ಅಪರ್ಣಾ ಅವರ ತಿಂಗಳ ಕಾರ್ಯ ನೀರು ತರಿಸುವಂತೆ ಇತ್ತು !! ವೀಡಿಯೊ ನೋಡಿ

ಅಪರ್ಣಾ ಅವರ ತಿಂಗಳ ಕಾರ್ಯ ನೀರು ತರಿಸುವಂತೆ ಇತ್ತು !! ವೀಡಿಯೊ ನೋಡಿ

ಕನ್ನಡ ದೂರದರ್ಶನದ ಪ್ರಮುಖ ನಿರೂಪಕಿ ಮತ್ತು ನಟಿ ಆಗಿ ನಮ್ಮ ಚಂದನವನದಲ್ಲಿ ಗುರುತಿಸಿಕೊಂಡಿದ್ದ  ಅಪರ್ಣಾ ಅವರು ಕರ್ನಾಟಕದ ಬೆಂಗಳೂರಿನಲ್ಲಿ ಜನಿಸಿದರು.  ಅವರು 1993 ರಲ್ಲಿ ಆಲ್ ಇಂಡಿಯಾ ರೇಡಿಯೊದಲ್ಲಿ ರೇಡಿಯೋ ಜಾಕಿಯಾಗಿ ತಮ್ಮ ವೃತ್ತಿಯನ್ನು ಶುರುಮಾಡಿದವರು. ಇನ್ನೂ ರೇಡಿಯೋ ಜಾಕಿ ಆಗಿ ಮನರಂಜನೆಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಕ್ರಮೇಣ ದೊಡ್ಡ ಮಟ್ಟದ ಯಶಸ್ಸನ್ನು ಕೊಡ ಪಡೆದುಕೊಂಡರು. ಹಾಗೆಯೇ ಅವರ ಯಶಸ್ಸಿನ ಹಾದಿ ಅತಿ ಶೀಘ್ರದಲ್ಲೇ ದೂರದರ್ಶನಕ್ಕೆ ಪರಿವರ್ತನೆಗೊಂಡರು, 1990 ರಿಂದ ಡಿಡಿ ಚಂದನದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು. ಅವರು 1985 ರ ಚಲನಚಿತ್ರ "ಮಸಣದ ಹೂವು" ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿದರು. 

ಇನ್ನು ಚಂದನ ಟೀವಿ ನಿರೂಪಕಿ ಅಪರ್ಣಾ ಅವರು 1989ರಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಅವರು ಕನ್ನಡದ ದೂರದರ್ಶನದಲ್ಲಿ ಬಹುಮುಖ ಪ್ರತಿಭೆ ಎಂದು ಗುರುತಿಸಿಕೊಂಡಿದ್ದಾರೆ. ಅವರ ವೃತ್ತಿಜೀವನದ ಅವಧಿಯಲ್ಲಿ, ಅವರು ಟಿವಿ ನಿರೂಪಣೆ, ರೇಡಿಯೋ ಜಾಕಿ, ಮತ್ತು ನಟನೆಯಲ್ಲಿಯೂ ತಮ್ಮದೇ ಆದ ಸ್ಥಳವನ್ನು ಹೊಂದಿದ್ದಾರೆ. ವ್ಯಕ್ತಿಗತವಾಗಿ, ಅವರು ಬಹಳ ವಿಭಿನ್ನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ, ಸಂಗೀತ ಕೇಳುವುದು, ಓದುವುದು, ಮತ್ತು ಮನೆಯಲ್ಲಿ ಕೆಲಸ ಮಾಡುವುದು ಅವರ ಹವ್ಯಾಸಗಳಲ್ಲಿ ಸೇರಿವೆ. ಕೊಂಚ ಬ್ರೇಕ್ ತೆಗೆದುಕೊಂಡ ಈಕೆ ಕಲರ್ಸ್ ಕನ್ನಡ ಮಜಾ ಟಾಕೀಸ್ ಮೂಲಕ ಬಣ್ಣದ ರಂಗಕ್ಕೆ ರಿ ಎಂಟ್ರಿ ಕೊಟ್ಟರು.  

ಕನ್ನಡದಲ್ಲಿ ಬಹಳ ಸ್ಪಷ್ಟವಾಗಿ ಮಾತನಾಡುತ್ತಿದ್ದ ಈಕೆಗೆ ಸಾಕಷ್ಟು ಸನ್ಮಾನ ಪುರಸ್ಕಾರಗಳು ಕೊಡ ಸಿಕ್ಕಿವೆ. ಆದ್ರೆ ತೀವ್ರ ಅನಾರೋಗ್ಯದ ಸಮಸ್ಯೆಯಿಂದ ಇಂದು ಕೊನೆ ಉಸಿರು ಎಳೆದಿದ್ದು ಈಕೆ ಇನ್ನೂ ಮುಂದೆ ಕೇವಲ ನೆನಪು ಮಾತ್ರ ಎಂದು ಹೇಳಲು ಬಹಳ ದುಃಖ ಎನ್ನಿಸುತ್ತಿದೆ. ಇನ್ನು ನೆನ್ನೆ ಅಪರ್ಣಾ ಅವರ ತಿಂಗಳ ಕಾರ್ಯವನ್ನು ಏರ್ಪಡಿಸಲಾಗಿತ್ತು. ಇವರ ತಿಂಗಳ ಕಾರ್ಯವನ್ನು ನೋಡಿದಾಗ ಎಂಥವರಿಗೂ ಕೊಡ ಕಣ್ಣಂಚಲ್ಲಿ ನೀರು ತರುವಷ್ಟು ಅದ್ಬುತ ರೀತಿಯಲ್ಲಿ ಕನ್ನಡ ಅಭಿಮಾನವನ್ನು ತೋರಿಸುತ್ತಾ ಹಾಗೂ ಆಕೆಯನ್ನು ನೆನಪಿಸಿಕೊಳ್ಳುತ್ತಾ ಏರ್ಪಾಟು ಮಾಡಲಾಗಿತ್ತು. ಇನ್ನು ಅಪರ್ಣಾ ಅವರಿಗಾಗಿ ಅವರ ಪತಿ ಕೊಡ ಹಾಡು ಹೇಳುತ್ತಾ ನೆನೆಪಿಸಿಕೊಂಡರು.

( video credit : SStv)