ಈ ನಟಿ ರೋಡಿಗೆ ಬಂದ ತಕ್ಷಣ ಸಾಲಾಗಿ ನಿಂತ ಪಡ್ಡೆ ಹುಡುಗರು; ವೈರಲ್ ವಿಡಿಯೋ
ಅನ್ವೇಶಿ ಜೈನ್ ಅವರ ಬೋಲ್ಡ್ ಲುಕ್‌ಗಳು ಬಗ್ಗೆ ಆಗ್ಗಾಗ್ಗೆ ಸಾಕಷ್ಟು ಚರ್ಚೆ ಆಗುತ್ತಿರುತ್ತವೆ. ಇಂತಹ ನಟಿ ಇದೀಗ ತೆಲುಗಿನ ನಟ ರವಿತೇಜ ಅಭಿನಯದ ರಾಮರಾವ್ ಆನ್ ಡ್ಯೂಟಿ ಚಿತ್ರದ ಐಟಂ ಸಾಂಗ್ ಮೂಲಕ ತೆಲುಗಿಗೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಮಾಡೆಲಿಂಗ್ ಉದ್ಯಮವನ್ನು ಆರಿಸಿಕೊಂಡ ಅನ್ವೇಶಿ ಜೈನ್, ನಂತರದಲ್ಲಿ ರೂಪದರ್ಶಿಯಾಗಿ ಗುರುತಿಸಿಕೊಂಡರು. ಬಳಿಕ ಹಲವು ಜಾಹೀರಾತುಗಳಲ್ಲ ಸಹ ಕಾಣಿಸಿಕೊಂಡಿದ್ದಾರೆ.ರೂಪದರ್ಶಿಯಾಗಿ ಕಾಣಿಸಿಕೊಂಡ ನಂತರದಲ್ಲಿ ಟಿವಿ ಅಲ್ಲಿ ಹೆಚ್ಚಿನ ಅವಕಾಶಗಳು ಬರಲಾರಂಭಿಸಿದವು.
ಹೀಗಾಗಿ ಅನ್ವೇಶಿ ಜೈನ್ ಸಾವಿರಕ್ಕೂ ಹೆಚ್ಚು ಟಿವಿ, ಸ್ಟೇಜ್ ಶೋ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಿಗೆ ಆ್ಯಂಕರ್ ಆಗಿ ಕಾರ್ಯ ನಿರ್ವಹಿಸಿದರು.ಕಾಲೇಜು ದಿನಗಳಲ್ಲಿ ಅನ್ವೇಶಿ ಜೈನ್ ತುಂಬಾ ದಪ್ಪ ಇದ್ದರಂತೆ. ಆದರೆ ಬಳಿಕ ತಮ್ಮ ಜಿಮ್, ಡಯೇಟ್ ಮೂಲಕ ದೇಹದ ಸೌಂದರ್ಯವನ್ನು ಹೆಚ್ಚಿಸಿಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ. ಇದೀಗ ಈ ಅವರ ಹಾಟ್ ಬ್ಯೂಟಿ ಎಲ್ಲಡೆ ಹೆಚ್ಚು ಮನೆ ಮಾತಾಗಿದೆ.
ಅಲ್ಲದೇ ವೆಬ್ ಸೀರೀಸ್ ನಲ್ಲಿ ಹಾಟ್ ಪೋಸ್ ಗಳ ಮೂಲಕ ಚರ್ಚೆಯಲ್ಲಿದ್ದಾರೆ.ಅನ್ವೇಶಿ ಜೈನ್ ಎಂಬ ಯೂಟ್ಯೂಬ್ ಚಾನೆಲ್ ಆರಂಭಿಸಿ ಹಲವು ವಿಡಿಯೋಗಳನ್ನು ಅಪ್ಲೋಡ್ಮಾಡುತ್ತಿರುತ್ತಾರೆ. ಇದರಲ್ಲಿ ಅವರು ಸಂಬಂಧಗಳ ಬಗ್ಗೆ ಹೆಚ್ಚು ಮಾತನಾಡುತ್ತಾರೆ. ಅನ್ವೇಶಿ ಅವರು ಪ್ರೇರಕ ಭಾಷಣಕಾರರಾಗಿಯೂ ಬಹಳ ಪ್ರಸಿದ್ಧರಾಗಿದ್ದಾರೆ.2018 ರಲ್ಲಿ, ಅವರು ‘ಗಾಂಧಿ ಬಾತ್ 2’ ವೆಬ್ ಸರಣಿಯೊಂದಿಗೆ ವೆಬ್ ಜಗತ್ತನ್ನು ಪ್ರವೇಶಿಸಿದರು. ಆ ನಂತರ ಗುಜರಾತಿ ಸಿನಿಮಾದಲ್ಲಿ ನಟಿಸಿದ್ದರು. ಇತ್ತೀಚೆಗಷ್ಟೇ ರವಿತೇಜ ಅಭಿನಯದ ‘ರಾಮರಾವ್ ಆನ್ ಡ್ಯೂಟಿ’ ಸಿನಿಮಾದ ಐಟಂ ಸಾಂಗ್ಗೆ ಸೊಂಟ ಬಳಕಿಸಿದ್ದಾರೆ. ಈಗಾಗಲೇ ಈ ಹಾಡಿನ ಕೆಲ ತುಣುಕುಗಳು ರಿಲೀಸ್ ಆಗಿದ್ದು ಎಲ್ಲಡೆ ಸಖತ್ ವೈರಲ್ ಆಗುತ್ತಿದೆ.