ನನ್ನ ನಿಜವಾದ ಅಪ್ಪ ಯಾರು ಎಂದು ತಿಳಿಸಿದ ಅನುಶ್ರೀ: ಯಾರದು ನೋಡಿ ?

ನನ್ನ ನಿಜವಾದ ಅಪ್ಪ ಯಾರು ಎಂದು  ತಿಳಿಸಿದ  ಅನುಶ್ರೀ:  ಯಾರದು ನೋಡಿ ?

ನಿರೂಪಕಿ ಎಂದ ಕೂಡಲೇ ನೆನಪಾಗುವುದು ಎಂದ್ರೆ ಅದು ಅನುಶ್ರೀ ಎಂದರೆ ತಪ್ಪಾಗಲಾರದು. ಮಂಗಳೂರಿನ ಮೂಲದವರು ಆದರೂ ಕೊಡ ಕನ್ನಡ ಸ್ಪಷ್ಟವಾಗಿ ಮಾತನಾಡುತ್ತಿದ್ದ ನಿರೂಪಕಿ ಎಂದ್ರೆ ಅದು ಅನುಶ್ರೀ, ಇನ್ನೂ ಅನುಶ್ರೀ  11 ನವೆಂಬರ್ 1988, ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಿಸಿದವರು. ಅವರು ಕನ್ನಡ ಚಿತ್ರರಂಗದಲ್ಲಿ ಪ್ರಮುಖ ನಟಿ ಹಾಗೂ ಟಿವಿ ನಿರೂಪಕಿಯಾಗಿ ಗುರುತಿಸಿಕೊಂಡಿದ್ದಾರೆ. ಅನುಶ್ರೀ ತಮ್ಮ ವೃತ್ತಿ ಜೀವನವನ್ನು ಮೊದಲಿಗೆ ಆರ್ ಜೆ ಆಗಿ ಆರಂಭ ಮಾಡುತ್ತಾರೆ ಅದಾದ ಬಳಿಕ  ಕನ್ನಡ ಟಿವಿ ನಿರೂಪಕಿ ಆಗಿ ಪ್ರಾರಂಭಿಸಿದರು. 2011ರಲ್ಲಿ, ಅವರು "ಮಾನಸಾರೆ" ಚಿತ್ರದ ಮೂಲಕ ಸಿನಿಮಾರಂಗದಲ್ಲಿ ಪಾದಾರ್ಪಣೆ ಮಾಡಿದರು. ಈ ನಂತರ, ಹಲವು ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ. 

ಈಗಲೂ ಜೀ ಕನ್ನಡಲ್ಲಿ ಬರುವ ಎಲ್ಲಾ ಕಾರ್ಯಕ್ರಮಗಳನ್ನು ಇವರೆ ನಡೆದುಕೊಳ್ಳುತ್ತಿದ್ದು ಸಿನಿಮಾ ಈವೆಂಟ್ ಗಳನ್ನು ಕೊಡ ಇವರೆ ನೋಡಿಕೊಳ್ಳುತ್ತಾರೆ. ಅನುಶ್ರೀ ಅವರ ತಾಯಿ ಶಶಿಕಲಾ ಹಾಗೂ ಸಹೋದರನಾದ ಕಿರಣ್ ಎಂಬ ಒಬ್ಬ ಸಹೋದರ ಇದ್ದಾರೆ. ಇನ್ನು ಈಕೆ ಈಗ ಇರುವ ಜೀವನಕ್ಕೂ ಈ ಹಿಂದೆ ಪಡುತ್ತಿದ್ದ ಕಷ್ಟಕ್ಕೆ ಸೂಕ್ತ ಪ್ರತಿಫಲ ದೊರಕಿದೆ ಎಂದ್ರೆ ತಪ್ಪಾಗಲಾರದು. ಈ ಹಿಂದೆ ತಾವು ತನ್ನ ತಾಯಿಯೇ ಮನೆಯ ಎಲ್ಲಾ ಜವಾಬ್ದಾರಿಗಳನ್ನು ಹೊತ್ತುಕೊಂಡಿದ್ದ ಸಲುವಾಗಿ ಬಹಳ ಸಣ್ಣ ವಯಸ್ಸು ಅಂದರೆ ಶಾಲೆಗೆ ಹೋಗುವ ಸಮಯದಲ್ಲಿ ಇವರು ಕೆಲ ಸಣ್ಣ ಪುಟ್ಟ ಕೆಲ್ಸ ಮಾಡುತ್ತಾ ತನ್ನ ತಾಯಿಗೆ ನೇರವಾಗಿ ನಿಲ್ಲುತ್ತಿದ್ದರು.

ತನ್ನ ತಂದೆಯನ್ನು ನೋಡದೆ ಇರುವ ಅನುಶ್ರೀ ಅವರು ಪ್ರತಿ ವೇದಿಕೆಯಲ್ಲಿ ಕೊಡ ತನ್ನ ತಾಯಿಯೇ ನನ್ನ ಶಕ್ತಿ ಸ್ಪೂರ್ತಿ ಎಂದು ಹೇಳುತ್ತಾರೆ ಹಾಗೆಯೇ ಎಲ್ಲರ ಜೀವನದಲ್ಲಿ ತಂದೆಯೇ ಅವರ ಸುಪರ್ ಹೀರೋ ಆಗಿರುತ್ತಾರೆ ಆದರೆ ನನಗೆ ಆ ಭಾಗ್ಯ ಇಲ್ಲ ಎಂದು ಕೊಡ ತಿಳಿಸಿದ್ದಾರೆ.ನನಗೆ ನಮ್ಮ ತಾಯಿಯೇ ನನ್ನ ನಿಜವಾದ ತಂದೆ ಸಹ ಆಗಿದ್ದಾರೆ .ಎಷ್ಟೋ ಸಲ ಊಟ ಇಲ್ಲದೇ ಅಂಗನವಾಡಿಯಲ್ಲಿ ನನ್ನ ತಮ್ಮನಿಗೆ ನೀಡಿದ್ದ ಪೌಷ್ಟಿಕ ಆಹಾರದ ಪುಡಿಯನ್ನು ಬಳಸಿ ರೊಟ್ಟಿ ರೀತಿ ಮಾಡಿ ತಿಂದಿದ್ದೇವೆ.. ಅಂತಹ ಕಷ್ಟದ ಸಮಯದಲ್ಲಿ ಬರದವರು ಈಗ ಬಂದು ನಾನು ನಿಮ್ಮ ತಂದೆ ಎಂದರೇ ನಾನು ಒಪ್ಪಿಕೊಳ್ಳುವುದಿಲ್ಲ.. ಎಂದು ಆಂಕರ್‌ ಅನುಶ್ರೀ ಮೊದಲ ಬಾರಿಗೆ ತಂದೆಯ ಬಗ್ಗೆ ಮಾತನಾಡಿದ್ದಾರೆ.  

ಆದರೆ ಸಣ್ಣ ವಯಸ್ಸಿನಲ್ಲಿ ಊಟಕ್ಕೆ ಇಲ್ಲದ ಕಾರಣದಿಂದ ಅವರ ತಮ್ಮನಿಗೆ ಶಾಲೆಯಲ್ಲಿ ಕೊಡುವ ಆಹಾರವನ್ನು ತಾವು ಮನೆಯಲ್ಲಿ ತಿನ್ನುವ ಪರಿಸ್ಥಿತಿಯಲ್ಲಿ ಇದ್ದೆವು ಆದ್ರೆ ಇಂದು ದೇವರ ಕೃಪೆಯಿಂದ ನಾನು ಸಂತೋಷವಾಗಿ ಇದ್ದೇವೆ ಎಂದು ಹೇಳಿದ್ದು ಉಂಟು. ಇನ್ನು ಅನುಶ್ರೀ ಅವರು ತಮ್ಮ ಸ್ತಾಯಿಯ ಪ್ರತಿಭೆ ಮತ್ತು ಕನ್ನಡದ ಚಿತ್ರರಂಗದಲ್ಲಿ ತಮ್ಮದೇ ಆದ ಸ್ಥಾನವನ್ನು ಗಳಿಸಿದ್ದಾರೆ ಎಂದು ಹೇಳಬಹುದು.