂದಿನ ಪರಿಸ್ಥಿತಿಯಲ್ಲಿ ನೀರಿನ ಅಭಾವ ಹೆಚ್ಚಾಗುತ್ತಲೇ ಇದೇ ಎನ್ನಬಹುದು. ಈ ತಾಪಮಾನ ಹೆಚ್ಚಾಗಿರುವುದನ್ನು ನಾವು ನೋಡಿದ್ರೆ ಈ ಪರಿಸ್ಥಿತಿ ಮುಂದುವರೆದರೆ ನಮ್ಮ ಮನೆಗೆ ನೀರು ಕೊಡ ಚಿನ್ನದಂತೆ ಆಗುವ ಸಮಯ ಬಂದರು ಬರಬಹುದು ಎಂದು ಜನರು ಹೇಳುತ್ತಾ ಇದ್ದಾರೆ. ಇನ್ನೂ ಸಾಕಷ್ಟು ರಾಜ್ಯಗಳಲ್ಲಿ ನೀರಿನ ಅಭಾವ ಹೆಚ್ಚಾಗಿದೆ. ಕರ್ನಾಟಕದ ಕಾಶ್ಮೀರ ಎನ್ನುವ ಕೊಡಗಿನಲ್ಲಿ ಕೊಡ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು ಕ್ರಮೇಣವಾಗಿ ಕಾವೇರಿ ತನ್ನ ನೀರಿನ ಪ್ರಮಾಣವನ್ನು ಕುಸಿಯುತ್ತಾ ಬರುತ್ತಿದೆ. ಈಗ ಬೆಂಗಳೂರಿನಲ್ಲಿ ನೀರಿನ ಪೂರೈಕೆಗು ಕೊಡ ಈಗ ಹಣವನ್ನು ನಿಗದಿತ ಮಾಡಿದೆ. ಇನ್ನೂ ಎಷ್ಟು ಲೀಟರ್ ಗೆ ಎಷ್ಟು ಬೆಲೆ ನಿಗದಿತ ಮಾಡಿದ್ದಾರೆ ಎಂದು ನೋಡೋಣ ಬನ್ನಿ.

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬರ ಪರಸ್ತಿಯಲ್ಲಿ ಜನರ ಒಳಿತಿಗಾಗಿ ಕುಡಿಯುವ ನೀರಿನ ಬಳಕೆಯ ಸರಬರಾಜಿಗೆ ಸರ್ಕಾರ ಈಗ ನಿಗದಿತ ಬೆಲೆಯನ್ನು ಅಳವಡಿಸಿದೆ. ಇನ್ನೂ ಸರ್ಕಾರದ ಆದೇಶದ ಪ್ರಕಾರ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಪೀಡಿತ ಪ್ರದೇಶಗಳಿಗೆ ನೀರು ಒದಗಿಸಲು 200 ಟ್ಯಾಂಕರ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಬೆಂಗಳೂರು ನಗರದ 16,781 ಬೋರ್‌ವೆಲ್‌ಗಳ ಪೈಕಿ 7,784 ಮಾತ್ರ ಪ್ರಸ್ತುತ ಕಾರ್ಯ ನಿರ್ವಹಿಸಲಾಗುತ್ತಿದೆ. ಹಾಗೆಯೇ 6,997 ಬತ್ತಿ ಹೋಗಿವೆ ಎಂದು ವರದಿ ನೀಡಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸಲು, BBMP ಮತ್ತು BWSSB ಹೊಸ ನೀರಿನ ಮೂಲಗಳನ್ನು ಅನ್ವೇಷಿಸಲು ನಿರ್ಧಾರ ಮಾಡಿದೆ. ಈಗ ಕಾಂಗ್ರೆಸ್ ಸರ್ಕಾರದ ಆದೇಶವು ಉದ್ಯಾನನಗರಿಯ ನೀರಿನ ಕೊರತೆಯಿಂದ ಎದುರಾಗುವ ಸವಾಲುಗಳೊಂದಿಗೆ ಹೋರಾಡುವ ನಿವಾಸಿಗಳ ಹೊರೆಯನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದೆ.

 

ಬೆಲೆ ಲೀಟರ್ ದೂರ
600 ರೂ 6000 ಲೀಟರ್ 5 ಕಿಮೀ ಒಳಗೆ.
750 ರೂ  6000 ಲೀಟರ್ 5ಕ್ಕಿಂತ ಮೇಲ್ಪಟ್ಟು ಮತ್ತು 10 ಕಿಮೀಗಿಂತ ಕಡಿಮೆ.
700 ರೂ 8000 ಲೀಟರ್ 5 ಕಿಮೀ ಒಳಗೆ.
850 ರೂ  8000 ಲೀಟರ್ 5 ಕಿಮೀಗಿಂತ ಹೆಚ್ಚು ಮತ್ತು 10 ಕಿಮೀಗಿಂತ ಕಡಿಮೆ
1000 ರೂ 12000 ಲೀಟರ್ 5 ಕಿಮೀ ಒಳಗೆ.
1200 ರೂ 12000 ಲೀಟರ್ 5ಕ್ಕಿಂತ ಮೇಲ್ಪಟ್ಟು ಮತ್ತು 10 ಕಿಮೀಗಿಂತ ಕಡಿಮೆ.