2023 ಕೇವಲ ಟ್ರೈಲರ್ ಅಷ್ಟೇ..! 2024 ರ ಭಯಾನಕ ಭವಿಷ್ಯ ಹೀಗಿರಲಿದೆ ಎಂದ ಬಾಬಾ ವಂಗಾ..!
ಬಾಬಾ ವಂಗಾ ಎಂದೇ ಖ್ಯಾತಿ ಪಡೆದಿರುವ ಇವರು ಸಾಕಷ್ಟು ಭವಿಷ್ಯ ವಾಣಿ ನುಡಿದು ತುಂಬಾನೇ ಪ್ರಸಿದ್ಧಿ ಪಡೆದಿದ್ದಾರೆ..15ನೇ ಶತಮಾನದ ನಾಸ್ಟ್ರಡಮಸ್ ಎಂದು ಇವರನ್ನು ಕರೆಯಲಾಗುತ್ತದೆ.. ಅಷ್ಟರಮಟ್ಟಿಗೆ ಸುಮಾರು ವರ್ಷಗಳ ಕಾಲ ಜಾಗತಿಕ ಮಟ್ಟದಲ್ಲಿ, ಈ ಭೂಮಿಯ ಮೇಲೆ, ಹಾಗೆ ರಾಷ್ಟ್ರ ರಾಷ್ಟ್ರಮಟ್ಟದಲ್ಲಿ ಏನೆಲ್ಲಾ ನಡೆಯಲಿದೆ, ಯಾವ ಯಾವ ದೊಡ್ಡ ದೊಡ್ಡ ಬಿರುಗಾಳಿ ಬರಲಿದ್ದು, ಹಾಗೇನೇ ಗಲಾಟೆ ಯುದ್ಧ ಕಾರ್ಯರೂಪಕ್ಕೆ ಬರಲಿವೆ ಎನ್ನುವ ಭವಿಷ್ಯವನ್ನು ಬಾಬಾ ಅವರು ಈಗಾಗಲೇ ನುಡಿದು ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಇವರು ಹುಟ್ಟಿದ್ದು ಬಲ್ಗೆರಿಯಾದಲ್ಲಿ, ಇವರನ್ನ ಬಲ್ಗೇರಿಯಾ ಮಹಿಳೆ ಎಂದು ಕರೆಯಲಾಗುತ್ತದೆ. ಇವರು ಸುಮಾರು 85 ವರ್ಷಗಳ ಕಾಲ ಬದುಕಿದ ಈ ಬಾಬಾ ವಂಗ ಎನ್ನುವ ಮಹಿಳೆ 1911 ರಲ್ಲಿ ಹುಟ್ಟುತ್ತಾರೆ. ಹಾಗೇನೇ 1996 ರಲ್ಲಿ ಸಾವನ್ನಪ್ಪಿದ್ದಾರೆ. ಹುಟ್ಟಿದ ಕೆಲವು ವರ್ಷಗಳಲ್ಲಿಯೇ ತಮ್ಮ ದೃಷ್ಟಿಯನ್ನು ಕೂಡ ಇವರು ಕಳೆದುಕೊಂಡರು. ಹಾಗೆ ಅತಿಂದ್ರಿಯ ಮಹಿಳೆ ಆಗಿದ್ದಾರೆ ಬಾಬಾ. ಆದರೆ ಇನ್ನೂ ಮುಂದೆ ಸಾಕಷ್ಟು ವರ್ಷಗಳ ಕಾಲ ಈ ಜಗತ್ತು ಹೇಗೆಲ್ಲಾ ಇರುತ್ತದೆ ಎಂದು ತಮ್ಮ ಭವಿಷ್ಯವಾಣಿ ನುಡಿದು ಎಲ್ಲರಿಗೂ ಅಚ್ಚರಿ ಮೂಡಿಸಿದ್ದು ಇದೆ. 2023 ಕರೋನ ಹಂತದಲ್ಲಿ ಇವರು ಹೇಳಿದ್ದ ಭವಿಷ್ಯ ಸಹ ನಿಜವಾಗಿದೆ. ಜಾಗತಿಕ ಮಟ್ಟದಲ್ಲಿ ಏನೆಲ್ಲಾ ಬದಲಾವಣೆ ಆಯಿತು, ಭೂಮಂಡಲದಲ್ಲಿ ಕೆಲವು ಕಡೆ ಅತೀವ ಮಳೆ ಅಕಾಲಕ್ಕೆ ಬಂದು ಯಾವ ರೀತಿ ತೊಂದರೆ ನೀಡಿತು,
ಜೊತೆಗೆ ಇತ್ತೀಚೆಗೆ ಹಮಾಸ್ ಮತ್ತು ಇಸ್ರೇಲ್ ಯುದ್ಧದ ಕುರಿತಾಗಿ ಭವಿಷ್ಯವನ್ನು ನುಡಿದಿದ್ದರು ಎಂದು ತಿಳಿದುಬಂದಿದೆ.
2023 ರಲ್ಲಿ ಕಂಡುಬಂದಂತಹ ಕೆಲವು ಘಟನೆಗಳು ಕೇವಲ ಟ್ರೈಲರ್ ಆಗಿದ್ದು, 2024ರಲ್ಲಿ ಪಕ್ಕದ ರಾಷ್ಟ್ರ ಚೀನಾ ಪವರ್ಫುಲ್ ರಾಷ್ಟ್ರ ಆಗಿ ಹೊರಹೊಮ್ಮಲಿದೆ ಎಂದಿದ್ದಾರಂತೆ. ಜೊತೆಗೆ ಜಾಗತಿಕ ಮಟ್ಟದಲ್ಲಿ ಕಲಹ, ಭೂಮಂಡಲದ ಸುತ್ತಲಲ್ಲಿ ಸಾಕಷ್ಟು ಬದಲಾವಣೆಗಳು ಕಾಣಲಿವೆ, ಅತಿವವಾದ ಬಿಸಿಲು ಬರಲಿದೆ, ತಾಪಮಾನ ಬಿಸಿಲು ಇದ್ದ ಜಾಗಗಳು ತಂಪಾಗಲಿವೆ. ತಂಪು ಇರುವ ಪ್ರದೇಶಗಳಲ್ಲಿ ತಾಪಮಾನ ಹೆಚ್ಚಲಿದೆಯಂತೆ. 2024ಕ್ಕೆ ಸಾಕಷ್ಟು ಗಂಡಾಂತರಗಳು ಸಹ ಎದುರಾಗಲಿದ್ದು, ಭೂಕಂಪನ ಕೂಡ ಆಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ..
ಇನ್ನು ಯಾವ ಯಾವ ಭವಿಷ್ಯಗಳು 2024ಕ್ಕೆ ತೊಂದರೆಗಳಾಗಿ ಎದುರಾಗಲಿವೆ ಎಂದು ಈ ವಿಡಿಯೋ ನೋಡಿ ತಿಳಿಯಿರಿ. ಬಾಬಾ ವಂಗ ಅವರು ನುಡಿದಿರುವ ಈ ಭವಿಷ್ಯವಾಣಿ ಏನು ಎಂಬುದಾಗಿ ತಿಳಿಯಿರಿ. ಮತ್ತು ವಿಡಿಯೋವನ್ನು ಶೇರ್ ಮಾಡಿ ಧನ್ಯವಾದಗಳು... ( video credit :digital Book ಕನ್ನಡ )